• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ನಾಪತ್ತೆ ಆಗಿರುವ ನಿರೂಪಕಿ ದಿವ್ಯಾ ವಸಂತ ಎಲ್ಲಿದ್ದಾಳೆ ಗೊತ್ತಾ ?

ಪ್ರತಿಧ್ವನಿ by ಪ್ರತಿಧ್ವನಿ
July 8, 2024
in ಇದೀಗ, ಕರ್ನಾಟಕ, ವಿಶೇಷ, ಶೋಧ
0
ನಾಪತ್ತೆ ಆಗಿರುವ ನಿರೂಪಕಿ ದಿವ್ಯಾ ವಸಂತ ಎಲ್ಲಿದ್ದಾಳೆ ಗೊತ್ತಾ ?
Share on WhatsAppShare on FacebookShare on Telegram

ತನ್ನ ಬ್ಲಾಕ್‌ ಮೇಲ್‌ ದಂಧೆ ಬಯಲಿಗೆ ಬರುತಿದ್ದಂತೆಯೇ ಇಬ್ಬರು ಸಹಚರರ ಜತೆ ಮನೆಯಿಂದ ಲ್ಯಾಪ್‌ ಟಾಪ್‌ ಹಾಗೂ ಕಾರಿನಲ್ಲಿ ಹೊರಟ ಟಿವಿ ನಿರೂಪಕಿ ದಿವ್ಯಾ ವಸಂತ ಈವರೆಗೂ ಪೋಲೀಸರಿಗೆ ಸಿಕ್ಕಿಲ್ಲ.
ಈಕೆಯ ಲ್ಯಾಪ್‌ ಟಾಪ್‌ ನಲ್ಲಿ ನೂರಾರು ವೀಡಿಯೋಗಳಿದ್ದು ಅವುಗಳನ್ನು ಬಳಸಿಯೇ ವೈದ್ಯರು, ಪಬ್‌ , ಮಸಾಜ್‌ ಸೆಂಟರ್‌ ಗಳ ಮಾಲೀಕರನ್ನು ಬ್ಲಾಕ್‌ ಮೇಲ್‌ ಮಾಡಲಾಗುತಿತ್ತು ಎಂದು ಪೋಲೀಸರು ಶಂಕಿಸಿದ್ದಾರೆ. ಮೊದಲು ಸಾಮಾನ್ಯ ಟವಿ ನಿರೂಪಕಿ ಆಗಿದ್ದ ದಿವ್ಯಾ ನಂತರ ರಾಜ್‌ ನ್ಯೂಸ್‌ ಮುಖ್ಯಸ್ಥ ಎನ್ನಲಾದ ವೆಂಕಟೇಶ್‌ ಸಂಪರ್ಕಕ್ಕೆ ಬಂದಳು.

ADVERTISEMENT
ನಂತರ ಇಬ್ಬರೂ ಒಂದಾಗಿ ಶುರುವಿಟ್ಟುಕೊಂಡದ್ದೇ  ಬ್ಲಾಕ್‌ಮೇಲ್‌ ದಂಧೆ.  ಕನ್ನಡದಲ್ಲಿ ಪ್ರಮುಖ 5-6 ಚಾನೆಲ್‌ ಬಿಟ್ಟರೆ ಮಿಕ್ಕ ಎಲ್ಲಾ ಚಾನೆಲ್‌ ಗಳೂ ನಡೆಯುತ್ತಿರೋದೇ ಕಷ್ಟದಲ್ಲಿ. ಇಲ್ಲಿ ಕೆಲಸ ಮಾಡುವವರಿಗೆ ತಿಂಗಳಿಗೆ ಸರಿಯಾಗಿ ಸಂಬಳ ಸಿಗೋದು ಸಂಶಯವೇ. ಜಾಹೀರಾತು ಆದಾಯ ಗಳಿಕೆಯೂ ಏನೇನೂ ಇಲ್ಲ. ಇಂತಾ ಸಂದರ್ಭದಲ್ಲಿ  ಬ್ಲಾಕ್‌ ಮೇಲ್‌ ಮಾಡಿದರೆ ಬೇಗನೆ ಹಣಗಳಿಸಬಹುದೆನ್ನುವ ದುರಾಶೆಗೆ ಬಲಿಬಿದ್ದ ದಿವ್ಯಾ  ತನ್ನ ಸಹೋದಹ ಸಂದೇಶ್‌ ನನ್ನೂ ತನ್ನ ಜತೆ ಸೇರಿಸಿಕೊಂಡಳು. ಜತೆಗೆ ಅವನ ಮೂರು ನಾಲ್ಕು ಐನಾತಿ ಮಿತ್ರರೂ ಸೇರಿಕೊಂಡರು. 
ಬೆಂಗಳೂರಿನಲ್ಲಿ ದಿನಕ್ಕೆ ಲಕ್ಷಗಟ್ಟಲೆ ಆದಾಯ ಇರುವ ಮಸಾಜ್‌ ಸೆಂಟರ್‌ ಗಳು , ಶ್ರೀಮಂತ ಉದ್ಯಮಿಗಳನ್ನು ಈ ಗ್ಯಾಂಗ್‌ ಟಾರ್ಗೆಟ್‌ ಮಾಡತೊಡಗಿತು.  ಜತೆಗೇ ಏನೂ ಮಾಡಿಲ್ಲದೆಯೂ  ಗೌರವಕ್ಕೆ ಅಂಜಿ ಜನರೂ 20, 50 ಸಾವಿರ ಕೊಡತೊಡಗಿದರು. ಮಸಾಜ್‌ ಸೆಂಟರ್‌ ಮಾಲೀಕರಂತೂ ಟಿವಿಯಲ್ಲಿ ಬಂಧರೆ ಕೆಟ್ಟ ಹೆಸರು ಬರುತ್ತೆ ಎಂದು ಹೆದರಿ ಹಣ ನೀಡಿದರು.  ಆದರೆ ಸುಲಭ ಹಣದ ರುಚಿ ಕಂಡಿದ್ದ ಈ ಗ್ಯಾಂಗ್‌ ತಿಂಗಳಿಗೆ ನಮಗೆ ಇಷ್ಟು ಕೊಟ್ಟು ಬಿಡಿ ಎಂದು ಮಂತ್ಲಿ ಹಫ್ತಾ ಫಿಕ್ಸ್‌ ಮಾಡತೊಡಗಿತು. 

ಪೋಲೀಸರ ಪ್ರಕಾರ ಈಗಾಗಲೇ ಈ ಗ್ಯಾಂಗ್‌ ನೂರರಿಂದ ಇನ್ನೂರು ಜನರ ಬಳಿ ಬೆದರಿಕೆ ಹಾಕಿಯೇ ಹಣ ವಸೂಲಿ ಮಾಡಿಕೊಂಡಿದೆ. ನಿರೂಪಕಿ ದಿವ್ಯಾ ಪ್ರಾಮಾಣಿಕವಾಗಿ ದುಡಿದಿದ್ದರೂ ತನ್ನ ಪ್ರತಿಭೆಯಿಂದಲೇ ತಿಂಗಳಿಗೆ 40-50 ಸಾವಿರ ಗಳಇಸುವುದು ಕಷ್ಟವೇನಾಗಿರಲಿಲ್ಲ. ಆದರೆ ಈಕೆ ಐಷಾರಾಮಿ ಬದುಕಿನ ಚಟಕ್ಕೆ ಬಲಿ ಬಿದ್ದಿದ್ದಳು. ಈಕೆಯ ಒಂದೇ ಗುರಿ ಎಂದರೆ ಕೋಟಿಗಟ್ಟಲೆ ಹಣ ಸಂಪಾದಿಸಬೇಕೆನ್ನುವುದು ಮಾತ್ರಾ ಆಗಿತ್ತು. ಅದಕ್ಕಾಗಿ ಆಯ್ಕೆ ಮಾಡಿಕೊಂಡದ್ದು ದುರ್ಮಾರ್ಗ ಆಗಿದ್ದರೂ ಮುಂದೊಂದು ದಿನ ಇಂತಹ ಗತಿ ಬರುತ್ತೆ ಎಂದು ಕನಸಿನಲ್ಲೂ ಈ ಗ್ಯಾಂಗ್‌ ಊಹಿಸಿರಲಿಲ್ಲ. ಏಕೆಂದರೆ ಬ್ಲಾಕ್‌ ಮೇಲ್‌ ಮಾಡಿದರೆ ಜನ ಹಣ ಕೊಡುತ್ತಾರೆ ಅಥವಾ ನಿರಾಕರಿಸುತ್ತಾರೆ. ಅವರೂ ಉದ್ಯಮದಲ್ಲೇ ಇರುವುದರಿಂದ ಪೋಲೀಸ್‌ , ಕೋರ್ಟು ಎಂದು ಹೋಗುವುದಿಲ್ಲ ಎಂದೇ ಈ ಗ್ಯಾಂಗ್‌ ಧೃಢವಾಗಿ ನಂಬಿತ್ತು.

ತನ್ನ ಸಹಚರರೊಂದಿಗೆ ನಾಪತ್ತೆ ಆಗಿರುವ ದಿವ್ಯಾ ಬೆಂಗಳೂರಿನಲ್ಲೇ ಇರುವ ಸುಳಿವು ಪೋಲೀಸರಿಗೆ ಸಿಕ್ಕಿದೆ. ಆದರೆ ಈ ಗ್ಯಾಂಗ್‌ ಸಿಕ್ಕಿ ಬೀಳುವ ಭಯದಿಂದ ಮೊಬೈಲ್‌ ಬಳಸುತ್ತಿಲ್ಲ. ಇವರ ಬ್ಯಾಂಕ್‌ ಖಾತೆಗಳ ಬಗ್ಗೆಯೂ ತನಿಖೆ ನಡೆಸುತ್ತಿರುವ ಪೋಲೀಸರು ನಿಗಾ ವಹಿಸಿದ್ದು ಹಣ ಡ್ರಾ ಮಾಡಿದರೆ ಗೊತ್ತಾಗಲಿದೆ.
ಈ ನಡುವೆ ದಿವ್ಯಾ ಹಾಗೂ ಆರೋಪಿ ರಾಜ್‌ ನ್ಯೂಸ್‌ ಮಾಜಿ ಮುಖ್ಯಸ್ಥ ವೆಂಕಟೇಶ್‌ ಜತೆಯಾಗಿ ಆತ್ಮೀಯವಾಗಿರುವ 6 ಸೆಕೆಂಡ್‌ ಗಳವೀಡಿಯೋ ನಿನ್ನೆಯಿಂದ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ. ಈಕೆ ಎಲ್ಲಿಯೇ ಅಡಗಿದ್ದರೂ , ಏನೇ ಬುದ್ದಿವಂತಿಕೆ ತೋರಿದರೂ ಹೆಚ್ಚೆಂದರೆ ಇನ್ನೆರಡು-ಮೂರು ದಿನ ಅಷ್ಟೇ. ಪೋಲೀಸರು ಹೆಡೆಮುರಿ ಕಟ್ಟುವುದು ನಿಶ್ಚಿತವಾಗಿದೆ.

Tags: BTVBTV KannadaDivya Vasanthakannada news
Previous Post

Hair care: ನೈಸರ್ಗಿಕವಾಗಿ ಬಿಳಿಯ ಕೂದಲು ಕಪ್ಪಾಗುವುದಕ್ಕೆ ಈ ಟಿಪ್ಸ್ ನ ಫಾಲೋ ಮಾಡಿ.!

Next Post

ಮತ್ತೆ ನೆನಪಿಸುತ್ತಿದೆ 2008ರ ಅತಿಕ್ರಮಣ ತೆರವು..

Related Posts

ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್   
ಕರ್ನಾಟಕ

ಮೊದಲ ದಿನವೇ ಕೆಡಿ ಭರ್ಜರಿ ಓಪನಿಂಗ್:  ಮೊದಲ‌ ದಿನದ ಕಲೆಕ್ಷನ್ ಎಷ್ಟು ?

by ಪ್ರತಿಧ್ವನಿ
May 1, 2026
0

ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಕೆಡಿ ಚಿತ್ರ ಏಪ್ರಿಲ್ 30ರಂದು ಭರ್ಜರಿಯಾಗಿ ಬಿಡುಗಡೆಯಾಗಿ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸುಮಾರು 400ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ...

Read moreDetails
ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್   

ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್  

May 1, 2026
ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

May 1, 2026
ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

May 1, 2026
ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

May 1, 2026
Next Post
ಮತ್ತೆ ನೆನಪಿಸುತ್ತಿದೆ 2008ರ ಅತಿಕ್ರಮಣ ತೆರವು..

ಮತ್ತೆ ನೆನಪಿಸುತ್ತಿದೆ 2008ರ ಅತಿಕ್ರಮಣ ತೆರವು..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada