ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ (Renuka swamy murder case) ಸಿಲುಕಿ ನಲುಗಿ ಹೋಗಿರುವ ನಟ ದರ್ಶನ್ (Actor darshan) ರಕ್ಷಣೆಗೆ ಕೊನೆಗೂ ಪತ್ನಿ ವಿಜಯಲಕ್ಷ್ಮಿ (Vijayalakshmi) ಇದೀಗ ಮುಂದಾಗಿದ್ದಾರೆ. ದರ್ಶನ್ ಬಂಧವಾದಾಗಿನಿಂದಲೂ ಈ ಬಗ್ಗೆ ಹೆಚ್ಚೇನು ಪ್ರತಿಕ್ರಿಯೆ ನೀಡಿರದ ವಿಜಯಲಕ್ಷ್ಮಿ ಸದ್ದಿಲ್ಲದೇ ಪತಿಯನ್ನು ರಕ್ಷಿಸಲು ಮುಂದಾಗಿದ್ದಾರೆ.

ಹೇಗಾದ್ರೂ ಮಾಡಿ ಈ ಕೊಲೆ ಕೇಸ್ ನಲ್ಲಿ ದರ್ಶನ್ ಗೆ ಜಾಮೀನು ಕೊಡಿಸಲು ಪತ್ನಿ ವಿಜಯಲಕ್ಷ್ಮಿ ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ. ಇದೇ ವಿಚಾರವಾಗಿ ನಿನ್ನೆ ಸಂಜೆ ಪ್ರಖ್ಯಾತ ವಕೀಲ ಸಿ ವಿ ನಾಗೇಶ್ (CV Nagesh) ಭೇಟಿ ಮಾಡಿರುವ ವಿಜಯಲಕ್ಷ್ಮಿ, ತಮ್ಮ ಪತಿಗೆ ಜಾಮೀನು ಕೊಡಿಸುವಂತೆ ಮನವಿ ಮಾಡಿದ್ದಾರೆ.

ಇದಕ್ಕೆ ಸ್ಪಂದಿಸಿರುವ ವಕೀಲ ಸಿ ವಿ ನಾಗೇಶ್ ಕೇಸ್ ಕೈ ಗೆತ್ತಿಕೊಳ್ಳಲು ಒಪ್ಪಿದ್ದಾರೆ ಎನ್ನಲಾಗ್ತಿದೆ. ಅಲದರಂತೆ ಇಂದು ಬೆಳಗ್ಗೆ ಸಿ ವಿ ನಾಗೇಶ್ ರ ಜೂನಿಯರ್ಸ್ ದರ್ಶನ್ ಭೇಟಿ ಮಾಡಿ ಘಟನೆ ಬಗ್ಗೆ ಮಾಹಿತಿ ಪಡೆಸುಕೊಂಡಿದ್ದಾರೆ.
ಹೀಗಾಗಿ ಇದೀಗ ಪ್ರಕರಣ ಮತ್ತೆ ರೋಚಕ ಪಡೆಯುವ ಸಾಧ್ಯತೆ ಇದ್ದು, ಇಬ್ಬರು ಬಲಿಷ್ಠ ಅಪೊನೆಂಟ್ & ಬಲಿಷ್ಠ ಪ್ರಾಸಿಕ್ಯೂಷನ್ ನಡುವಿನ ಜಿದ್ದಾ ಜಿದ್ದಿಗೆ ಈ ಪ್ರಕರಣ ಸಾಕ್ಷಿಯಾಗಲಿದೆ.






