ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿ ಸರ್ಕಾರದ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿತ್ತು. ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪೇ ಸಿಎಂ ಎಂದು ಪೋಸ್ಟರ್ ಹಾಕುವ ಮೂಲಕ ಭಾರೀ ಗಮನ ಸೆಳೆದಿತ್ತು. ಆ ಬಳಿಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ನ್ಯಾಯಾಂಗ ತನಿಖೆಗೂ ನಿರ್ಧಾರ ಮಾಡಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ರಚನೆ ಮಾಡಲಾಗಿತ್ತು. ಇದೀಗ ವರದಿ ಸರ್ಕಾರದ ಕೈ ಸೇರಿದೆ. ವಿರೋಧ ಪಕ್ಷ ಬಿಜೆಪಿಯ ಕಣ್ಣು ಕೆಂಪಾಗುವಂತೆ ಆಗಿದೆ.

ಕಾಂಗ್ರೆಸ್ ಆರೋಪ ಮಾಡಿದಂತೆ ಈ ಹಿಂದಿನ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು ಅನ್ನೋ ಆರೋಪ ಮಾಡಿದ್ದಕ್ಕೆ ಸಾಕ್ಷಿ ಎನ್ನುವಂತೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ವರದಿ ಕೈ ಸೇರಿದೆ. ಆದರೆ ಈ ಬಗ್ಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, 40 ಪರ್ಸೆಂಟ್ ತನಿಖಾ ವರದಿ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ್ದು, ನಾಗಮೋಹನ್ ದಾಸ್ ವರದಿ ರಾಜಕೀಯ ಪ್ರೇರಿತ ಎನ್ನಲಾಗಿದೆ. ಶೇಕಡ 40 ರಷ್ಟು ಗೋಲ್ಮಾಲ್ ಮಾಡುವ ಸರ್ಕಾರ ಅನ್ನೋದನ್ನು ವರದಿಯಲ್ಲಿ ತೋರಿಸಿದ್ದಾರೆದ.

ತನಿಖೆ ಮಾಡಿದ ಮೇಲೆ ಅದೇಗೆ 40 ಪರ್ಸೆಂಟ್ ಅಂತಾ ವರದಿಯಲ್ಲಿ ಬಂತು..? ಎಂದು ಆರ್ ಅಶೋಕ್ ಪ್ರಶ್ನೆ ಮಾಡಿದ್ದಾರೆ. ತನಿಖೆಗೆ ಯಾವ ದಾಖಲೆ ಕೊಟ್ಟಿದ್ದಾರೆ. ಯಾವಾಗ ಕಾಂಗ್ರೆಸ್ ಬಂದ್ರೂ ನಾಗಮೋಹನ್ ದಾಸ್ ಅವರನ್ನೇ ಮಾಡ್ತಾರೆ. ಅವರು ಕಾಂಗ್ರೆಸ್ ಹೇಗೆ ಹೇಳುತ್ತೆ ಅದರಂತೆ ವರದಿ ಕೊಡ್ತಾರೆ. ಇವರು ತನಿಖಾ ಏಜೆನ್ಸಿಯಲ್ಲ, ಲೋಕಾಯುಕ್ತದಲ್ಲಿ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಆದರೂ ಇವರಿಗೆ ಹೇಗೆ 40 ಪರ್ಸೆಂಟ್ ಅಂತ ಬಂತು, ಅರ್ಕಾವತಿ ಇದ್ದಂತೆ ಇದು ಕೂಡ. ಹೈಕೋರ್ಟ್ನಲ್ಲೂ ವಿಚಾರಣೆ ನಡೆಯುತ್ತಿದೆ. ಲೋಕಾಯುಕ್ತದವರು ಇಲ್ಲ ಅಂದಿದ್ದಾರೆ. ಇವರು ಹೇಗೆ 40 % ಅಂತ ಕೊಟ್ರು ಅಂತಾ ನಾಗಮೋಹನ್ ದಾಸ್ ವರದಿ ಬಗ್ಗೆ ಅಶೋಕ್ ಕಿಡಿಕಾರಿದ್ದಾರೆ.