ನಟ ಶಿವರಾಜ್ ಕುಮಾರ್ (Shivaraj kumar) ಆರೋಗ್ಯದ ಕುರಿತು ಸಚಿವ ಮಧು ಬಂಗಾರಪ್ಪ (Madhu Bangarappa) ಮಾತನಾಡಿದ್ದಾರೆ. ನಾನು ನಿನ್ನೆ ಡಾಕ್ಟರ್ ಜೊತೆ ಮಾತನ್ನಾಡಿದ್ದೆ. ಇನ್ನು ಆರೇಳು ದಿನ ಚಿಕಿತ್ಸೆ ಪಡೆದು, ಆ ನಂತರ ಅವರು ವಾಪಸ್ ಬರ್ತಾರೆ. ಅವರ ಅಭಿಮಾನಿಗಳು, ಜನರ ಆಶೀರ್ವಾದದಿಂದ ಒಳ್ಳೆ ರಿಸಲ್ಟ್ ಬಂದಿದೆ ಎಂದು ಹೇಳಿದ್ದಾರೆ.

ಶಿವಣ್ಣನವರ ಚಿಕಿತ್ಸೆಗೆ ಒಳ್ಳೆ ಜಾಗಕ್ಕೆ ಕರೆದುಕೊಂಡು ಹೋಗಿದ್ದೆವು.ಅವರಿಗೆ ಮೇಜರ್ ಚಿಕಿತ್ಸೆ ಆಗಿದೆ. ೧೯೦ ಇಂಟರ್ನಲ್ ಸ್ಟಿಚಸ್ ಹಾಕಿದ್ದಾರೆ. ಯಾರಿಗೂ ಆತಂಕ ಬೇಡ. ಶಿವಣ್ಣ ಮೊದಲ ರೀತಿ ಆಗ್ತಾರೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

ನಟ ಶಿವಣ್ಣ ಅವರಿಗೆ ಈ ಮೊದಲು ಬ್ರೈನ್ ನಲ್ಲಿ ಸ್ಟಂಟ್ ಹಾಕಲಾಗಿತ್ತು. ೧೬ ವರ್ಷದ ಹಿಂದೆ ಬ್ರೈನ್ ನಲ್ಲಿ ಬ್ಲಾಕೇಜ್ ಇದ್ದಾಗ ಈ ಸ್ಟಂಟ್ ಹಾಕಲಾಗಿತ್ತು.ಮೈಲ್ಡ್ ಹಾರ್ಟ್ ಅಟ್ಯಾಕ್ ಆದಾಗ ಒಂದು ಸ್ಟಂಟ್ ಹಾಕಿಸಲಾಗಿತ್ತು. ಈಗ ಆಸ್ಪತ್ರೆಯ ಆವರಣದಲ್ಲಿ ಅವರಿಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಆಪರೇಷನ್ ಮಾಡಿದ ಬಳಿಕ ಅವರನ್ನ ಮಾತಾಡಿಸಿಕೊಂಡು ಬಂದ್ವಿ.ರೆಗ್ಯುಲರ್ ಚೆಕಪ್ ಆಗಿದೆ, ಈಗ ಅರಾಮವಾಗಿದ್ದಾರೆ. ಜ.೨೫ ರಂದು ಬೆಳಗ್ಗೆ ಅಲ್ಲಿಂದ ಹೊರಟು ೨೬ ರಂದು ಇಲ್ಲಿ ಇರ್ತಾರೆ.ಫೆಬ್ರವರಿಯಿಂದ ಸಿನಿಮಾ ಶೂಟಿಂಗ್ ಶುರು ಮಾಡ್ತಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.






