ಆಂಧ್ರಪ್ರದೇಶ (Andra pradesh) ಹಾಗೂ ತೆಲಂಗಾಣದಲ್ಲಿ (Telangana) ಭಾರೀ ಮಳೆಯಾಗ್ತಿರೋ ಹಿನ್ನಲೆ 110ಕ್ಕೂ ಅಧಿಕ ರೈಲುಗಳ ಸಂಚಾರ ಬಂದ್ ಮಾಡಲಾಗಿದೆ.ಆಂಧ್ರ ತೆಲಂಗಾಣಕ್ಕೆ ಬೆಂಗಳೂರು (Bangalore) ಹಾಗೂ ಮೈಸೂರಿನಿಂದ (Mysuru) ಹೊರಡುವ ಬಹುತೇಕ ರೈಲುಗಳ ಸಂಚಾರ ಸ್ಥಗಿತವಾಗಿದೆ.

ವಿಜಯವಾಡ ಸೇರಿದಂತೆ ಇತರ ಕೆಲವು ನಗರಗಳಲ್ಲಿ ಪ್ರವಾಹ ಪರಿಸ್ಥಿತಿ ಇರೋದ್ರಿಂದ ಹಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಆಂಧ್ರಪ್ರದೇಶದ ರಾಯನಪಾಡು ರೈಲು ನಿಲ್ದಾಣದಲ್ಲಿ ಭಾರೀ ನೀರು ನಿಂತಿರೋದ್ರಿಂದ ಹಲವು ರೈಲುಗಳು ರದ್ದಾಗಿವೆ.
ಬೆಂಗಳೂರಿನ ವಿಶ್ವೇಶ್ವರಯ್ಯ ಟರ್ಮಿನಲ್ ರೈಲು ನಿಲ್ದಾಣದಿಂದ ದಾನಾಪುರಕ್ಕೆ ತೆರಳುವ ರೈಲು, ಕೆಎಸ್‌ಆರ್‌ನಿಂದ ದಾನಾಪುರ, ದಾನಾಪುರದಿಂದ ಕೆಎಸ್‌ಆರ್‌ಗೆ ಬರುವ ರೈಲುಗಳು ಕೂಡಾ ರದ್ದಾಗಿವೆ. ಇನ್ನು ಈ ಬಗ್ಗೆ ನೈರುತ್ಯ ರೈಲ್ವೇ ಪ್ರಕಟಣೆ ಹೊರಡಿಸಿದೆ.






