• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಶಿವಣ್ಣ, ರಮ್ಯಾ, ಧ್ರುವ ಸರ್ಜಾ ಸಾಥ್‌ ಕೊಟ್ಟ ‘ಪಪ್ಪಿ’ ಸಿನಿಮಾಗೆ 50 ದಿನದ ಸಂಭ್ರಮ

ಪ್ರತಿಧ್ವನಿ by ಪ್ರತಿಧ್ವನಿ
June 21, 2025
in Top Story, ಇದೀಗ, ಕರ್ನಾಟಕ, ಜೀವನದ ಶೈಲಿ, ವಾಣಿಜ್ಯ, ವಿಶೇಷ, ಸಿನಿಮಾ
0
Share on WhatsAppShare on FacebookShare on Telegram

ವಿಶೇಷ ಕಥಾಹಂದರ ಹೊಂದಿದ್ದ ‘ಪಪ್ಪಿ’ ಸಿನಿಮಾ (Puppy Movie) ಬಿಡುಗಡೆಯಾಗಿ 50 ದಿನ ಪೂರೈಸಿದೆ. ಈ ಖುಷಿಯಲ್ಲಿ ಚಿತ್ರತಂಡ ಇತ್ತೀಚೆಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಂಡಿತ್ತು. ‌50 ದಿನ ಸಂಭ್ರಮದ ಕಾರ್ಯಕ್ರಮಕ್ಕೆ ನಿರ್ಮಾಪಕರಾದ ಯೋಗಿ ಜಿ ರಾಜ್‌(Yogi G raj), ನಾಯಕಿ ಸಂಜನಾ ಆನಂದ್‌ (Sanjana Anand) ಸಾಥ್ ಕೊಟ್ಟರು. ಇದೇ ವೇಳೆ ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಹಾಜರಾಗಿತ್ತು.

ADVERTISEMENT

ಈ ವೇಳೆ ಮಾತನಾಡಿದ ಕೆಆರ್‌ ಜಿ ಸ್ಟುಡಿಯೋದ ಯೋಗಿ ಜಿ ರಾಜ್, ಪಪ್ಪಿ ಸಿನಿಮಾ ಒಂದೊಳ್ಳೆ ಜರ್ನಿ. ಚಿತ್ರದ ಟ್ರೇಲರ್‌ ನ್ನು ಸತ್ಯಹೆಗ್ಡೆ (Sathya Hegde) ಸರ್‌ ಕಳಿಸಿದ್ರು. ನೋಡಿ ಚೆನ್ನಾಗಿದೆ ಎಂದರು. ಟ್ರೇಲರ್‌ ಕಂಟೆಂಟ್‌ ಇಷ್ಟವಾಗಿ ಡೈರೆಕ್ಟರ್‌ ನಂಬರ್‌ ತೆಗೆದುಕೊಂಡು ಮಾತನಾಡಿದೆ. ಬಳಿಕ ಸಿನಿಮಾ ನೋಡಿದೆ. ಮಾಸ್‌ ಕಂಟೆಂಟ್‌ ಇಲ್ಲದೇ ಎಮೋಷನ್‌ ಇಟ್ಕೊಂಡು ಬರೆದ ಸಿನಿಮಾ. ಆ ಜಾನರ್‌ ಯಾರು ಟಚ್‌ ಮಾಡಿರಲಿಲ್ಲ. ಉತ್ತರ ಕರ್ನಾಟಕದ ಭಾಷೆ ಎಷ್ಟು ಸೊಗಸು ಅನ್ನೋದು ಸಿನಿಮಾದಲ್ಲಿದೆ. ನಿರ್ದೇಶಕರು ಯೋಚನೆ ಮಾಡಿ ಸಿನಿಮಾ ಮಾಡಿದ್ದಾರೆ. ಅದಕ್ಕೆ ನಿರ್ಮಾಪಕರು ಸಾಥ್‌ ಕೊಟ್ಟಿದ್ದಾರೆ. ಈ ಕಾಲಘಟ್ಟದಲ್ಲಿ ಐವತ್ತು ದಿನ ಸಿನಿಮಾ ಓಡುವುದು ಕಷ್ಟ. ಪಪ್ಪಿ ಚಿತ್ರ 50 ದಿನ ಓಡಿದೆ. ನನ್ನ ಕೆಆರ್‌ ಜಿ ಕಡೆಯಿಂದ ರಿಲೀಸ್‌ ಆದ ಸಿನಿಮಾ ಅನ್ನೋ ಖುಷಿ ಇದೆ ಎಂದು ತಿಳಿಸಿದರು.

ನಿರ್ದೇಶಕರಾದ ಆಯುಷ್‌ ಮಲ್ಲಿ ಮಾತನಾಡಿ, ಪಪ್ಪಿ ಸಿನಿಮಾ ಐವತ್ತು ದಿನ ಆಗುತ್ತದೆ ಎಂದು ಕನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಜನ ಮೆಚ್ಚಿಕೊಂಡಿರುವುದು ಖುಷಿ ಕೊಟ್ಟಿದೆ. ಕೆಆರ್‌ ಜಿ ಸಂಸ್ಥೆ ನಮಗೆ ಬಹಳ ಬೆಂಬಲವಾಗಿ ನಿಂತರು. ಈ ಐವತ್ತು ದಿನ ನಡೆಯಲು ಅವರು ಕೂಡ ಕಾರಣ ಎಂದು ಸಂತಸ ಹಂಚಿಕೊಂಡರು.

ಈ ಹಿಂದೆ ಫಸ್ಟ್‌ ಲವ್‌ ಸಿನಿಮಾ ಮಾಡಿದ್ದ ಆಯುಷ್‌ ಮಲ್ಲಿ ಪಪ್ಪಿ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಇಬ್ಬರು ಬಾಲಕರು ಹಾಗೂ ಶಾನ್ವದ ಸುತ್ತ ಸಾಗುವ ಚಿತ್ರವನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಅರ್ಪಿಸುತ್ತಿದ್ದರು. ಮೇ 1ಕ್ಕೆ ಈ ಚಿತ್ರ ತೆರೆಗೆ ಬಂದಿದ್ದ ಪಪ್ಪಿಯನ್ನು ಶಿವಣ್ಣ(Shivanna), ರಮ್ಯಾ (Ramya) ಸೇರಿದಂತೆ ಚಿತ್ರರಂಗದ ಹಲವರು ನೋಡಿ ಮೆಚ್ಚಿಕೊಂಡಿದ್ದರು. ಉತ್ತರ ಕರ್ನಾಟಕ ಭಾಷೆಯಲ್ಲಿ ಸ್ಥಳೀಯ ಕಲಾವಿರಾದ ಜಗದೀಶ್ ಕೊಪ್ಪಳ(Jagadheesh Koppal), ಆದಿತ್ಯ ಸಿಂಧನೂರು(Adithya Sindanur), ಅದ್ರುಷ್ಟ ಸಂಕನೂರು, ಋತ್ವಿಕ್ ಬಳ್ಳಾರಿ, ದುರುಗಪ್ಪ ಕಾಂಬ್ಳಿ, ರೇಣುಕಾ, ಆರಾವ ಲೋಹಿತ್ ನಾಗರಾಜ್ ಚಿತ್ರದಲ್ಲಿ ನಟಿಸಿದ್ದಾರೆ.

ಶ್ರೀಧರ್ ಕಶ್ಯಪ್, ರವಿ ಬಿಲ್ಲೂರ್ ಚಿತ್ರಕ್ಕೆ ಸಂಗೀತ ಒದಗಿಸಿದ್ದು, ಬಿ ಸುರೇಶ್‌ ಬಾಬು ಕ್ಯಾಮೆರಾ ಹಿಡಿದಿದ್ದು, ವಿಶ್ವ ಎನ್‌ ಎಂ ಸಂಕಲನ ಪಪ್ಪಿ ಚಿತ್ರಕ್ಕಿದೆ. ಹಾಸ್ಯದ ಜೊತೆಗೆ ಗಂಭೀರ ವಿಷಯದ ಮೇಲೆ ಬೆಳಕು ಚೆಲ್ಲುವ ಪಪ್ಪಿಗೆ ಅಂದಪ್ಪ ಸಂಕನೂರು ಬಂಡವಾಳ ಹೂಡಿದ್ದಾರೆ. ಕೆಆರ್‌ ಜಿ ಪಪ್ಪಿ ಚಿತ್ರವನ್ನು ರಾಜ್ಯಾದ್ಯಂತ ವಿತರಣೆ ಮಾಡಿತ್ತು. ಪಪ್ಪಿಗೆ ಕನ್ನಡ ಚಿತ್ರರಂಗದ ಅನೇಕರು ಬೆಂಬಲ ನೀಡಿದ್ದರು. ರಮ್ಯಾ, ಧ್ರುವ ಸರ್ಜಾ, ವಿನಯ್ ರಾಜ್​ಕುಮಾರ್, ರಾಜ್‌ ಬಿ ಶೆಟ್ಟಿ, ನವೀನ್‌ ಶಂಕರ್ ಮುಂತಾದವರು ಈ ಸಿನಿಮಾಗೆ ನೀಡಿದ ಬೆಂಬಲಕ್ಕೆ ಚಿತ್ರತಂಡದವರು ಧನ್ಯವಾದಗಳನ್ನು ಅರ್ಪಿಸಿದೆ.

Tags: Dhruva Sarjakannada cinemaKRG Studiosnaveen shankarpuppy kannada movieRaj B ShettyramyasandalwoodSridharvinay rajkumar
Previous Post

ನಟ ಕಿಚ್ಚ ಸುದೀಪ್‌ ಹೇಳಿಕೆಗೆ ಡಿಕೆಶಿ ಇದೆಂಥಾ ಮಾತು!

Next Post

KVN ಪ್ರೊಡಕ್ಷನ್ಸ್ ನಿಂದ ಬರ್ತಡೇ ಬಾಯ್ ದಳಪತಿ ವಿಜಯ್ ಗೆ ಭರ್ಜರಿ ಗಿಫ್ಟ್.

Related Posts

ನಿಯಮಬಾಹಿರ ವಾಹನ ತಪಾಸಣೆ ನಿಲ್ಲಿಸಲು ಡಿಜಿಪಿಗೆ ಮನವಿ
ಕರ್ನಾಟಕ

ನಿಯಮಬಾಹಿರ ವಾಹನ ತಪಾಸಣೆ ನಿಲ್ಲಿಸಲು ಡಿಜಿಪಿಗೆ ಮನವಿ

by ಪ್ರತಿಧ್ವನಿ
April 13, 2026
0

ಬೆಂಗಳೂರು, ಏ. 09: ರಾಜ್ಯದಲ್ಲಿ ಗೃಹ ರಕ್ಷಕದಳ ಹಾಗೂ ಸಶಸ್ತ್ರ ಪೊಲೀಸ್ ಸಿಬ್ಬಂದಿಗಳಿಂದ ನಡೆಯುತ್ತಿರುವ ನಿಯಮಬಾಹಿರ ವಾಹನ ತಪಾಸಣೆಗಳನ್ನು ತಕ್ಷಣ ನಿಲ್ಲಿಸುವಂತೆ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ...

Read moreDetails
‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?

‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?

April 12, 2026
ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ

ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ

April 12, 2026
“ಪೈಪೋಟಿಗಿಂತ ಮೀರಿದ ಸಹೋದರಿಯರ ಬಂಧ: ಆಶಾ–ಲತಾ ಸಂಬಂಧದ ಅಪರೂಪದ ಕಥೆ”

“ಪೈಪೋಟಿಗಿಂತ ಮೀರಿದ ಸಹೋದರಿಯರ ಬಂಧ: ಆಶಾ–ಲತಾ ಸಂಬಂಧದ ಅಪರೂಪದ ಕಥೆ”

April 12, 2026
ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

April 12, 2026
Next Post
KVN ಪ್ರೊಡಕ್ಷನ್ಸ್ ನಿಂದ ಬರ್ತಡೇ ಬಾಯ್ ದಳಪತಿ ವಿಜಯ್ ಗೆ ಭರ್ಜರಿ ಗಿಫ್ಟ್.

KVN ಪ್ರೊಡಕ್ಷನ್ಸ್ ನಿಂದ ಬರ್ತಡೇ ಬಾಯ್ ದಳಪತಿ ವಿಜಯ್ ಗೆ ಭರ್ಜರಿ ಗಿಫ್ಟ್.

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada