ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳ ಉಪ-ಚುನಾವಣೆಗೆ (Bi-Election) ದಿನಾಂಕ ಘೋಷಣೆಯಾಗಿದ್ದು, ಇಂದಿನಿಂದ ಈ ಎಲ್ಲಾ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ (Nomination) ಭರಾಟೆ ಶುರುವಾಗಲಿದೆ. ಚುನಾವಣೆ ದಿನಾಂಕ ಘೋಷಣೆಯಾಗ್ತಿದ್ದಂತೆ ಉಪಚುನಾವಣೆ ಕ್ಷೇತ್ರ ರಂಗೇರಿದೆ.
ಅಕ್ಟೋಬರ್ 18 ರಿಂದ ಇಂದಿನಿಂದ ಅಕ್ಟೋಬರ್ 25 ರವರೆಗೆ (October 18th to 25th) ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೇ ಅಭ್ಯರ್ಥಿಗಳ ನಾಮಪತ್ರ ಅಕ್ಟೋಬರ್ 28 ರಂದು ಪರಿಶೀಲನೆಗೆ ಒಳಪಡಿಸಿದ್ದು, ಅಕ್ಟೋಬರ್ 30 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ.
ಇನ್ನೂ, ನವೆಂಬರ್ 13 ರಂದು (November 13th) ಎಲ್ಲಾ ಮೂರು ವಿಧಾನಸಭಾ ಕ್ಷೇತ್ರಗಳಿಗೂ ಏಕಕಾಲಕ್ಕೆ ಮತದಾನ ನಡೆಯಲಿದ್ದು, ನವೆಂಬರ್ 23ಕ್ಕೆ ಮೂರು ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಲಿದೆ.