ರಾಜ್ಯ ಬಿಜೆಪಿಯಲ್ಲಿ ರೆಬೆಲ್ ನಾಯಕರ (Bjp rebels leaders) ಅಸಮಾಧಾನ ಹೆಚ್ಚಾಗಿದ್ದು, ಬಣ ಬಡಿದಾಟ ಹೈ ಕಮಾಂಡ್ (Highcommand) ಅಂಗಳ ತಲುಪಿದೆ. ರಾಜ್ಯ ನಾಯಕರು ಡೆಲ್ಲಿ ಪರೇಡ್ ಮುಂದುವರೆಸಿದ್ದಾರೆ. ಈ ಮಧ್ಯೆ ಇದೀಗ ಈ ನಾಯಕರ ಮೇಲೆ ಡಿಸಿಎಂ ಡಿ.ಕೆ ಶಿವಕುಮಾರ್ (Dcm Dk Shivakumar) ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.

ರಾಜ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕಗೊಂಡ ನಂತರ ಬಿಜೆಪಿಯ ಅಸಮಾಧಾನಿತರಿಗೆ ಡಿಕೆಶಿ ಗಾಳ ಹಾಕಲು ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿಯ ಹಾಲಿ ಶಾಸಕರಿಗೆ ಅನುದಾನದ ಭರವಸೆ ನೀಡಿ, ಬಿ.ಪಿ ಹರೀಶ್ (BP Harish), ಕುಮಾರ್ ಬಂಗಾರಪ್ಪ (Kumar bangarappa) ಮೇಲೆ ಡಿಕೆಶಿ ಕಣ್ಣಿಟ್ಟಿದ್ದಾರೆ.
ಶಿವರಾಮ್ ಹೆಬ್ಬಾರ್ ಮಾದರಿಯಲ್ಲಿ ಕೆಲ ಕಮಲ ಶಾಸಕರಿಗೆ ಆಫರ್ ನೀಡಿದ್ದಾರೆ. ಬಿಜೆಪಿ ಶಾಸಕರಾಗಿದ್ರು, ಕಾಂಗ್ರೆಸ್‌ನಲ್ಲಿ ಗುರುತಿಸಿಕೊಳ್ಳುವಂತೆ ಡಿಕೆ ಸೂಚನೆ ನೀಡಿದ್ದು, ರೆಬಲ್ಸ್ ಮೂಲಕ ಬಿಜೆಪಿ ನಾಯಕರಿಗೆ ಡಿಕೆಶಿ ತಿರುಗೇಟು ನೀಡುವ ಲೆಕ್ಕಚಾರದಲ್ಲಿದ್ದಾರೆ ಎನ್ನಲಾಗುತ್ತಿದೆ.