ಟಾಲಿವುಡ್ ನಟ ರಾಣಾ ದಗ್ಗುಬಾಟಿ (Rana daggubati) ಕುಟುಂಬಕ್ಕೆ ಕಾನೂನು ಸಂಕಷ್ಟ ಎದುರಾಗಿದೆ. ಆಸ್ತಿ ವಿವಾದದ ಪ್ರಕರಣ ಒಂದರಲ್ಲಿ ನ್ಯಾಯಾಲಯದಿಂದ ಸ್ಟೇ (Court stay) ಇದ್ದರೂ ಕೂಡ, ವಿವಾದಿತ ಹೋಟೆಲ್ ಅನ್ನು ಕೋರ್ಟ್ ಆದೇಶ ಮೀರಿ ಧ್ವಂಸ ಮಾಡಲಾಗಿದೆ ಎಂದು ಅವರ ಕುಟುಂಬದ ವಿರುದ್ಧ ಆರೋಪಿಸಲಾಗಿದೆ.

ಹೈದರಾಬಾದ್ನ ಫಿಲ್ಮ್ ಸಿಟಿಯಲ್ಲಿದ್ದ (Hyderabad film city) ಹೋಟೆಲ್ ಡೆಕ್ಕನ್ ಕಿಚನ್ (Deccan kitchen) ಕಟ್ಟಡವನ್ನು ನೆಲಸಮ ಮಾಡಲಾಗಿದ್ದು, ಈ ಹೋಟೆಲ್ ಧ್ವಂಸ ಕೇಸ್ನಲ್ಲಿ ರಾಣಾ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ. ಹೀಗಾಗಿ ಕೋರ್ಟ್ ಆದೇಶದಂತೆ ರಾಣಾ ಕುಟುಂಬದ ವಿರುದ್ಧ FIR ದಾಖಲಿಸಲಾಗಿದ್ದು,ವೆಂಕಟೇಶ್, ಸುರೇಶ್ ಬಾಬು, ರಾಣಾ ವಿರುದ್ಧ ಎಫ್ ನಾಂಪಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆಗೆ ಮುಂದಾಗಿದ್ದಾರೆ.

ರಾಣಾ ಕುಟುಂಬ & ನಂದಕುಮಾರ್ ಎಂಬುವವರ ನಡುವೆ ಈ ಹೋಟೆಲ್ ವಿಚಾರವಾಗಿ ವಿವಾದವಿತ್ತು.ಈ ಬಗ್ಗೆ ನಂದಕುಮಾರ್ ನಾಂಪಲ್ಲಿಯ ಸಿಟಿ ಸಿವಿಲ್ ಕೋರ್ಟ್ ಮೊರೆ ಹೋಗಿದ್ರು. ಈ ಜಾಗದ ವಿವಾದ ಬಗ್ಗೆ ಸಿವಿಲ್ ಕೋರ್ಟ್ನಿಂದ ತಡೆಯಾಜ್ಞೆ ನೀಡಲಾಗಿತ್ತು.
ಆದ್ರೆ ಸಿಟಿ ಸಿವಿಲ್ ಕೋರ್ಟ್ (City civil court) ತಡೆಯಾಜ್ಞೆ ನೀಡಿದ್ರು ಕೂಡ ಅದನ್ನು ಲೆಕ್ಕಿಸದೇ ಹೋಟೆಲ್ ತೆರವು ಮಾಡಲಾಗಿದೆ. ರಾಣಾ ಕುಟುಂಬಸ್ಥರಿಂದ ಹೋಟೆಲ್ ನೆಲಸಮ ಆರೋಪ ಕೇಳಿಬಂದಿದೆ. ವೆಂಕಟೇಶ್, ಸುರೇಶ್ ಬಾಬು, ರಾಣಾ, ಅಭಿರಾಮ್ ವಿರುದ್ಧ FIR ದಾಖಲಾಗಿದ್ದು,ಸೆಕ್ಷನ್ 448, 452, 458 ಮತ್ತು 120 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.





