• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ತಿರುನೆಲ್ವೇಲಿಯಲ್ಲಿ ವಿಸರ್ಜಿಸಲಾದ ವೈದ್ಯಕೀಯ ತ್ಯಾಜ್ಯವನ್ನು ಮರಳಿ ಕೇರಳಕ್ಕೆ ತರುವ ಕಾರ್ಯಾಚರಣೆ ಆರಂಭ

ಪ್ರತಿಧ್ವನಿ by ಪ್ರತಿಧ್ವನಿ
December 23, 2024
in Top Story, ಇತರೆ / Others
0
Share on WhatsAppShare on FacebookShare on Telegram

ತಿರುನೆಲ್ವೇಲಿ ; ತಮಿಳುನಾಡಿನ ತಿರುನೆಲ್ವೇಲಿಯ ನಡುಕಲ್ಲೂರ್, ಕೊಡಗನಲ್ಲೂರ್, ಕೊಂಡನಗರಂ, ಮತ್ತು ಸುತಮಲ್ಲಿ ಪ್ರದೇಶಗಳಲ್ಲಿ ಕೇರಳದಿಂದ ಕೊಂಡೊಯ್ದು ಸುರಿದಿರುವ ವೈದ್ಯಕೀಯ ತ್ಯಾಜ್ಯವನ್ನು ತೆರವುಗೊಳಿಸಲು, ಕೇರಳ ಸರ್ಕಾರ ವಿಶೇಷ ತಂಡವನ್ನು ನಿಯೋಜಿಸಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ದಕ್ಷಿಣ ಪೀಠದ ಕಟ್ಟುನಿಟ್ಟಿನ ನಿರ್ದೇಶನದ ಬೆನ್ನಲ್ಲೇ, ಕೇರಳ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಡಿಸೆಂಬರ್ 23ರ ಒಳಗೆ ತ್ಯಾಜ್ಯವನ್ನು ತರುವಂತೆ ಎನ್‌ಜಿಟಿ ಕೇರಳಕ್ಕೆ ಆದೇಶಿಸಿತ್ತು.

ADVERTISEMENT

ಕೇರಳದ ಸಹಾಯಕ ಕಲೆಕ್ಟರ್ ಆಲ್ಬರ್ಟ್ ನೇತೃತ್ವದ ತಂಡವು ಎಂಟು ಟ್ರಕ್‌ಗಳ ಮೂಲಕ ತ್ಯಾಜ್ಯವನ್ನು ವಾಪಸ್ ತರಲು ಕ್ರಮ ಕೈಗೊಂಡಿದೆ. ಈ ಘಟನೆಗೆ ಸಂಬಂಧಿಸಿದಂತೆ ತಿರುನೆಲ್ವೇಲಿ ಜಿಲ್ಲೆಯ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ವಿಷಯವು ಸುತಮಲ್ಲಿ ಪೊಲೀಸ್ ಠಾಣೆಯ ದೂರು ದಾಖಲುಗಳಿಗೆ ಕಾರಣವಾಗಿದೆ. ಅಕ್ರಮ ತ್ಯಾಜ್ಯ ವಿಸರ್ಜನೆ ಸಂಬಂಧ, ಕೇರಳದ ಲಾರಿ ಮಾಲೀಕ ಹಾಗೂ ಖಾಸಗಿ ತ್ಯಾಜ್ಯ ನಿರ್ವಹಣಾ ಸಂಸ್ಥೆಯ ಮೇಲ್ವಿಚಾರಕ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಈ ದಂಧೆಗೆ ಸಂಬಂಧಿಸಿದಂತೆ ಸದ್ಯಕ್ಕೆ ಆರು ಪ್ರಕರಣಗಳು ದಾಖಲಾಗಿವೆ.

ತಿರುನೆಲ್ವೇಲಿ ಜಿಲ್ಲಾಧಿಕಾರಿ ಕಾರ್ತಿಕೇಯನ್, ಕೇರಳ ಪರಿಶೀಲನಾ ತಂಡದ “ತ್ಯಾಜ್ಯ ಅಪಾಯಕಾರಿಯಲ್ಲ” ಎಂಬ ವರದಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ತ್ಯಾಜ್ಯ ಅಪಾಯಕಾರಿಯಲ್ಲ ಎಂದು ಹೇಳಿದರೆ, ತ್ಯಾಜ್ಯ ವಿಲೇವಾರಿಗಾಗಿ ಮಧ್ಯವರ್ತಿಗಳನ್ನು ನೇಮಿಸಬೇಕಾಗಿದ್ದೇನು? ಮತ್ತು ಅದಕ್ಕಾಗಿ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡುವುದು ಏಕೆ?” ಎಂದು ಅವರು ಪ್ರಶ್ನಿಸಿದರು.

ವಿಸರ್ಜಿಸಲಾದ ತ್ಯಾಜ್ಯದಲ್ಲಿ ಬಳಸಿದ ಸಿರಿಂಜ್‌ಗಳು, ಪಿಪಿಇ ಕಿಟ್‌ಗಳು, ಮತ್ತು ವೈದ್ಯಕೀಯ ದಾಖಲೆಗಳಂತಹ ಅಪಾಯಕಾರಿ ವಸ್ತುಗಳು ಸೇರಿದ್ದು, ಸ್ಥಳೀಯ ಪರಿಸರಕ್ಕೆ ಮತ್ತು ಜನಸಾಮಾನ್ಯರ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತಿದೆ. ನೀರಿನ ಮೂಲಗಳು ಕಲುಷಿತಗೊಂಡಿದ್ದು, ಸ್ಥಳೀಯ ಜಾನುವಾರುಗಳ ಆರೋಗ್ಯವೂ ಕೆಡುತ್ತಿದೆ. ಸ್ಥಳೀಯರು ಈ ಅಕ್ರಮದ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದರೂ, ತ್ವರಿತ ಪರಿಹಾರ ದೊರಕಿಲ್ಲ. ತ್ಯಾಜ್ಯವನ್ನು ಕಾಗದದ ಕಾರ್ಖಾನೆಗಳಿಗೆ ಸಾಗಿಸುವ ನೆಪದಲ್ಲಿ ಟ್ರಕ್‌ಗಳಲ್ಲಿ ಡಂಪ್ ಮಾಡಲಾಗುತ್ತಿದೆ ಎಂದು ಶಂಕಿಸಲಾಗಿದೆ.

Tags: (NGT)clear medical waste dumpedDecember 23.Kerala GovernmentKodaganalurKondanagaramNadukallurSutamalli areasTirunelveli
Previous Post

ನಿರ್ಗತಿಕರಿಗೆ ಸ್ವರ್ಗವಾಗಿರುವ ಅಪ್ನಾ ಘರ್‌ ಆಶ್ರಮ

Next Post

46 ವರ್ಷಗಳ ಬಳಿಕ ತೆರೆಯಲಾದ ಕಾರ್ತಿಕೇಯ ಮಹಾದೇವ ದೇವಾಲಯ ; ಪ್ರಾಚೀನ ಮೆಟ್ಟಿಲು ಬಾವಿ ಪತ್ತೆ

Related Posts

ದೇವೇಗೌಡರ ಭೇಟಿಯಿಂದ ಜಿಟಿ ದೇವೇಗೌಡ ರಾಜಕೀಯಕ್ಕೆ ಟ್ವಿಸ್ಟ್ !
Top Story

ದೇವೇಗೌಡರ ಭೇಟಿಯಿಂದ ಜಿಟಿ ದೇವೇಗೌಡ ರಾಜಕೀಯಕ್ಕೆ ಟ್ವಿಸ್ಟ್ !

by ಪ್ರತಿಧ್ವನಿ
May 15, 2026
0

ಬೆಂಗಳೂರು : ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ ಅವರು ದಿಢೀರ್ ಬೆಳವಣಿಗೆಯಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ...

Read moreDetails
ಸುಪ್ರೀಂ ತೀರ್ಪು ದರ್ಶನ್‌ಗೆ ಲಾಭವೇ? : ವಕೀಲ ಬಾಲನ್ ಪ್ರತಿಧ್ವನಿಗೆ  ಹೇಳಿದ್ದೇನು

ಸುಪ್ರೀಂ ತೀರ್ಪು ದರ್ಶನ್‌ಗೆ ಲಾಭವೇ? : ವಕೀಲ ಬಾಲನ್ ಪ್ರತಿಧ್ವನಿಗೆ  ಹೇಳಿದ್ದೇನು

May 15, 2026
ಪಶ್ಚಿಮ ಏಷ್ಯಾ ಕಗ್ಗಂಟು ಗಂಭೀರ : ಭಾರತದಲ್ಲೇ ಇರಾನ್ ವಿದೇಶಾಂಗ ಸಚಿವರ ಸ್ಪೋಟಕ ಮಾತು

ಪಶ್ಚಿಮ ಏಷ್ಯಾ ಕಗ್ಗಂಟು ಗಂಭೀರ : ಭಾರತದಲ್ಲೇ ಇರಾನ್ ವಿದೇಶಾಂಗ ಸಚಿವರ ಸ್ಪೋಟಕ ಮಾತು

May 15, 2026
ಸುಪ್ರೀಂ ತೀರ್ಪು ದರ್ಶನ್‌ಗೆ ಲಾಭವೇ? : ವಕೀಲ ಬಾಲನ್ ಪ್ರತಿಧ್ವನಿಗೆ  ಹೇಳಿದ್ದೇನು

ಪಶ್ಚಿಮ ಏಷ್ಯಾ ಶಾಂತಿಗೆ ಭಾರತದ ಬೆಂಬಲ : ಮೋದಿ ಹೇಳಿಕೆಯಿಂದ ಹೊಸ ರಾಜತಾಂತ್ರಿಕ ಸಂದೇಶ

May 15, 2026
ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

May 15, 2026
Next Post
46 ವರ್ಷಗಳ ಬಳಿಕ ತೆರೆಯಲಾದ ಕಾರ್ತಿಕೇಯ ಮಹಾದೇವ ದೇವಾಲಯ  ; ಪ್ರಾಚೀನ ಮೆಟ್ಟಿಲು ಬಾವಿ ಪತ್ತೆ

46 ವರ್ಷಗಳ ಬಳಿಕ ತೆರೆಯಲಾದ ಕಾರ್ತಿಕೇಯ ಮಹಾದೇವ ದೇವಾಲಯ ; ಪ್ರಾಚೀನ ಮೆಟ್ಟಿಲು ಬಾವಿ ಪತ್ತೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada