I’m ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj chopra) ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ಟೂರ್ನಿಯಲ್ಲಿ (Paris olympics) ಚಿನ್ನದ ಪದಕ (gold medal) ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಫೈನಲ್ನಲ್ಲಿ ನೀರಜ್ಗೆ ಬೆಂಬಲ ಸೂಚಿಸುವ ಅಭಿಮಾನಿಗಳಿಗೆ ಕ್ರಿಕೆಟಿಗ ರಿಷಭ್ ಪಂತ್ (Rishab pant) ಭಾರೀ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪಂತ್, ನೀರಜ್ ಚೋಪ್ರಾ ನಾಳೆ ಚಿನ್ನದ ಪದಕ ಗೆದ್ದರೆ, ಟ್ವಿಟ್ ಅನ್ನು ಅತಿಹೆಚ್ಚು ಲೈಕ್ ಮತ್ತು ಕಾಮೆಂಟ್ ಮಾಡುವ ಅದೃಷ್ಟಶಾಲಿ ವಿಜೇತರಿಗೆ ನಾನು 1,00,089 ರೂಪಾಯಿಗಳನ್ನು ನೀಡುತ್ತೇನೆ ಎಂದು ಟ್ವಿಟ್ ಮಾಡಿದ್ದಾರೆ.
ಇದು ಮಾತ್ರವಲ್ಲದೆ ಉಳಿದ ಟಾಪ್ 10 ಜನರಿಗೆ ವಿಮಾನ ಟಿಕೆಟ್ಗಳನ್ನು ನೀಡಲಾಗುವುದು. ನನ್ನ ಸಹೋದರನಿಗೆ ಭಾರತ ಮತ್ತು ಪ್ರಪಂಚದ ಹೊರಗಿನಿಂದ ಬೆಂಬಲಿಸೋಣ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ನೀರಜ್ ಗೆ ಬೆಂಬಲ ಸೂಚಿಸಲು ಕರೆ ಕೊಟ್ಟಿದ್ದಾರೆ.






