ರಾಜ್ಯ ಬಿಜೆಪಿ (Bjp) ಭಿನ್ನಮತೀಯರ ಗುಂಪಿನ ಲೀಡರ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basana Gowda patil) ಸದ್ಯ ದೆಹಲಿಯಲ್ಲಿದ್ದು, ಇಂದು ನಾವೆಲ್ಲ ಲಿಂಗಾಯತ ನಾಯಕರು ಹೈಕಮಾಂಡ್ ಭೇಟಿ ಮಾಡುತ್ತೇವೆ, ನಿನ್ನೆ ನಮ್ಮ ಕೆಲವು ನಾಯಕರು ಕೆಲವರನ್ನು ಭೇಟಿಯಾಗಿದ್ದಾರೆ.ಇಂದು ನಾವು ಲಿಂಗಾಯತ ನಾಯಕರು ಭೇಟಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಎಲ್ಲ ಲಿಂಗಾಯತರು ಬಿಎಸ್‌ವೈ (BSY) ಪರವಾಗಿಲ್ಲ,ಯಡಿಯೂರಪ್ಪ (Yadiyurappa) ಅವರು ಆ ಗೌರವ ಉಳಿಸಿಕೊಂಡಿಲ್ಲ. ವಿಜಯೇಂದ್ರ (Vijayendra) ಅವರನ್ನು ರಾಜ್ಯಾಧ್ಯಕ್ಷ ಮಾಡುವುದಕ್ಕೆ ನಮ್ಮ ವಿರೋಧ ಇದೆ. ಇಬ್ಬರು ಮೂವರು ಪೇಮೆಂಟ್ ಸ್ವಾಮಿಗಳು ಅವರ ಜೊತೆಗಿದ್ದಾರೆ ಅಷ್ಟೇ, ವಿಜಯೇಂದ್ರ ಬಿಎಸ್‌ವೈ ಅವರು ನಕಲಿ ಸಹಿ ಮಾಡಿದ್ದಾರೆ ಎಂದು ಯತ್ನಾಳ್ ವಾಗ್ದಾಳಿ ಮುಂದುವರೆಸಿದ್ದಾರೆ.

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ತನಿಖೆ ಮಾಡಲು ಏನು ದಾಡಿ..? ಇವರೆಲ್ಲಾ ಎಲ್ಲ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ.ವಿಜಯೇಂದ್ರ ಕರ್ಮಕಾಂಡ ಬಹಳ ಇದೆ, ಹಲ್ಕಾ ಕೆಲಸ ಬಹಳ ಇದೆ. ಇವರು ಬಹಳಷ್ಟು ಲಿಂಗಾಯತ ನಾಯಕರನ್ನು ಮುಗಿಸಿದ್ರು ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಮೂರ ಅಂಶಗಳನ್ನು ಹೈಕಮಾಂಡ್ ಗಮನಕ್ಕೆ ತರ್ತೆವೆ.ನಮ್ಮ ಪಕ್ಷದ ಒಳಗೆ ಭ್ರಷ್ಟಾಚಾರ, ಕುಟುಂಬ ರಾಜಕಾರಣ ಎಲ್ಲವನ್ನೂ ಅಂತ್ಯ ಮಾಡಬೇಕು ಎಂದ ಅವರು, ಹಿಂದೂಗಳ ಹತ್ಯೆ ಆಯಿತು ಬಿಎಸ್‌ವೈ ಏನ್ ಮಾಡಿದರು..? ಶಿವಮೊಗ್ಗ ದಲ್ಲಿ ಔರಂಗಜೇಬನ ಫೋಟೋ ಹಾಕಿದರು ಏನು ಮಾಡಿದ್ರೆ ಎಂದು ಬಿ ಎಸ್ ವೈ ವಿರುದ್ಧ ಕೆಂಡ ಕಾರಿದ್ದಾರೆ.