ಇಡೀ ವಿಶ್ವವನ್ನೇ ಮತ್ತೊಂದು ಆತಂಕಕ್ಕೆ ದೂಡಿರುವ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ (Israel Iran war ) ದಿನೇ ದಿನೇ ಉಗ್ರ ರೂಪ ಪಡೆದುಕೊಳ್ಳುತ್ತಿದೆ. ಇರಾನ್ ಅಣು ಸ್ಥಾವರಗಳು (Iran nuclear plants) ಸೇರಿದಂತೆ ಅನೇಕ ಕಡೆಗಳಲ್ಲಿ ಇಸ್ರೇಲ್ ರಣಭೀಕರ ದಾಳಿ ನಡೆಸಿದ್ದು ಇರಾನ್ ಬೆಚ್ಚಿ ಬಿದ್ದಿದೆ.

ಈ ಮಧ್ಯೆ ಇರಾನ್ನ ಸರ್ವೋಚ್ಚ ನಾಯಕ, ಇರಾನ್ ಅಧ್ಯಕ್ಷ ಅಲಿ ಖಮೇನಿ (Ali khameni) ಅಜ್ಞಾತ ಸ್ಥಳಕ್ಕೆ ಶಿಫ್ಟ್ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಸುರಕ್ಷಿತ ಸ್ಥಳದಲ್ಲಿದ್ದ ಇರಾನ್ ಅಧ್ಯಕ್ಷ ಅಲಿ ಖಮೇನಿ ಅವರನ್ನು ಇದೀಗ ಇಸ್ರೇಲ್ ದಾಳಿ ಭೇಟಿಯ ಹಿನ್ನಲೆಯಲ್ಲಿ ಅತ್ಯಂತ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ಇದಕ್ಕೆ ಕಾರಣ ಇರಾನ್ ಗೇಬಿರುವ ಮೊಸಾದ್ ಭಯ. ಹೌದು ಇಸ್ರೇಲ್ ನ ಮೊಸಾದ್ ಗುಪ್ತರ ಸಂಸ್ಥೆ ಇರಾನ್ ಅಧ್ಯಕ್ಷ ಅಲಿ ಖಮೇನಿ ಅಡಗಿ ಕುಳಿತಿದ್ದ ಅಡಗುತಾಣವನ್ನು ಕಂಡುಹಿಡಿದಿದ್ದಾರೆ ಎನ್ನಲಾಗಿದ್ದು , ಇದನ್ನರಿತ ಇರಾನ್ ಅಲಿ ಅವರನ್ನು ಬೇರೆಡೆಗೆ ಶಿಫ್ಟ್ ಮಾಡಿದೆ.

ಇನ್ನು ಅಂತರರಾಷ್ಟ್ರೀಯ ವರದಿಗಳ ಪ್ರಕಾರ ಇಸ್ರೇಲ್ ದಾಳಿಯಿಂದ ಇರಾನ್ ಅಧ್ಯಕ್ಷ ಅಲಿ ಖಮೇನಿ ತುಂಬಾ ಭಯಭೀತರಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಇರಾನ್ ನಾಗರೀಕರು ತಮ್ಮ ಅಧ್ಯಕ್ಷನ ಮೇಲೆಯೆ ಕೋಪಗೊಂಡಿದ್ದು, ದೇಶದ ಜನರ ರಕ್ಷಣೆ ಮಾಡಬೇಕಿದ್ದ ನಾಯಕ ಹೀಗೆ ಅಜ್ಞಾತ ಸ್ಥಳದಲ್ಲಿ ಭಯದಿಂದ ಕೂತರೆ ಹೇಗೆ ಎಂದು ಇರಾನ್ ನಲ್ಲೇ ಆಕ್ರೋಶ ವ್ಯಕ್ತವಾಗಿದೆ.