ಲಿಂಗಾಯತ ಪಂಚಮಸಾಲಿ (Lingayat panchamasali) ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂಬ ಕೂಗು ಹೆಚ್ಚಾಗಿದ್ದು ರಾಜ್ಯದಲ್ಲಿ 2A ಮೀಸಲಾತಿ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.
ಈ ಬಗ್ಗೆ ಮೈಸೂರಿನಲ್ಲಿ (Mysuru) ಮಾತನಾಡಿದ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ ಎಸ್ ಶಿವರಾಮ್ (KS shivaram) ಜಯ ಮೃತ್ಯುಂಜಯ ಸ್ವಾಮೀಜಿಯವರ (Jaya mrutyunjaya swamiji) ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 2A ಮೀಸಲಾತಿ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಸ್ವಾಮೀಜಿಯವರ ಈ ಹೋರಾಟವನ್ನು ಖಂಡಿಸುತ್ತೇವೆ ಮತ್ತು ನಮ್ಮ ತಟ್ಟೆಗೆ ಕೈ ಹಾಕಿದರೆ ಆ ಕೈಯನ್ನು ಕಡಿದು ಹಾಕುತ್ತೇವೆ ಎಂದಿದ್ದಾರೆ.
ಖಾವಿ ಧರಿಸಿ ಸನ್ಯಾಸಿಯಾದವರು ರಾಜಕೀಯ ಪುಡಾರಿಯ ರೀತಿ ವರ್ತಿಸಬಾರದು. ಸ್ವಾಮೀಜಿಯವರ ಖಾವಿಗೆ ಗೌರವವಿದೆ. ಆದ್ರೆ ಸುಪ್ರೀಂ ಕೋರ್ಟ್ (Supreme court) ನಲ್ಲಿರುವ ಮೀಸಲಾತಿ ವಿಚಾರದಲ್ಲಿ ಈ ರೀತಿ ರಾಜಕೀಯ ಮಾಡೋದು ನೋಡಿದ್ರೆ, ಅವರು ಸ್ವಾಮೀಜಿಯಾಗಲು ನಾಲಾಯಕ್ ಎಂದು ನಕೆಗೆ ಹರಿಬಿಟ್ಟಿದ್ದಾರೆ.