ಬಿಗ್ ಬಾಸ್ ಕನ್ನಡ ಸೀಸನ್ ಅಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗ್ತಾ ಇದೆ ಮಾನಸ ಅವರು ನಿನ್ನೆ ದೊಡ್ಮನೆಯಿಂದ ಹೊರ ಬಂದಿದ್ದಾರೆ. ಮಾನಸ ಆವರು ಔಟ್ ಆಗಿದ್ದು ಕಂಟೆಸ್ಟೆಂಟ್ಗಳಲ್ಲಿ ತುಂಬಾನೇ ಬೇಸರವನ್ನ ಮೂಡಿಸಿದೆ ಆದರೆ ಹೊರಗಡೆ ಜನ ತುಂಬಾನೇ ಖುಷಿಪಟ್ಟಿದ್ದಾರೆ ಕಾಮೆಂಟ್ ಗಳ ಸುರಿಮಳೆಯ ಬರ್ತಾ ಇದೆ.

ಇನ್ನು ನಿನ್ನೆ ಎಪಿಸೋಡ್ ತುಂಬಾನೇ ಫನ್ ಇಂದ ತುಂಬಿದ್ದು ಪ್ರೇಕ್ಷಕರನ್ನ ನಕ್ಕು ನಗಿಸಿದೆ, ಹಾಗೂ ಕಳೆದ ವಾರ ಕಿಚ್ಚ ಅವರನ್ನ ಮಿಸ್ ಮಾಡಿಕೊಂಡ ಅಭಿಮಾನಿಗಳು ಕೂಡ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಸದ್ಯ ಬಿಗ್ ಬಾಸ್ ನ ಇವತ್ತಿನ ಪ್ರೋಮೋ ಹೊರ ಬಿದ್ದಿದ್ದು ತುಂಬಾನೇ ಇಂಟ್ರಸ್ಟಿಂಗ್ ಆಗಿದೆ. ಕೆಲವು ಕಂಟೆಸ್ಟೆಂಟ್ಗಳು ಇನ್ನೊಬ್ಬರ ಬಗ್ಗೆ ಮಾತನಾಡಿದ ವಿಡಿಯೋ ತುಣುಕನ್ನ ಬಿಗ್ ಬಾಸ್ ಎಲ್ಲಾ ಕಂಟೆಸ್ಟ್ ಗಳ ಮುಂದೆ ಪ್ಲೇ ಮಾಡಿ ತೋರುಸ್ತಾರೆ. ಈ ಪ್ರೊಮೋ ದಲ್ಲಿ ನೋಡಿದ ಹಾಗೆ ಐಶ್ವರ್ಯ ಮತ್ತು ಶಿಷ್ಯೀರ್ ಗಾರ್ಡನ್ ಏರಿಯಾದಲ್ಲಿ ಕುಳಿತುಕೊಂಡು ಭವ್ಯ ಬಗ್ಗೆ ಮಾತನಾಡಿರುವ ವಿಡಿಯೋ ಬಿಗ್ ಬಾಸ್ ಪ್ಲೇ ಮಾಡಿದ್ದಾರೆ.

ಕಳೆದೆರಡು ವಾರಗಳಿಂದ ಭವ್ಯ ಹಾಗೂ ಐಶ್ವರ್ಯ ನಡುವೆ ಕೋಲ್ಡ್ ವಾರ್ ನಡೀತಾನೆ ಇತ್ತು. ಇದೀಗ ಆ ಕೋಲ್ಡ್ ವಾರ್ ಹೆಚ್ಚಾಗೋದಕ್ಕೆ ಮತ್ತೊಂದು ವಿಡಿಯೋ ಸಾಕ್ಷಿಯಾಗಿದೆ.
ಏನೋ ತ್ರಿವಿಕ್ರಮ್ ಹಾಗೂ ಮೋಕ್ಷಿತ ನಡುವೆ ಕಳೆದ ವಾರದಿಂದ ಜಗಳ ಜೋರಾಗಿಯೇ ನಡಿತಾ ಇತ್ತು. ಇದೀಗ ಮತ್ತೊಂದು ವಿಡಿಯೋ ತುಣುಕನ್ನ ನೋಡಿದ. ಮೋಕ್ಷಿತ ಅವರು ತ್ರಿ ವಿಕ್ರಂ ಮೇಲೆ ಮತ್ತಷ್ಟು ಗರಂ ಆಗಿದ್ದಾರೆ. ರಾಜಕೀಯ ಟಾಸ್ಕ್ ನಲ್ಲಿ ತ್ರಿವಿಕ್ರಮ ತಮ್ಮ ಗುಂಪಿನ ಜೊತೆ ಕುಳಿತುಕೊಂಡು ಮೋಕ್ಷಿತ ಹಾಗೂ ಗೌತಮಿಯ ಬಗ್ಗೆ ಮಾತನಾಡಿರುವ ವಿಡಿಯೋ ತುಣುಕನ್ನ ಬಿಗ್ ಬಾಸ್ ಪ್ಲೇ ಮಾಡಿದ್ದಾರೆ.

ಈ ವಿಡಿಯೋ ನೋಡ್ತಿದಂತೆ ಮೋಕ್ಷಿತ ಅವರು ತ್ರಿ ವಿಕ್ರಂ ಮೇಲೆ ಜೋರಾಗಿ ಕಿರುಚಾಡಿದ್ದಾರೆ, ಹಾಗೂ ನಾನು ಗೋಮುಖವ್ಯಾಘ್ರ ಎಂದು ಹೇಳಿದ್ದು ತಪ್ಪೇನಿಲ್ಲ ಎಂಬ ಮಾತುಗಳನ್ನು ಕೂಡ ಆಡಿದ್ದಾರೆ.

ಒಟ್ಟಿನಲ್ಲಿ ಈ ಪ್ರೊಮೋ ನೋಡ್ತಾ ಇದ್ದಾಗ ಬಿಗ್ ಬಾಸ್ ಮನೆಯಲ್ಲಿ ಇವಾಗ ಖಂಡಿತವಾಗಿಯೂ ಜಗಳ ಜೋರಾಗಿ ನಡೆಯುವುದು ಪಕ್ಕ ಎಂಬ ಗ್ಯಾರಂಟಿ ಸಿಕ್ತಾ ಇದೆ.












