ಈಗೀಗ ಸೋಶಿಯಲ್ ಮೀಡಿಯಾ ಎಷ್ಟು ಪ್ರಭಾವಿಯಾಗಿದೆ ಅಂದ್ರೆ, ಕೆಲವರು ತನ್ನ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಪೋಸ್ಟ್ ಗಳು ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಗಳಿಸಿಕೊಂಡು ಕ್ಷಣಮಾತ್ರದಲ್ಲಿ ವೈರಲ್ ಆಗಿಬಿಡುತ್ವೆ. ಇದೀಗ ದೋಸೆ ವ್ಯಾಪಾರಿಗಳ ಕುರಿತ ಪೋಸ್ಟ್ ಒಂದು ಎಕ್ಸ್ ನಲ್ಲಿ ಫುಲ್ ಸದ್ದು ಮಾಡ್ತಿದೆ.

ನವೀನ್ ಕೊಪ್ಪರಮ್ ಎಂಬ ವ್ಯಕ್ತಿ ದೋಸೆ ವ್ಯಾಪಾರಿಗಳ ಗಳಿಕೆಯನ್ನು ಕುರಿತು ಎಕ್ಸ್‌ನಲ್ಲಿ ಪ್ರಶ್ನಿಸಿರುವ ಪೋಸ್ಟ್ ಭಾರೀ ವೈರಲ್ ಆಗಿದೆ. ಅವರ ಮನೆಯ ಹತ್ತಿರದ ದೋಸೆ ವ್ಯಾಪಾರಿ, ದಿನಕ್ಕೆ ಕನಿಷ್ಠ 20 ಸಾವಿರ ರೂಪಾಯಿ ವ್ಯಾಪಾರ ಮಾಡ್ತಾನೆ.ಅಂದ್ರೆ ತಿಂಗಳಿಗೆ 6 ಲಕ್ಷ ರೂಪಾಯಿ. ಅಲ್ಲಿಗೆ ಎಲ್ಲ ಖರ್ಚು ಕಳೆದು ಪ್ರತಿ ತಿಂಗಳಿಗೆ 3 ರಿಂದ 3.5 ಲಕ್ಷ ರೂಪಾಯಿ ಉಳಿಸ್ತಾನೆ .ಆದರೆ ಒಂದು ರೂಪಾಯಿ ಟ್ಯಾಕ್ಸ್ ಕಟ್ಟಲ್ಲ ಎಂದು ಪೋಸ್ಟ್ ಮಾಡಿದ್ದಾರೆ.

ಆದ್ರೆ ನಾವು ಸಂಬಳಕ್ಕೆ ದುಡಿಯುವವರು ತಿಂಗಳಿಗೆ 60 ಸಾವಿರ ರೂಪಾಯಿ ದುಡಿದ್ರೆ ವರ್ಷಕ್ಕೆ 10 ಪರ್ಸೆಂಟ್ ಆದಾಯ ತೆರಿಗೆ ಕಟ್ಟಬೇಕು. ಇದು ಯಾವ ರೀತಿಯ ತೆರಿಗೆ ವ್ಯವಸ್ಥೆ ಎಂದು ದೋಸೆ ವ್ಯಾಪಾರಿಯ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಇದೀಗ ಈ ಪೋಸ್ಟ್ ಎಕ್ಸ್ ನಲ್ಲಿ ತುಂಬಾನೆ ವೈರಲ್ ಆಗಿದೆ.





