ಹಾಸನದಲ್ಲಿ (Hassan pendrive case) ವೈರಲ್ ಆದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ,ಶೀಘ್ರದಲ್ಲೇ ಪ್ರಾಥಮಿಕ ಚಾರ್ಜ್ಶೀಟ್ ಸಲ್ಲಿಸಲು ಎಸ್ ಐಟಿ ಟೀಮ್ ಮುಂದಾಗಿದೆ. ಹಿರಿಯ ಅಧಿಕಾರಿಗಳ ಸೂಚನೆ ಹಿನ್ನಲೆ ದೋಷಾರೋಪ ಪಟ್ಟಿ ಸಲ್ಲಿಕೆಗೆ ಅಧಿಕಾರಿಗಳ ತಂಡ ಸಿದ್ದತೆ ಮಾಡಿಕೊಂಡಿದೆ.

ಈಗಾಗ್ಲೇ ವೈರಲ್ ಆದ ವಿಡಿಯೋಗಳು ಮಾರ್ಪ್ ಮಾಡಿದ ವಿಡಿಯೋಗಳ ಅಥವ ನೈಜ ವಿಡಿಯೋಗಳ ಎಂಬುದರ ಬಗ್ಗೆ ಎಫ್ ಎಸ್ ಎಲ್ ನಿಂದ ರಿಪೋರ್ಟ್ (FSL report) ಅಧಿಕಾರಿಗಳ ಕೈ ಸೇರಿದೆ.
ಅಶ್ಲೀಲ ವಿಡಿಯೋ ಪ್ರಕರಣದ ಸಂಬಂಧ ಸುದೀರ್ಘ ತನಿಖೆ ನಡೆಸಿದ್ದ ಎಸ್ಐಟಿ (SIT), ಸದ್ಯ ಮುಂದಿನ ಎರಡು ವಾರದೊಳಗೆ ಚಾರ್ಜ್ ಶೀಟ್ (Charge sheet) ಸಲ್ಲಿಕೆ ಮಾಡೋ ಸಾಧ್ಯತೆಯಿದೆ.
ತನಿಖೆ ವೇಳೆ ಮಾಜಿ ಸಂಸದ ಪ್ರಜ್ವಲ್ (Prajwal revanna) ವಿರುದ್ಧ ಚಾರ್ಜ್ಶೀಟ್ನಲ್ಲಿ ತನಿಖಾಧಿಕಾರಿಗಳು ಸಾಕ್ಷಿಗಳನ್ನು ಉಲ್ಲೇಖಮಾಡಲಿದ್ದಾರೆ. ಸದ್ಯ ಅತ್ಯಾಚಾರ ಪ್ರಕರಣದಲ್ಲಿ ಬಂಧನವಾಗಿರೋ ಪ್ರಜ್ವಲ್ ರೇವಣ್ಣಗೆ ಮತ್ತಷ್ಟು ಸಂಕಷ್ಟ ಎದುರಾಗೋ ಸಾಧ್ಯತೆಯಿದೆ.






