ಸಿಎಂ ಸಿದ್ದರಾಮಯ್ಯ ( CM Siddaramaiah ) ನವರು ಕೊನೆ ಬಜೆಟ್ ಎಂದು ಹೇಳಿದ ಬಿಜೆಪಿ ನಾಯಕರಿಗೆ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ( MLC Yathindra Siddaramaiah ) ತಿರುಗೇಟು ಕೊಟ್ಟಿದ್ದಾರೆ.

ಸಿಎಂ ಸಿದ್ದರಾಮಯ್ಯ ನವರು (CM Siddaramaiah) ಮುಂದೆಯೂ ಬಜೆಟ್ ಮಂಡಿಸುತ್ತಾರೆ. ಒಟ್ಟು 19 ಬಜೆಟ್ಗಳನ್ನ ಸಿದ್ದರಾಮಯ್ಯ ಮಂಡಿಸುತ್ತಾರೆ. ಇದರಲ್ಲಿ ಯಾವ ಸಂದೇಹಗಳು ಬೇಡ. ಮುಂದಿನ ಬಜೆಟ್ ಅವರದ್ದೇ, ಅದರ ನಂತರದ್ದು ಅವರದೇ. ಹೈಕಮಾಂಡ್ ಮತ್ತು ಶಾಸಕರು ಸಿದ್ದರಾಮಯ್ಯ ಪರ ಇದ್ದಾರೆ. 19 ಬಜೆಟ್ ಮಂಡಿಸಿ ಸಿದ್ದರಾಮಯ್ಯನವರು ದಾಖಲೆ ಮಾಡ್ತಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.