ವಿಧಾನಸಭೆಯಲ್ಲಿ (Vidhanasoudha) ಇಂದಿನಿಂದ ಬಜೆಟ್ (Budget) ಮೇಲಿನ ಚರ್ಚೆ ಆರಂಭವಾಗಲಿದೆ. ಇಂದು ಬಜೆಟ್ ಮೇಲೆ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರು ಮಾತನ್ನಾಡಲಿದ್ದಾರೆ. ಈಗಲೇ ಬಿಜೆಪಿ (Bjp) ಬಜೆಟ್ ಅನ್ನು ಹಲಾಲ್ ಬಜೆಟ್ (Halal budget), ಮುಸಲ್ಮಾನರ ಓಲೈಕೆಯ ಬಜೆಟ್ ಎಂದು ಟೀಕಿಸಿದ್ದು, ಸದನದಲ್ಲೂ ಇದೇ ಚರ್ಚೆ ಜೋರಾಗುವ ಸಾಧ್ಯತೆಯಿದೆ.

ಮಾರ್ಚ್ 7ರ ಕಳೆದ ಶುಕ್ರವಾರ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿನೆ ಮಾಡಿದ್ದು, ನಿನ್ನೆಯೇ ಬಜೆಟ್ ಮೇಲೆ ಚರ್ಚೆ ಆರಂಭಿಸಬೇಕಿತ್ತು. ಆದ್ರೆ ಗ್ಯಾರಂಟಿ ಗದ್ದಲದ ಕಾರಣ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಇಂದಿನಿಂದ ಬಜೆಟ್ ಮೇಲಿನ ಚರ್ಚೆಯನ್ನು ಸ್ಪೀಕರ್ ಕೈಗೆತ್ತಿಕೊಳ್ಳಲಿದ್ದಾರೆ.
ಈ ಮಧ್ಯೆ, ಸದನದಲ್ಲಿ ಖಾಸಗಿ ವಿಧೇಯಕಗಳು ಮಂಡನೆಯಾಗಳಿದ್ದು, 2024ನೇ ಸಾಲಿನ ಕರ್ನಾಟಕ ಹವಾಮಾನ ಬದಲಾವಣೆ ವಿಧೇಯಕವನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಂಡಿಸಲಿದ್ದಾರೆ.ಇನ್ನು 2024ನೇ ಸಾಲಿನ ಬೇಲೂರು-ಹಳೇಬೀಡು ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ವಿಧೇಯಕವನ್ನು ಶಾಸಕ ಹೆಚ್.ಕೆ ಸುರೇಶ್ ಮಂಡಿನೆ ಮಾಡಲಿದ್ದಾರೆ.