ಪಾಕಿಸ್ತಾನಕ್ಕೆ ಭಾರತೀಯ ಸೇನೆ ನೀಡ್ತಿರೋ ಒಂದೊಂದು ಹೊಡೆತಕ್ಕೂ ಶತ್ರುರಾಷ್ಟ್ರ ತತ್ತರಿಸಿ ಹೋಗ್ತಿದೆ. ಮೊನ್ನೆ ಪಾಕಿಸ್ತಾನದ 9 ಉಗ್ರ ಶಿಬಿರಗಳ ಮೇಲಿನ ದಾಳಿ ಮಾಡಿದ ಬಳಿಕ, ಪಾಕಿಸ್ತಾನ ಭಾರತದ 15 ನಗರಗಳನ್ನ ಟಾರ್ಗೆಟ್ ಮಾಡಿ ದಾಳಿ ಮಾಡಲು ಮುಂದಾಗಿತ್ತು. ಪಾಕ್ ದಾಳಿ ಯತ್ನವನ್ನ ಭಾರತೀಯ ಸೇನೆ ಸಂಪೂರ್ಣ ವಿಫಲಗೊಳಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹಾಗು ಕರ್ನಲ್ ಸೋಫಿಯಾ ಖುರೇಷಿ, ಪಾಕಿಸ್ತಾನಿಗಳ ದಾಳಿ ಯತ್ನದ ಬಗ್ಗೆ ಇಂಚಿಂಚೂ ಮಾಹಿತಿ ನೀಡಿದ್ದಾರೆ.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ್ದ ದಾಳಿಗೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನೀಡಿದ್ದ ಕೋಮುವಾದಿ ಹೇಳಿಕೆಯೇ ಕಾರಣ ಅಂತ ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಸ್ಪಷ್ಟಪಡಿಸಿದ್ದಾರೆ. ಏಪ್ರಿಲ್ 16 ರಂದು ಜನರಲ್ ಅಸಿಮ್ ಮುನೀರ್ ಕಾಶ್ಮೀರದ ಬಗ್ಗೆ ಪಾಕಿಸ್ತಾನದ ನಿಲುವನ್ನು ಪುನರುಚ್ಚರಿಸಿದ್ದರು. ಭಾರತದ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿದ್ದು ಉಗ್ರರ ದಾಳಿಗೆ ಸಂಬಂಧ ಇದೆ ಎನ್ನುವುದು ಭಾರತದ ವಾದ.

ಆಪರೇಷನ್ ಬಗ್ಗೆ ಮಾಹಿತಿ ನೀಡ್ತಿರೋ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹಾಗೂ ಕರ್ನಲ್ ಸೋಫಿಯಾ ಖುರೇಷಿ ಯುನಿಫಾರ್ಮ್ ಭಾರಿ ಚರ್ಚೆಯಲ್ಲಿದೆ. ಮಾತನಾಡದೇ ಯುದ್ಧದ ಮುನ್ಸೂಚನೆ ಕೊಟ್ರಾ ? ಎಂಬ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ. ನಿನ್ನೆ ಉಗ್ರರ ತಾಣಗಳ ಮೇಲೆ ದಾಳಿ ಮಾಡಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡುವಾಗ ಸೇನಾ ಯೂನಿಫಾರ್ಮ್ ಹಾಕಿದ್ದರು. ಅಫೀಷಿಯಲಿ ಸೇನಾ ಡ್ರೆಸ್ನಲ್ಲಿ ಬಂದಿದ್ದ ಅಧಿಕಾರಿಗಳು, ಇವತ್ತು ಬೇರೆ ಯೂನಿಫಾರ್ಮ್ ಹಾಕಿದ್ದರು. ಅಂದರೆ ಯುದ್ಧಕ್ಕೆ ಹೋಗುವ ರೀತಿ ತಯಾರಾಗಿದ್ದ ಮಹಿಳಾ ಅಧಿಕಾರಿಗಳು. ಏನನ್ನೂ ಮಾತನಾಡದೇ ಯುದ್ಧದ ಮುನ್ಸೂಚನೆ ಕೊಟ್ಟಿದ್ದಾರೆ ಎನ್ನಲಾಗ್ತಿದೆ.

‘ಆಪರೇಷನ್ ಸಿಂದೂರ್’ ಭಾಗ 2 ಶುರುವಾಗಿರುವ ಬಳಿಕ ಪಾಕ್ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಭಾರತದ IPL ರೀತಿಯಲ್ಲೇ ನಡೆಯುವ PSL ಕ್ರೀಡಾಕೂಟದ ಇಂದಿನ ಪಂದ್ಯ ರದ್ದಾಗಿದೆ. ಇನ್ನು ಮುಂದಿನ ಎರಡು ದಿನಗಳ ಕಾಲ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಪಾಕ್ನ ಲಾಹೋರ್ ಸೇರಿದಂತೆ ಎಲ್ಲೆಂದರಲ್ಲಿ ಸ್ಫೋಟಗಳು ಸಂಭವಿಸುತ್ತಿವೆ. ಸರಣಿ ಡ್ರೋನ್ ಸ್ಫೋಟದಿಂದ ಪಾಕ್ ಪರದಾಡಿದೆ. ಪಾಕ್ನ ಹಾದಿ ಬೀದಿಯಲ್ಲಿ ಭಾರೀ ಚರ್ಚೆ ಆಗ್ತಿದೆ. ಭಾರತದ ದಾಳಿಗೆ ಪಾಕ್ನ ರಡಾರ್ ವ್ಯವಸ್ಥೆಗಳೇ ಸ್ಫೋಟವಾಗಿವೆ. ನಮ್ಮನ್ನು ರಕ್ಷಣೆ ಮಾಡಿ ಅಂತಾ ಪಾಕ್ ಸಂಸದರೇ ಆಗ್ರಹ ಮಾಡ್ತಿದ್ದಾರೆ.