ಕೆಲವರಿಗೆ ಮುಖದ ಮೇಲೆ ಆಗುವ ಮೊಡವೆಯಂತೆ ಕಿವಿಯ ಒಳಗೂ ಕೂಡ ಸಾಕಷ್ಟು ಗುಳ್ಳೆಗಳು ಅಥವಾ ಮೊಡವೆಗಳು ಆಗ್ತವೆ. ಇದರಲ್ಲಿ ನೋವು ಹೆಚ್ಚು ಇರುತ್ತದೇ. ಕೆಲವರಿಗೆ ಪಸ್ ಕೂಡ ಆಗಿರುತ್ತದೆ.ಕಿವಿಯ ಒಳಗೆ ಮೊಡವೆಯಾದಾಗ ಕಿರಿಕಿರಿಯನ್ನುಸುತ್ತದೆ.ಕಿವಿಯನ್ನು ಮುಟ್ಟಲು ಆಗುವುದಿಲ್ಲ ಅಂತಹ ಸಮಯದಲ್ಲಿ ಈ ಮನೆ ಮದ್ದುಗಳನ್ನು ಬಳಸುವುದರಿಂದ ಮೊಡವೆ ಬೇಗನೆ ಕಡಿಮೆಯಾಗುತ್ತದೆ.

ಟೀ ಟ್ರೀ ಆಯಿಲ್
ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಹಾಗೂ ಆಂಟಿ ಇನ್ಫ್ಲಮೆಟೆರಿ ಅಂಶ ಹೆಚ್ಚಿರುತ್ತದೆ. ಹಾಗಾಗಿ ಇದು ಮೊಡವೆಗಳನ್ನು ಕಡಿಮೆ ಮಾಡೋದಿಕ್ಕೆ ಸಹಾಯ ಮಾಡುತ್ತೆ ..ಹಾಗೂ ದಿನಕ್ಕೆ ಎರಡು ಡ್ರಾಪ್ ಅಷ್ಟು ಟೀ ಟ್ರೀ ಆಯಿಲ್ ಅನ್ನು ಕಿವಿಯೊಳಗೆ ಹಾಕಿ ಹೀಗೆ ಮಾಡುವುದರಿಂದ ಕಡಿಮೆಯಾಗುತ್ತದೆ.

ಕೊಬ್ಬರಿ ಎಣ್ಣೆ
ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ ಒಂದೆರಡು ಡ್ರಾಪ್ ಅಷ್ಟು ಕಿವಿಯೊಳಗೆ ಹಾಕುವುದರಿಂದ ಬೇಗನೆ ಮೊಡವೆ ಕಡಿಮೆಯಾಗುತ್ತದೆ.. ಆಂಟಿ ಇನ್ಫ್ಲಮೆಟೆರಿ ಅಂಶ ಹೆಚ್ಚಿರುತ್ತದೆ.

ಬೆಳ್ಳುಳ್ಳಿ ಎಣ್ಣೆ
ಬೆಳ್ಳುಳ್ಳಿ ಎಣ್ಣೆಯಲ್ಲಿ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಹೆಚ್ಚಿದ್ದು ಮೊಡವೆಯಾದ ಜಾಗದಲ್ಲಿ ಬೆಳ್ಳುಳ್ಳಿ ಎಣ್ಣೆ ಲೇಪಿಸುವುದರಿಂದ ಮೊಡವೆಗಳು ಕಡಿಮೆಯಾಗುತ್ತದೆ..
