ದೀಪಾವಳಿ (Depavall 2024) ಹಬ್ಬದ ಗಿಫ್ಟ್’ ಎಂಬಂತೆ ಬಾಲಿವುಡ್ ಸಿನಿಮಾಗಳು (Bollywood movies) ಸಾಲು ಸಾಲು ರಜೆಗೆ ಚಿತ್ರ ಮಂದಿರಕ್ಕೆ ಬರಲು ಸಜ್ಜಾಗುತ್ತಿದ್ದು, ಅದ್ರಂತೆ ಬ್ಲಾಕ್ ಬಸ್ಟರ್ ಚಿತ್ರ ಭೂಲ್ ಭುಲೈಯಾ-3 (Bhul bhulayya-3) ಕೂಡ ಬಿಡುಗಡೆಗೆ ಸಜ್ಜಾಗಿದೆ.

ಇತ್ತೀಚೆಗೆ ಭೂಲ್ ಭುಲೈಯಾ-3 ಚಿತ್ರದ ಸಾಂಗ್ ರಿಲೀಸ್ ಕಾರ್ಯಕ್ರಮ ಸಮಾರಂಭ ನಡೆಯಿತು. ಭುಲ್ ಭುಲೈಯಾ ಚಿತ್ರದ ಆಮಿ ಜೆ ತೋಮರ್ ಹಾಡಿಗೆ ನಟಿ ವಿದ್ಯಾ ಬಾಲನ್ (Vidya balan) ಮಾತ್ರವಲ್ಲದೆ ಡ್ಯಾನ್ಸಿಂಗ್ ಕ್ವಿನ್ ಮಾಧುರಿ ದೀಕ್ಷಿತ್ (Madhuri dixit) ಕೂಡ ಸ್ಟೆಪ್ ಹಾಕಿದ್ರು.

ಆದ್ರೆ ಈ ಇಬ್ಬರು ನಟಿಯರು ಒಟ್ಟಿಗೆ ಮೈ ಬಳುಕಿಸು ವೇಳೆ ವಿದ್ಯಾ ಬಾಲನ್ ಡ್ಯಾನ್ಸ್ ಕಾಲು ಜಾರಿ ವೇದಿಕೆಯ ಮೇಲೆ ಜಾರಿ ಬಿದ್ದಿದ್ದಾರೆ. ಈ ಏಳೇ ಅಲ್ಲಿದ್ದ ಪ್ರೇಕ್ಷರು ಓ… ಎಂದು ಕೂಗಿದ್ದು, ತಕ್ಷಣ ಅದೇ ವೇಗದಲ್ಲಿ ಮೇಲೆದ್ದ ವಿದ್ಯಾ ಬಾಲನ್ ಮತ್ತೆ ಡ್ಯಾನ್ಸ್ ಮುಂದುರೆಸಿದ್ದಾರೆ.






