ಮುಂಬೈ: ಎರಡು ಶಾಂಪೂ ಮತ್ತು ಲೋಷನ್ ಬಾಟಲಿಗಳಲ್ಲಿ ದ್ರವರೂಪದಲ್ಲಿ ಬಚ್ಚಿಟ್ಟಿದ್ದ 20 ಕೋಟಿ ರೂಪಾಯಿ ಮೌಲ್ಯದ ಕೊಕೇನ್ನೊಂದಿಗೆ ಕೀನ್ಯಾದ ಮಹಿಳೆಯೊಬ್ಬರನ್ನು ಶುಕ್ರವಾರ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ಇದು ಕಳ್ಳಸಾಗಾಣಿಕೆಯ ಹೊಸ ವಿಧಾನವಾಗಿದೆ ಎಂದು ಡಿಆರ್ಐ ಅಧಿಕಾರಿಗಳು ತಿಳಿಸಿದ್ದಾರೆ.
ದ್ರವ ರೂಪದ ಕೊಕೇನ್ನ ತುಂಬಿದ್ದ ಬಾಟಲಿಗಳು ನೋಡಲು ಸಾಮಾನ್ಯ ಶಾಂಪೂ ಮತ್ತು ಲೋಷನ್ ಅಂಶಗಳಂತೆಯೇ ಇದ್ದು, ಅದರ ಪತ್ತೆ ಕ್ಲಿಷ್ಟಕರವಾಗಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.”ಕೀನ್ಯಾದ ನೈರೋಬಿಯಿಂದ ಬರುತ್ತಿದ್ದ ಮಹಿಳಾ ಪ್ರಯಾಣಿಕರನ್ನು ನಿರ್ದಿಷ್ಟ ಗುಪ್ತಚರ ಆಧಾರದ ಮೇಲೆ ಡಿಆರ್ಐ ತಂಡವು ಬಂಧಿಸಿದೆ.
ಒಟ್ಟು 1,983 ಗ್ರಾಂ ಸ್ನಿಗ್ಧತೆಯ ದ್ರವವನ್ನು ವಶಪಡಿಸಿಕೊಳ್ಳಲಾಗಿದೆ. ಅದರ ಮೇಲೆ ಪರೀಕ್ಷೆ ನಡೆಸಿದಾಗ ಕೊಕೇನ್ ಪಾಸಿಟಿವ್ ಬಂದಿದೆ.ಅದರ ಅಂದಾಜು ಮೌಲ್ಯ ಅಕ್ರಮ ಮಾರುಕಟ್ಟೆ 20 ಕೋಟಿ ರೂ.ಗಳಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ (ಎನ್ಡಿಪಿಎಸ್) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ ಮತ್ತು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.