ಬಿಗ್ ಬಾಸ್ ಸಾಮ್ರಾಜ್ಯದಲ್ಲಿ ಮಹಾರಾಜ ಮಂಜು ಮತ್ತು ಅವರ ಪ್ರಜೆಗಳು ಒಂದೆಡೆಯಾದ್ರೆ, ಯುವರಾಣಿ ಮೋಕ್ಷಿತಾ ಹಾಗೂ ಅವರ ಪ್ರಜೆಗಳು ಮತ್ತೊಂದೆಡೆ.ಇವರಿಬ್ಬರ ನಡುವೆ ನೆಡೆಯುವ ಜಗಳದಲ್ಲಿ ಪ್ರಜೆಗಳು ಕೊಡ ಒಳಗಾಗುತ್ತಿದ್ದಾರೆ..

ಇಂದಿನ ಎಪಿಸೋಡ್ ನಲ್ಲಿ ಮಂಜು ಮೋಕ್ಷಿತಾ ಮತ್ತು ಗೌತಮಿ ಒಟ್ಟಿಗೆ ಚೆನ್ನಾಗಿದ್ದಾಗ ಹಾಡುತ್ತಿದ್ದ ಆಕಾಶಡಾಲಿ ನೀನ್ ದೀಪವಾದೆ ಹಾಡನ್ನು ಹಾದಿ ಎಲ್ಲ ಫೇಕ್ ಎಂಬ ರೀತಿ ಮಂಜು ಮಾತನಾಡುತ್ತಾರೆ..ಅದಕ್ಕೆ ಮೋಕ್ಷಿತಾ ನನ್ನ ಎಮೋಷನ್ಸ್ ನ ಇಷ್ಟು ಆಡಿಕೊಂಡ್ರಲ್ಲ ಇವರು,ಇನ್ ಮುಂದೆ ಅಷ್ಟೆ ಎನ್ನುವ ರೀತಿ ರಿಯಾಕ್ಷನ್ ಕೊಡ್ತಾರೆ..

ಇನ್ನು ಬಿಗ್ ಬಾಸ್ ಮಹಾರಾಜ ಮಂಜು ಮತ್ತು ಯುವರಾಣಿ ಮೋಕ್ಷಿತಾ ಇವರಾದ ಕ್ಯಾಪ್ಟನ್ಸಿ ಟಾಸ್ಕ್ ಇಂದ ಒಬ್ಬರನ್ನು ಹೊರ ಇಡ್ಬೇಕು ಎಂದಾಗ, ಮೋಕ್ಷಿತಾ ತ್ರಿವಿಕ್ರಮ್ ಹೆಸರನ್ನು ಆಯ್ಕೆ ಮಾಡಿ,ಇಲ್ಲಿದ್ದ ಅಲ್ಲಿ ,ಅಲ್ಲಿಂದ ಇಲ್ಲಿ ಹೇಳುವ ಬುದ್ಧಿ ಇದೆ ಅಂತ ಕಾರಣ ಕೊಡ್ತಾರೆ. ಇದಕ್ಕೆ ಕೋಪಗೊಂಡ ತ್ರಿವಿಕ್ರಮ್ ಇವರ ರೀತಿ ಗೋಸುಂಬೆ ಆಟ ಆಡುವದಾಗಿದ್ರೆ ನಾವು ಇನ್ನೊಂದು ಆಡಬಹುದಿತ್ತು ಅಂತ ಹೇಳ್ತಾರೆ.

ಇನ್ನು ಮಂಜು ಅವರು ರಜತ್ ಹೆಸರನ್ನ ಆಯ್ಕೆ ಮಾಡಿ ಅವರ ಸರಿ ಸಮ ಆಟವಾಡುವರು ಯಾರು ಇಲ್ಲ ಎಂಬ ಮನೋಭಾವ ಅವರಲ್ಲಿದೆ ಎಂದು ಕಾರಣವನ್ನು ನೀಡುತ್ತಾರೆ. ಅದಕ್ಕೆ ಕೋಪಗೊಂಡ ರಜತ್ ಇವ್ನು ಆಲ್ರೆಡಿ ಫಿಕ್ಸ್ ಆಗಿದ್ದಾನೆ ಇವನೇ ವಿನ್ನರ್, ರನ್ನರ್ ನು ಫಿಕ್ಸ್ ಮಾಡಿದಾನೆ. ಆಚೆ ಬರೋದಕ್ಕೆ ಮುಖ ಇಲ್ಲಿದೆ, ಅಲ್ಲೇ ಕೂತಿರ್ತಾನೆ ಬೆಡ್ ಶೀಟ್ ಹಾಕೊಂಡು ರೋಗಿಷ್ಟನ ತರ ಎಂದು ಕಾಮೆಂಟ್ ಮಾಡುತ್ತಾರೆ.
ಇವತ್ತಿನ ಎಪಿಸೋಡ್ ನಲ್ಲಿ ಜಗಳವಂತು ಜೋರಾಗಿ ನಡೆಯಲಿದ್ದು, ಈ ವಾರದ ಟಾಸ್ಕ್ ನಲ್ಲಿ ಯಾರು ವಿನ್ ಆಗಲಿದ್ದಾರೆ ಎಂಬುದನ್ನ ಕಾದು ನೋಡಬೇಕು.





