ರಾಜ್ಯದಲ್ಲಿ ಬಜೆಟ್ ಅಧಿವೇಶಕ್ಕೆ (Budget session) ಕೌಂಟ್ ಡೌನ್ ಶುರುವಾಗಿದ್ದು, ರಾಜ್ಯ ಸರ್ಕಾರದ ವೈಫಲ್ಯಗಳನ್ನ ಮುಂದಿಟ್ಟುಕೊಂಡು ಕಾಂಗ್ರೆಸ್ ಗೆ (Congress) ಸೆಡ್ಡು ಹೊಡೆಯಲು ಬಿಜೆಪಿ ವಿಪಕ್ಷ ನಾಯಕ ಆರ್ .ಅಶೋಕ್ (R Ashok) ತಯಾರಿ ನಡೆಸ್ತಿದ್ದಾರೆ.

ಆದರೆ ಆರ್.ಅಶೋಕ್‌ಗೆ ಸರ್ಕಾರದ ವಿರುದ್ಧ ಹೋರಾಡಲು ಸ್ವಪಕ್ಷ ನಾಯಕರ ಬೆಂಬಲದ ಬಗ್ಗೆಯೇ ಚಿಂತೆಯಾಗಿದೆ. ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಚರ್ಚೆ ಮಾಡುವ ವೇಳೆ ತಮ್ಮದೇ ಪಕ್ಷದ ನಾಯಕರು ತಮ್ಮ ಬೆನ್ನಿಗೆ ನಿಲ್ತಾರೋ ಇಲ್ವೋ ಎನ್ನುವ ಆತಂಕ ಶುರುವಾಗಿದೆ.

ಈಗಾಗಲೇ ವಿಪಕ್ಷ ನಾಯಕ ಆರ್.ಅಶೋಕ್ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಅವರಿಂದ ಅಂತರ ಕಾಯ್ದುಕೊಂಡಿದ್ದು, ಇದರಿಂದ ಆರ್.ಅಶೋಕ್ ಮೇಲೆ ವಿಜಯೇಂದ್ರ ಆಪ್ತ ಶಾಸಕರು ಅಸಮಾಧಾನಗೊಂಡಿದ್ದಾರೆ. ಹಾಗಾಗಿ ಆರ್.ಅಶೋಕ್‌ಗೆ ಆತಂಕ ಹೆಚ್ಚಾಗಿದೆ ಎನ್ನಲಾಗ್ತಿದೆ.