• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಭೀಮಾ ತೀರದ ಕೊಲೆಗಳಿಗೆ ಕಂಟ್ರಿ ಪಿಸ್ತೂಲು ಎಲ್ಲಿಂದ ಬರುತಿತ್ತು ಗೊತ್ತೇ ?

ಪ್ರತಿಧ್ವನಿ by ಪ್ರತಿಧ್ವನಿ
July 5, 2024
in Top Story, ಇದೀಗ, ಕರ್ನಾಟಕ, ರಾಜಕೀಯ, ವಿಶೇಷ, ಶೋಧ
0
ಭೀಮಾ ತೀರದ ಕೊಲೆಗಳಿಗೆ ಕಂಟ್ರಿ ಪಿಸ್ತೂಲು ಎಲ್ಲಿಂದ ಬರುತಿತ್ತು ಗೊತ್ತೇ ?
Share on WhatsAppShare on FacebookShare on Telegram

ವಿಜಯಪುರ : ಚಡಚಣ ಪಟ್ಟಣದಲ್ಲಿ ಕಳೆದ ಜೂನ್ 16 ರಂದು ಗುಂಡು ಹಾರಿಸಿ ರೌಡಿಶೀಟರ್ ಅಶೋಕ್ ಗಂಟಗಲ್ಲಿ ಎಂಬಾತನನ್ನು ಹತ್ಯೆ ಮಾಡಿದ ಪ್ರಕರಣದ ಬೆನ್ನು ಹತ್ತಿದ ಚಡಚಣ ಪೊಲೀಸರು ಅತೀ ದೂರದ ಮಧ್ಯಪ್ರದೇಶ ರಾಜ್ಯದಿಂದ ಭೀಮಾ ತೀರಕ್ಕೆ ಕಂಟ್ರಿ ಪಿಸ್ತೂಲ್ ಪೂರೈಸುತ್ತಿದ್ದ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.‌


ADVERTISEMENT



ಬಂಧಿತನನ್ನು ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಪಿಡಿಯಾ ಗ್ರಾಮದ ಮುಸ್ತಫಾ ಹೈದರ ತಡವಿ (36) ಎಂದು ಗುರುತಿಸಲಾಗಿದ್ದು ಈತ ಮಧ್ಯಪ್ರದೇಶದ ರಾಜ್ಯದ ಗಡಿಭಾಗದ ಹಳ್ಳಿಯೊಂದರಿಂದ ಭೀಮಾ ತೀರದ ರೌಡಿಗಳಿಗೆ ಕಂಟ್ರಿ ಪಿಸ್ತೂಲ್ ಪೂರೈಸುತ್ತಿದ್ದ ಎನ್ನಲಾಗಿದೆ.
ಅಲ್ಲದೇ, ಚಡಚಣ ಶೂಟೌಟ್ ಪ್ರಕರಣದ ಆರೋಪಿಗಳಿಗೂ ಈತನೇ ಕಂಟ್ರಿ ಪಿಸ್ತೂಲ್ ಪೂರೈಸಿದ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಪ್ರಕರಣದ ತನಿಖಾಧಿಕಾರಿ ಚಡಚಣ ಸಿಪಿಐ ಸುರೇಶ್ ಬೆಂಡೆಗೊಂಬಳ ಹಾಗೂ ಸಿಬ್ಬಂದಿಯು ಆರೋಪಿ ಮುಸ್ತಫಾನನ್ನು ಮಹಾರಾಷ್ಟ್ರದಲ್ಲಿ ಬಂಧಿಸಿ, ಆತನಿಂದ ಒಂದು ಕಂಟ್ರಿ ಪಿಸ್ತೂಲ್ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


ಕೊಲೆ ಪ್ರಕರಣಗಳಿಂದ ಸುದ್ದಿಯಾಗುವ ಭೀಮಾ ತೀರದಲ್ಲಿ ಆಗಾಗ ನೆತ್ತರು ಹರಿಯುತ್ತಿದೆ. ಭೀಮಾ ತೀರದಲ್ಲಿ ಗುಂಡಿನ ಸದ್ದು ಕೇಳಿ ಬಂದರೆ ಹೆಣ ಉರುಳಿತು ಎಂದೇ ಅರ್ಥ. ವಿರೋಧಿಗಳು ನಡೆಸಿದ ಗುಂಡಿನ ದಾಳಿಗೆ ಪಟ್ಟಣ ಪಂಚಾಯತ್​ ಸದಸ್ಯೆಯ ಪತಿ ಕೊಲೆಗೀಡಾಗಿದ್ದರು. ಚಡಚಣ ಪಟ್ಟಣದ ನೀವರಗಿ ರಸ್ತೆ ಬಳಿ ನಡೆದ ಘಟನೆಯಲ್ಲಿ ಅಶೋಕ್ ಮಲ್ಲಪ್ಪ ಗಂಟಗಲ್ಲಿ ಹತ್ಯೆಗೀಡಾಗಿದ್ದು ಇವರು ಪಟ್ಟಣ ಪಂಚಾಯತ್​ ಸದಸ್ಯೆಯ ಪತಿ ಆಗಿದ್ದರು.

ಗುಂಡಿನ ದಾಳಿಯಲ್ಲಿ ಅಶೋಕ್​ಗೆ ಮೂರಕ್ಕೂ ಹೆಚ್ಚು ಗುಂಡುಗಳು ತಗುಲಿತ್ತು. ಗುಂಡಿನ ದಾಳಿಯಿಂದ ಅಶೋಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು, ಕೊಲೆಗೀಡಾದ ರೌಡಿಶೀಟರ್ ಇತ್ತೀಚೆಗೆ ಪೆರೋಲ್​ ಮೇಲೆ ಮೃತ ಅಶೋಕ್ ಜೈಲಿನಿಂದ ಹೊರಬಂದಿದ್ದರು​​​. ಈತ ಕೊಲೆ ಹಾಗೂ ಇತರೆ ಕೇಸ್​ಗಳಲ್ಲಿ ಅಪರಾಧಿಯಾಗಿದ್ದರು. ಹಳೇ ದ್ವೇಷದ ಹಿನ್ನೆಲೆ ರೌಡಿಶೀಟರ್​ ಅಶೋಕ್​ನ ಕೊಲೆ ನಡೆದಿತ್ತು.

Tags: karnatakanews
Previous Post

ದಲಿತ ಮುಖ, ‘ಪವಾಡ’ ಚಿಕಿತ್ಸೆ: ಹತ್ರಾಸ್ ದೇವಮಾನವ ‘ಭೋಲೆ ಬಾಬಾ’ಗೆ ಭಕ್ತರನ್ನು ಸೆಳೆಯುವುದು ಹೇಗೆ ?

Next Post

ಹಾತ್ರಾಸ್‌ ದುರಂತಕ್ಕೆ ಕಾರಣನಾದ ಭೋಲೆ ಬಾಬಾ ಒಟ್ಟು ಆಸ್ತಿ ಎಷ್ಟು ಗೊತ್ತೇ ?

Related Posts

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ
ರಾಜಕೀಯ

ಬಂಗಾಳದಲ್ಲಿ ದೀದಿ ಎಷ್ಟು ಪವರ್ ಫುಲ್ ಲೇಡಿ..? ಮೋದಿ ಮಣಿಸುತ್ತಾಳಾ ಈ ಗಟ್ಟಿಗಿತ್ತಿ..?

by ಪ್ರತಿಧ್ವನಿ
April 27, 2026
0

“ದೀದಿ” ಎಂದು ಪ್ರಸಿದ್ಧರಾದ ಮಮತಾ ಬ್ಯಾನರ್ಜಿ ಅವರು ಇಂದಿನ ಭಾರತೀಯ ರಾಜಕೀಯದಲ್ಲಿ ಅತ್ಯಂತ ಪ್ರಭಾವಿ ಮಹಿಳಾ ನಾಯಕರಲ್ಲಿ ಒಬ್ಬರು. ಪಶ್ಚಿಮ ಬಂಗಾಳ ರಾಜ್ಯದ ರಾಜಕೀಯವನ್ನು ಕಳೆದ ಒಂದು...

Read moreDetails
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

April 27, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

April 27, 2026
ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

ರಾಜಕೀಯದ ಬಗ್ಗೆ ಮುಂದಿನ ದಿನಗಳಲ್ಲಿ ಮೌನ: ಸಮಯ ಬಂದಾಗ ತಾನಾಗಿಯೇ ಸ್ಪಷ್ಟವಾಗುತ್ತದೆ – ಡಿಸಿಎಂ ಡಿ.ಕೆ. ಶಿವಕುಮಾರ್

April 26, 2026
Next Post
ಹಾತ್ರಾಸ್‌ ದುರಂತಕ್ಕೆ ಕಾರಣನಾದ ಭೋಲೆ ಬಾಬಾ ಒಟ್ಟು ಆಸ್ತಿ ಎಷ್ಟು ಗೊತ್ತೇ ?

ಹಾತ್ರಾಸ್‌ ದುರಂತಕ್ಕೆ ಕಾರಣನಾದ ಭೋಲೆ ಬಾಬಾ ಒಟ್ಟು ಆಸ್ತಿ ಎಷ್ಟು ಗೊತ್ತೇ ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada