ಹೆಚ್ಚು ಜನ ತಮ್ಮ ತ್ವಚೆ ಅದ್ಬುತವಾಗಿ ಕಾಣಿಸಬೇಕು ಕ್ಲಿಯರ್ ಸ್ಕಿನ್ ತಮ್ಮದಾಗ್ಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಆಗಾಗ ಫೇಸ್ ಪ್ಯಾಕ್ ಗಳನ್ನ ಬಳಸ್ತಾರೆ. ಇನ್ನು ಕೆಲವರಂತೂ ತಮ್ಮ ಮನೆಗಳಲ್ಲಿ ಹೋಂ ಮೇಡ್ ಫೇಸ್ ಪ್ಯಾಕ್ ಗಳನ್ನ ತಯಾರಿಸಿಕೊಂಡು ಯೂಸ್ ಮಾಡ್ತಾರೆ. ಉತ್ತಮ ಪರಿಣಾಮಗಳು ಕೂಡ ಬೀಳುತ್ತವೆ ಆದರೆ ಕೆಲವು ಬಾರಿ ಗೊತ್ತೋ ಗೊತ್ತಿಲ್ದೆಯೋ ನಾವು ಬಳಸುವಂತಹ ಒಂದಿಷ್ಟು ಪದಾರ್ಥಗಳು ನಮ್ಮ ತ್ವಚೆಗೆ ಹಾನಿಯನ್ನು ಉಂಟುಮಾಡುತ್ತದೆ. ಹಾಗಿದ್ರೆ ಯಾವ ಪದಾರ್ಥಗಳನ್ನ ಬಳಸುವುದು ಉತ್ತಮವಲ್ಲ ಎಂಬ ಮಾಹಿತಿ ಹೀಗಿದೆ.
ನಿಂಬೆ ರಸ ಮತ್ತು ಸಕ್ಕರೆ
ನಿಂಬೆ ರಸ ಮತ್ತು ಸಕ್ಕರೆಯನ್ನು ಬೆರೆಸಿ ಫೇಸ್ ಪ್ಯಾಕ್ ಅಪ್ಲೈ ಮಾಡುವುದರಿಂದ, ಸ್ಕಿನ್ ರಫ್ ಆಗುತ್ತದೆ . ಹಾಗೂ ಸ್ಕಿನ್ ಡ್ರೈ ಆಗುತ್ತದೆ. ಕೆಲವು ಬಾರಿ ಇದರಿಂದ ಸ್ಕಿನ್ ಪೀಲ್ ಆಗುವುದು ಕೂಡ ಉಂಟು.
ಉಪ್ಪು ಮತ್ತು ಮೊಟ್ಟೆಯ ಬಿಳಿಯ ಭಾಗ
ಎಗ್ ವೈಟ್ ಮುಖಕ್ಕೆ ಹಚ್ಚುವುದರಿಂದ ತ್ವಚೆ ರಫ್ ಆಗುತ್ತದೆ ಹಾಗೂ ಉಪ್ಪು ತ್ವಚೆಯನ್ನ ಡ್ರೈ ಮಾಡುತ್ತದೆ. ಹಾಗೂ ಸ್ಕಿನ್ ಇರಿಟೇಶನ್ ಮತ್ತು ರಫ್ನೆಸ್ ಜಾಸ್ತಿ.
ದಾಲ್ಚಿನ್ನಿ ಮತ್ತು ಜೇನುತುಪ್ಪದ ಮಾಸ್ಕ್
ದಾಲ್ಚಿನ್ನಿ ತ್ವಚೆಯಲ್ಲಿ ಕಿರಿಕಿರಿ, ಕೆಂಪು ಮತ್ತು ಒರಟುತನವನ್ನು ಉಂಟುಮಾಡಬಹುದು, ಹಾಗೂ ಕೆಲವರ ಸೂಕ್ಷ್ಮ ಚರ್ಮಕ್ಕೆ ಈ ಮಾಸ್ಕ್ ಒಳ್ಳೆಯದಲ್ಲ.
ಅರಿಶಿಣ ಮತ್ತು ಮೊಸರು
ಈ ಫೇಸ್ ಪ್ಯಾಕ್ ಅನ್ನು ಹೆಚ್ಚು ಜನ ಬಳಸುತ್ತಾರೆ ಇದನ್ನು ಬಳಸುವುದರಿಂದ ತ್ವಚೆಯ ಹೊಳಪು ಜಾಸ್ತಿಯಾಗುತ್ತದೆ ಆದರೆ ತ್ವಚೆ ಒರಟಾಗುತ್ತದೆ.