ಬೆಂಗಳೂರಿನ ಜನಗರದಲ್ಲಿ ಮತ್ತೊಂದು ಬಾಂಬ್ ಬೆದರಿಕೆ ಪ್ರಕರಣ ಬೆಳಕಿಗೆ ಬಂದಿದೆ.ಆಟೋದಲ್ಲಿ ಬಾಂಬ್ ಇದೆ ಎಂದು ಆಟೊ ಚಾಲಕ ಆಟೋ ತೆಗೆದುಕೊಂಡು ನೇರವಾಗಿ ಠಾಣೆಗೆ ಬಂದಿರುವ ಘಟನೆ ನಡೆದಿದೆ.
ಹೀಗೆ ಆಟೋ ಸಮೇತ ಜಯನಗರ ಪೊಲೀಸ್ ಠಾಣೆಗೆ ಆಟೋ ಚಾಲಕ ಬಂದಿದ್ದು,ತಕ್ಷಣ ಪೊಲೀಸರು ಠಾಣೆಯ ಆವರಣದಿಂದ ಆಟೋವನ್ನು ಹೊರ ತೆಗೆದುಕೊಂಡು ಹೋಗಿದ್ದಾರೆ. ಈ ಆಟೋದ ಹಿಂದಿನ ಸೀಟ್ ನಲ್ಲಿ ಎರಡು ಚೀಲಗಳು ಪತ್ತೆಯಾಗಿದೆ.ಯಾರು ಚೀಲ ಇಟ್ಟು ಹೋಗಿದ್ದಾರೆ ಅನ್ನೊದೇ ಅನುಮಾನವಾಗಿದೆ.

ಸದ್ಯ ಬಾಂಬ್ ಸ್ಕ್ವಾಡ್ ಗೆ ಜಯನಗರ ಪೊಲೀಸರು ಮಾಹಿತಿ ನೀಡಿದ್ದು, ಸ್ಥಳದಲ್ಲಿ ಕೆಲ ಕಾಲ ಆತಂಕ ಮನೆ ಮಾಡಿತ್ತು. ಆಟೋದ ಬ್ಯಾಕ್ ಸೀಟಿನಲ್ಲಿ ಎರಡು ಅನುಮಾನಸ್ಪದ ವಸ್ತುಗಳು ಪತ್ತೆಯಾಗಿದೆ. ಇದನ್ನು ಆಟೋ ಚಾಲಕ ಬಾಂಬ್ ಎಂದು ಅನುಮಾನ ವ್ಯಕ್ತ ಪಡಿಸಿದ ಹಿನ್ನಲೆ ಗೊಂದಲ ಸೃಷ್ಟಿಯಾಗಿದೆ.

ಈಗ ಠಾಣೆಯಿಂದ ಎಂ.ಇ.ಎಸ್ ಗ್ರೌಂಡ್ ಗೆ ಆಟೋ ಪೊಲೀಸರು ತೆಗೆದುಕೊಂಡು ಹೋಗಿದ್ದು, ಯಾರು ಇಲ್ಲದ ನಿರ್ಜನ ಪ್ರದೇಶದ ಗ್ರೌಂಡ್ ಗೆ ಆಟೋ ತೆಗೆದುಕೊಂಡು ಬಂದು ನಿಲ್ಲಿಸಿದ್ದಾರೆ. ಈ ಆಟೋ ಬಳಿ ಯಾರು ಬರದಂತೆ ಭದ್ರತೆ ಮಾಡಿಕೊಂಡಿರುವ ಪೊಲೀಸರು, ಬಾಂಬ್ ಸ್ಕ್ವಾಡ್ ಸಿಬ್ಬಂದಿ ಬರುವುದನ್ನೇ ಕಾಯುತ್ತಿದ್ದಾರೆ.





