• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಮಾನತೆಯನ್ನು ಬೋಧಿಸಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ ಪ್ರವಾದಿ ಮುಹಮ್ಮದ (ಸ್)- ಪ್ರೊ. ಪರಮೇಶ್ವರ

ಪ್ರತಿಧ್ವನಿ by ಪ್ರತಿಧ್ವನಿ
September 22, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ಬೀದರ್: ಭಾರತದಲ್ಲಿ ಪ್ರಚಲಿತವಿದ್ದ ಜಾತಿ ಪದ್ದತಿಯ ಹಾಗೆ ಅರಬ್ ದೇಶದಲ್ಲಿ ಜಾರಿಯಲ್ಲಿದ್ದ ಮೇಲು ಕೀಳು ಬುಡಕಟ್ಟುಗಳ ಭೇದವನ್ನು ಸಂಪೂರ್ಣವಾಗಿ ತೊಡೆದು ಹಾಕಿ ಎಲ್ಲಾ ಮಾನವರು ಒಂದೇ ತಂದೆಯ ಮಕ್ಕಳು ಎಂಬ ಸಂದೇಶ ನೀಡಿ ಸಮಾನತೆ ಬೋಧಿಸಿ ನಮಾಜ್ ಮತ್ತು ಒಂದೆ ತಟ್ಟೆಯಲ್ಲಿ ಊಟ ಮಾಡುವ ಪದ್ದತಿ ಜಾರಿ ಮಾಡಿದ ಸಮಾನತೆಯ ಹರಿಕಾರ ಪ್ರವಾದಿ ಮುಹಮ್ಮದ ಎಂದು ಬೀದರ್ ವಿಶ್ವ ವಿದ್ಯಾಲಯದ ಕುಲಸಚಿವ ಪ್ರೊ. ಪರಮೇಶ್ವರ ನಾಯಕ ನುಡಿದರು.

ADVERTISEMENT

ಅವರು ಬೀದರ್ ನಗರದ ರಂಗ ಮಂದಿರದಲ್ಲಿ ಪ್ರವಾದಿ ಮೋಹಮ್ಮದ (ಸ್) ಮಹಾನ್ ಜಾರಿತ್ರವಂತ ಎನ್ನುವ ವಿಷಯದ ಮೇಲೆ ಏರ್ಪಡಿಸಿದ ವಿಚಾರಗೋಷ್ಠಿಯಲ್ಲಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಶಿಕ್ಷಣ, ಆಸ್ತಿಯಲ್ಲಿ ಪಾಲು ನೀಡಿ 6ನೇ ಶತಮಾನಯದಲ್ಲಿಯೇ ಮಹಿಳಾ ಹಕ್ಕುಗಳನ್ನು ನೀಡಿ ಗೌರವ ನೀಡಿದರು.ಪ್ರವಾದಿಯವರ ಮೊದಲನೆ ಮದುವೆ 40 ವರ್ಷದ 3 ಮಕ್ಕಳಿದ್ದ ವಿಧವೆ ಹ. ಖತೀಜಾ ಜೋತೆ ಆಯಿತು. ಅವಳು ತಿರಿಕೊಂಡ ನಂತರ 53ನೇ ವಯಸ್ಸಿನಲ್ಲಿ ಬೆರೆ ಮದುವೆ ಮಾಡಿಕೊಂಡರು. ಅವರಲ್ಲಿ ಎಲ್ಲರು ವಯಸ್ಸಾದ ವಿಧವೆಯರು. ಒಬ್ಬಳು ಮಾತ್ರ ಕನ್ಯ ಹೆಚ್ಚು ಮದುವೆಯಾದದ್ದು, ಧರ್ಮ ಸಂದೇಶ ತಲುಪಿಸುವ ಉದ್ದೇಶವಾಗಿತ್ತು ಎಂದು ಹೇಳಿದರು.

ಇನ್ನೋರ್ವ ಅತಿಥಿ ಪತ್ರಕರ್ತ ಬಾಲಾಜಿ ಕುಂಬಾರ ಮಾತನಾಡುತ್ತ ಪ್ರವಾದಿ ಪ್ರೀತಿಯ ಸಂದೇಶ ಸಾರಿ ಜನರ ಮಧ್ಯ ಪ್ರೀತಿಯ ಸೇತುವೆ ಕಟ್ಟಿದರು. ಕ್ಷಮಾದಾನ, ಸಹನೆ, ವಿನಮೃತೆ ಪ್ರವಾದಿಯವರ ಪ್ರಮುಖ ಗುಣಗಳು ಎಂದು ಅವರ ಜೀವನದ ಘಟನೆಗಳೊಂದಿಗೆ ತಿಳಿಸಿದರು. ಎಲ್ಲಾ ಪ್ರವಾದಿಗಳು ಹಾಗೂ ಮಹಾಪುರುಷರಂತೆ ಪ್ರವಾದಿಯವರು ವೈರಿಯನ್ನು ಪ್ರೀತಿಸಿ ಎಂಬ ಸಂದೇಶ ನೀಡಿದ್ದಾರೆ ಇದು ನಮ್ಮ ಇಂದಿನ ಅವಶ್ಯಕತೆ ಎಂದು ಹೇಳಿ ಜನರಿಗೆ ಪಾಲಿಸಲು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಹಜ್ ಸಚಿವ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಅವರು ” ಪ್ರವಾದಿ ಮುಹಮ್ಮದ ಲೇಖನ ಸಂಕಲನ “ ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತ ಪ್ರವಾದಿ ನುಡಿದಂತೆ ನಾವೇಲ್ಲ ನಡೆಯಬೇಕು ಎಂದು ಸಲಹೆ ನೀಡಿದರು. ಸ್ವರ್ಗ ಒಳ್ಳೆಯ ಸಂಕಲ್ಪದೊಂದಿಗೆ ಮಾಡಿದ್ದ ಉತ್ತಮ ಕರ್ಮಗಳಿಂದ ಸಿಗುತ್ತದೆ ಎಂದು ಹೇಳಿ ಸತ್ಕರ್ಮಗಳನ್ನು ಮಾಡಲು ಜನರಿಗೆ ಪ್ರೇರೆಪಿಸಿದರು ಇದೇ ಸಂದರ್ಭದಲ್ಲಿ ಸ್ವರಿಡಾಲಿಟಿ ಯುಥ್ ಮುಮೆಂಟ್ ನ ಪೋಸ್ಟರ ಬಿಡುಗಡೆ ಮಾಡಿದರು.

ಜಮಾತೆ ಇಸ್ಲಾಮಿ ಹಿಂದ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಜನಾಬ್ ಅಕ್ಬರ ಅಲಿ ಅದ್ಯಕ್ಷತೆ ವಹಿಸಿ ಮಾತನಾಡುತ್ತ ಪ್ರವಾದಿ ಅವರು ನಮ್ಮೇಲ್ಲರ ದೇವರ ಸ್ಪಷ್ಟವಾದ ಪರಿಚಯ ಮಾಡಿಸಿದ್ದಾರೆ. ಅವನೋಬ್ಬನೆ ನಮ್ಮ ಸೃಷ್ಠಿಕರ್ತ ಹಾಗೂ ಪ್ರಭು ಆಗಿದ್ದಾನೆ ಎಂದು ಏಕ ದೇವ ಸಂದೇಶ ನೀಡಿದರು ಪ್ರವಾದಿ ಅವರು ಜನರ ಜೋತೆ ನಮ್ಮ ವರ್ತನೆ ಹೇಗಿರಬೇಕು ಎಂದು ತಿಳಿಸಿದ್ದಾರೆ. ಜನರ ಜೋತೆ ಪತ್ನಿ, ಮಕ್ಕಳ ಜೊತೆ, ಮಹಿಳೆಯರ ಜೋತೆ ನೆರೆಹೊರೆಯರ ಜೋತೆ, ಸಂಬಂಧಿಕರ ಜೋತೆ ಉತ್ತಮ ವರ್ತನೆ ಮತ್ತು ಸಂಬಂಧ ಇರಬೇಕೆಂದು ಹೇಳಿದರು.

ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಗೆ ಡ್ರಗ್ಸ್ ಸಿನೆಮಾ, ಧಾರವಾಹಿ, ಫ್ಯಾಷನ್ ಶೋ, ಸರಾಯಿಖಾನೆ ನಡೆಸುವ ಮಾಫಿಯಾ ಕಾರಣವಾಗಿದೆ ಇಂತಹ ಮಾಫಿಯಾಗಳನ್ನು ನಿಯಂತ್ರಿಸಿದಾಗ ಮಾತ್ರ ಇಂತಹ ಅಪರಾಧಗಳನ್ನು ಕಡಿಮೆಗೊಳಿಸಲು ಸಾಧ್ಯ ಎಂದರು.ಮೌಲ್ವಿ ಮಹ್ಮದ ಫಿಹಿಮೋದ್ದಿನ್, ಗೀತಾ ಪಂಡಿತರಾವ ಚಿದ್ರಿ ಮಾತನಾಡಿದರು. ಮೊಹ್ಹಮದ್ ಮೌಝಮ್ ಪ್ರಾಸ್ತಾವಿಕ ಬಾಷಣ ಮಾಡಿದರು. ವಿಚಾರಗೋಷ್ಠಿ ಸೈಯದ್ ಅತಿಕುಲ್ಲ ಅವರ ಪವಿತ್ರ ಕುರ್ಆನ್ನ್ ಪಠಣದಿಂದ ಪ್ರಾರಂಭಿಸಲಾಯಿತು ಇದರ ಕನ್ನಡ ಅನುವಾದ ಸೈಯದ್ ಫುರ್ಖಾನ್ ಪಾಷಾ ಮಾಡಿದರು. ಮಹ್ಮದ ನಿಝಾಮೋದ್ದಿನ್ ಅತಿಥಿಗಳ ಸ್ವಾಗತ ಹಾಗೂ ನಿರೂಪಣೆ ಮಾಡಿದರು.

ವೇದಕೆ ಮೇಲೆ ಡಿಡಿಪಿಐ ಸಲಿಂ ಪಾಷಾ, ಡಾ. ಉಸಾಮೋದ್ದಿನ್ ಉಜೇರ್, ನಗರ ಸಬೆ ಅಧ್ಯಕ್ಷ ಮಹ್ಮದ ಗೌಸ್, ಡಾ. ಕುಮಾರ ದೇಶಮುಖ, ಕಸಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಗುರುನಾಥ ಗಡ್ಡೆ, ಎಂಸ್ ಮನೋಹರ, ಓಂಪ್ರಕಾಶ ರೊಟ್ಟೆ, ಡಾ. ಸಂಜೀವಕುಮಾರ ಅತಿವಾಳೆ, ವೀರಭದ್ರಪ್ಪ ಉಪ್ಪನ್ ಉಪಸ್ಥಿತರಿದ್ದರು. ವಿವಿಧ ಧರ್ಮದ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಪುರುಷರು ಪಾಲ್ಗೋಂಡಿದ್ದರು

Tags: DDPI Salim PashaEnvironment Minister Eshwar KhandreGurunath GaddeKasapa President Suresh ChannashettyMinister Rahim Khan lNagar Sabe President Mahmada Gaus
Previous Post

ತುಂಗಾಭದ್ರಾಗೆ ಸಿಎಂ ಬಾಗಿನ, ಹೊಸ ಡ್ಯಾಂಗೆ ನಡೀತಿದೆ ತಯಾರಿ..

Next Post

ಯಲಹಂಕದಲ್ಲಿ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರ ಲೋಕಾರ್ಪಣೆ: ಸಚಿವ ಕೆ.ಜೆ. ಜಾರ್ಜ್

Related Posts

₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ
Top Story

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

by ಪ್ರತಿಧ್ವನಿ
April 10, 2026
0

ಬಾಹ್ಯಾಕಾಶ ಪ್ರಿಯರಿಗೆ ಸಂತಸದ ಸುದ್ದಿ ಕೇಳಿಬಂದಿದ್ದು, ಒಮ್ಮೆ ಸೌರಮಂಡಲದ ಒಂಬತ್ತನೇ ಗ್ರಹವೆಂದು ಪರಿಗಣಿಸಲ್ಪಟ್ಟಿದ್ದ Pluto ಮತ್ತೆ ಗ್ರಹ ಸ್ಥಾನಮಾನ ಪಡೆಯುವ ಸಾಧ್ಯತೆ ಕುರಿತು ಹೊಸ ಚರ್ಚೆಗಳು ಆರಂಭವಾಗಿವೆ.ಈ...

Read moreDetails
ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

April 10, 2026
ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

April 10, 2026
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

April 9, 2026
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
Next Post

ಯಲಹಂಕದಲ್ಲಿ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರ ಲೋಕಾರ್ಪಣೆ: ಸಚಿವ ಕೆ.ಜೆ. ಜಾರ್ಜ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada