• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅಹಿಂದ ಹೋರಾಟ.. ಕೈ ಕತ್ತರಿಸುವ ಹೇಳಿಕೆಗೆ ಯತ್ನಾಳ್‌ ಕಿಡಿ

ಪ್ರತಿಧ್ವನಿ by ಪ್ರತಿಧ್ವನಿ
December 16, 2024
in Top Story, ಇತರೆ / Others, ಕರ್ನಾಟಕ, ರಾಜಕೀಯ
0
Share on WhatsAppShare on FacebookShare on Telegram

ವಿಜಯಪುರ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಲು ಅಹಿಂದ ಮುಖಂಡರು ಕೈ ಕಡಿಯುತ್ತೇವೆ ಅಂತ ವಿರೋಧ ಮಾಡಿರುವುದಕ್ಕೆ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದು, ನಾವು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೇಳಿಯೇ ಇಲ್ಲ ಎಂದಿದ್ದಾರೆ.

ADVERTISEMENT

2ಎ ಪ್ರಸ್ತಾವನೆ ಮಾಡಿದ್ದು ಆಗ ಕಾಂಗ್ರೆಸ್‌ನ ಮಾಜಿ ಶಾಸಕ, ಈಗ ಹಾಲಿ ಶಾಸಕ ಎಂದಿರುವ ಯತ್ನಾಳ್‌, ನಾವು ಮೊದಲಿನಿಂದಲೂ 2ಎ ಬೇಡಾ ಅದರಲ್ಲಿ 104 ಜಾತಿಗಳಿವೆ.. ಅವರ ಹಕ್ಕನ್ನು ಕಸಿದುಕೊಳ್ಳಲು ನಾವು ತಯಾರಿಲ್ಲ ಎಂದಿದ್ದೇವೆ. ನರೇಂದ್ರ ಮೋದಿ, ಅಮಿತ್ ಷಾ, ನಡ್ಡಾ, ಶೋಭಾ ಕರಂದ್ಲಾಜೆ, ಬೊಮ್ಮಾಯಿ ಸೇರಿ ಒಂದು ಸೂತ್ರ ಕಂಡು ಹಿಡಿದಿದ್ದೀವಿ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಮೀಸಲಾತಿ ಸಂವಿಧಾನ ವಿರೋಧಿ ಅಂತಾರೆ.. ಆ ಪುಣ್ಯಾತ್ಮರು ಮುಸ್ಲಿಮರಿಗೆ ಶೇಕಡಾ 4 ಮೀಸಲಾತಿ ಕೊಟ್ಟರೋದೆ ಸಂವಿಧಾನ ವಿರೋಧಿ ಎಂದಿರುವ ಯತ್ನಾಳ್‌, ಓರ್ವ ರಾಜ್ಯದ ಸಿಎಂ, ವಕೀಲರಾದ ಅವರಿಗೆ ಸಂವಿಧಾನ ಗೊತ್ತಿಲ್ಲ.. ನೀವು ಮುಸ್ಲಿಮರಿಗೆ ಶೇಕಡಾ 4ರಷ್ಟು ಯಾಕೆ ಕೊಟ್ಟಿರಿ..? ಆಂಧ್ರ , ಪಶ್ಚಿಮ ಬಂಗಾಳ ಹೈಕೋರ್ಟ್‌ನಲ್ಲಿ ಮುಸ್ಲಿಮರಿಗೆ ಮೀಸಲಾತಿ ಅಸಂವಿಧಾನಿಕ ಎಂದಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲೂ ಜಸ್ಟಿಸ್ ಗವಾಯಿ ಪೀಠ ಸ್ಪಷ್ಟಪಡಿಸಿದೆ ಎಂದಿದ್ದಾರೆ.

ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ಕೊಡಲು ಬರಲ್ಲ, ನೀವು ಹೇಗೆ ಕೊಟ್ಟಿರಿ ಎಂದು ತರಾಟೆಗೆ ತೆಗೆದುಕೊಂಡಿರುವ ಯತ್ನಾಳ್‌, ಮುಸ್ಲಿಮರಿಗೆ ಕೊಟ್ಟ ಶೇಕಡಾ 4 ರಷ್ಟು ಮೀಸಲಾತಿ ರದ್ದು ಮಾಡಲೇಬೇಕು.. ದೇವೇಗೌಡರು ಒಕ್ಕಲಿಗರಿಗೆ ಶೇಕಡಾ 4ರಷ್ಟು ಮೀಸಲಾತಿ ಕೊಟ್ಟಿದ್ದಾರೆ.. ನಮ್ಮ ಲಿಂಗಾಯತರು 3ಬಿ ವರ್ಗದಲ್ಲಿ ಇದ್ದೆವು. ಲಿಂಗಾಯತರು ಕೆಲವೊಂದು 2ಎ ನಲ್ಲಿದ್ದರು. ಇನ್ನು ಕೆಲವರು 3ಬಿ ನಲ್ಲಿದ್ರು. ಸಾಮಾನ್ಯ ಹಾಗೂ ಎರಡು ಕಡೆ ಲಾಭ ತೆಗೆದುಕೊಳ್ತಿದ್ರು..

ಮೋದಿ, ಅಮಿತ್ ಷಾ ನಾವೆಲ್ಲರೂ ಕೂಡಿ ಏನು ಮಾಡಿದ್ವಿ ಅಂದ್ರೆ‌.. ಮುಸ್ಲಿಮರಿಗೆ ಕೊಟ್ಟ ಮೀಸಲಾತಿ ತೆಗೆದು ಹಾಕಿ. ಒಕ್ಕಲಿಗರ ಇಡೀ ಸಮುದಾಯಕ್ಕೆ ಶೇಕಡಾ 6 ಮೀಸಲಾತಿ ಮಾಡಿದರು.. ಲಿಂಗಾಯತರು, ವೀರಶೈವ ಲಿಂಗಾಯತರು, ಮರಾಠರು, ಜೈನರು, ಕುರುಬ, ವೈಷ್ಣವರು ಕ್ರಿಶ್ಚಿಯನ್ನರು ಸೇರಿ ಶೇಕಡಾ 7ರಷ್ಟು ಮೀಸಲಾತಿ ಕೊಟ್ಟಿದ್ದಾರೆ.. ಕೇವಲ ಪಂಚಮಸಾಲಿಯವರಿಗೆ ಕೊಟ್ಟಿಲ್ಲ.. ಶೇಕಡಾ 7ರಷ್ಟು ಮೀಸಲಾತಿಯಲ್ಲಿ 40 ಜಾತಿಗಳಿವೆ ಎಂದಿದ್ದಾರೆ. ಇದೇ ವೇಳೆ ಕೈ ಕಾಲು ಕಡಿಯುವ ಹೇಳಿಕೆಗೆ ಸಿದ್ದರಾಮಯ್ಯರು ಪ್ರಚೋದಿಸುವುದು ಸರಿಯಲ್ಲ ಎಂದಿದ್ದಾರೆ..

Tags: 2A reservation for Panchmasali Samaj.Ahinda's struggle..BOMMAICM SiddaramaiahMLA Basan Gowda Patil YatnalShobha KarandlajeVijaypur
Previous Post

ವಿಶ್ವವಿಖ್ಯಾತ ತಬಲಾ ವಾದಕ ಜಾಕೀರ್ ಹುಸೇನ್ ನಿಧನ!

Next Post

ಕೇಂದ್ರ ಸರ್ಕಾರ ಹೆಚ್ಚು ಸಂಖ್ಯೆಯ ರೊಹಿಂಗ್ಯನ್ನರನ್ನು ದೆಹಲಿಯಲ್ಲಿ ನೆಲೆಸುವಂತೆ ಮಾಡಿದೆ ;ಆತಿಶಿ ಆರೋಪ

Related Posts

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :
Top Story

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

by ಪ್ರತಿಧ್ವನಿ
May 27, 2026
0

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದ ಪೂರಕ ಬೆಳವಣಿಗೆಗಳು ಮುಂದುವರೆದಿವೆ. ಹೈಕಮಾಂಡ್‌ ನಾಯಕರೊಂದಿಗಿನ ಸಭೆಯ ಬಳಿಕ ಬೆಂಗಳೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ...

Read moreDetails
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ದೆಹಲಿ ಹೈಕಮಾಂಡ್ ಫಾರ್ಮುಲಾ ಫೈನಲ್? ಸಿಎಂ ಬದಲಾವಣೆ ಒಪ್ಪಲು ಇಲ್ಲಿದೆ ಮುಖ್ಯ ಕಾರಣ 

May 27, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಮೀಟಿಂಗ್ ಮೇಲೆ ರಾಜ್ಯದ ಕಣ್ಣು;  ಉಪಹಾರ ಕೂಟದಲ್ಲೇ ಅಧಿಕಾರ ಹಸ್ತಾಂತರ ಫೈನಲ್?

May 27, 2026
ದೆಹಲಿ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ; ಇಂದು ಸಿದ್ದರಾಮಯ್ಯ ಮಹತ್ವದ ಘೋಷಣೆ?

ದೆಹಲಿ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ; ಇಂದು ಸಿದ್ದರಾಮಯ್ಯ ಮಹತ್ವದ ಘೋಷಣೆ?

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

May 27, 2026
Next Post

ಕೇಂದ್ರ ಸರ್ಕಾರ ಹೆಚ್ಚು ಸಂಖ್ಯೆಯ ರೊಹಿಂಗ್ಯನ್ನರನ್ನು ದೆಹಲಿಯಲ್ಲಿ ನೆಲೆಸುವಂತೆ ಮಾಡಿದೆ ;ಆತಿಶಿ ಆರೋಪ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada