ಸಿಲಿಕಾನ್ ಸಿಟಿಯಲ್ಲಿ (Silicon city)ನಿಯಂತ್ರಣ ತಪ್ಪಿದ ಗೂಡ್ಸ್ ವಾಹನದಿಂದ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಓರ್ವ ವ್ಯಕ್ತಿಯ ಕಾಲು ಮುರಿತವಾಗಿದೆ.
ಫುಟ್ ಪಾತ್ (Foot path) ಏರಿ ಅಂಗಡಿಗೆ ನುಗ್ಗಿದ ಗೂಡ್ಸ್ ವಾಹನ ಹಾನಿ ಉಂಟುಮಾಡಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು, ನಿನ್ನೆ ಮಧ್ಯಾಹ್ನ 2.30 ಕ್ಕೆ ನಡೆದಿರುವ ಅಪಘಾತ ಎಂದು ತಿಳಿದು ಬಂದಿದೆ.
![](https://pratidhvani.com/wp-content/uploads/2024/06/da402a59-9cf2-45a4-b5df-3dc2bdcda630-820x1024.jpeg)
ಸುಬ್ರಹ್ಮಣ್ಯನಗರ ಮುಖ್ಯ ರಸ್ತೆಯಲ್ಲಿ ನಡೆದ ಘಟನೆ ಇದಾಗಿದ್ದು, ರಸ್ತೆಯಲ್ಲಿ ಬೈಕ್ ನಿಲ್ಲಿಸಿ ನಿಂತಿದ್ದ ಸವಾರನಿಗೆ ನಿಯಂತ್ರಣ ತಪ್ಪಿ ವೇಗವಾಗಿ ಬಂದ ಪಿಕಪ್ ವಾಹನ(Pickup vehicle) ಡಿಕ್ಕಿ ಹೊಡೆದಿದೆ.
ನಂತರ ಬೈಕ್ ಸವಾರನನ್ನು ಗುದ್ದಿ ಅಂಗಡಿಗೆ ನುಗ್ಗಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಾಳು ವ್ಯಕ್ತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಲ್ಲೇಶ್ವರಂ (Malleshwaram) ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.