ಕನ್ನಡ ಕಿರುತೆರೆಯ ನಂಬರ್.1 ರಿಯಾಲಿಟಿ ಶೋ ಬಿಗ್ ಬಾಸ್ 11 ನೇ ಸೀಸನ್ (BIGBOSS 11) ಸೆಪ್ಟೆಂಬರ್ 29 ರಿಂದ ಆರಂಭವಾಗುತ್ತಿದೆ. ಆದ್ರೆ ಬಿಗ್ ಬಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಶೋ ಆರಂಭವಾಗುವ ಮೊದಲೇ , ಈ ಬಾರಿ ಬಿಗ್ ಮನೆಗೆ ಬರುವ ಸ್ಪರ್ಧಿಗಳ ಪೈಕಿ ಕೆಲವರ ಹೆಸರನ್ನು ಘೋಷಣೆ ಮಾಡಲಾಗಿದೆ.

ಕಿರುತೆರೆಯ ಸತ್ಯ ಧಾರಾವಾಹಿ ಖ್ಯಾತಿಯ ಗೌತಮಿ ಜಾಧವ್ (Gowtami Jadhav), ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿರುವ ಲಾಯರ್ ಜಗದೀಶ್ (Lawyer Jagadeesh), ವಂಚನೆ ಕೇಸ್ ನಲ್ಲಿ ಜೈಲು ಪಾಲಾಗಿದ್ದ ಚೈತ್ರಾ ಕುಂದಾಪುರ (Chaitra kundapura) ಹಾಗೂ ನಾಲ್ಕನೇ ಸ್ಪರ್ಧಿಯಾಗಿ ಉತ್ತರ ಕರ್ನಾಟಕ ಮೂಲದ ಗೋಲ್ಡ್ ಸುರೇಶ್ (Gold Suresh) ಅವರ ರಾಜ-ರಾಣಿ ಕಾರ್ಯಕ್ರಮದ ಫಿನಾಲೆಯಲ್ಲಿ ರಿವೀಲ್ ಮಾಡಲಾಗಿದೆ.

ಸದ್ಯಕ್ಕೆ ಈ ಸ್ಪರ್ಧಿಗಳು ಬಿಗ್ ಬಾಸ್ ಎಂಟ್ರಿ ಕಚಿತವಾಗಿದ್ದು, ಇನ್ನುಳಿದ ಸ್ಪರ್ಧಿಗಳು ಯಾರು ಎನ್ನುವ ಕುತೂಹಲ ಹಾಗೇ ಉಳಿದಿದೆ.ಈ ಬಾರಿ ಬಿಗ್ಬಾಸ್ ಸ್ವರ್ಗ-ನರಕ ಎನ್ನುವ ಹೊಸ ಪರಿಕಲ್ಪನೆಯಲ್ಲಿ ಮೂಡಿಬರ್ತಿದೆ.







