• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

S.R ಹಿರೇಮಠ ಆರೋಪಕ್ಕೆ ಆಹ್ವಾನ ಕೊಟ್ಟ ಕೇಂದ್ರ ಸಚಿವ ಕುಮಾರಸ್ವಾಮಿ..!

ಪ್ರತಿಧ್ವನಿ by ಪ್ರತಿಧ್ವನಿ
June 19, 2024
in Top Story, ದೇಶ, ರಾಜಕೀಯ, ವಿದೇಶ, ವಿಶೇಷ
0
S.R ಹಿರೇಮಠ ಆರೋಪಕ್ಕೆ ಆಹ್ವಾನ ಕೊಟ್ಟ ಕೇಂದ್ರ ಸಚಿವ ಕುಮಾರಸ್ವಾಮಿ..!
Share on WhatsAppShare on FacebookShare on Telegram

ಬಳ್ಳಾರಿಯ ಸಂಡೂರು ಗಣಿಗಾರಿಕೆಗೆ ಒಪ್ಪಿಗೆ ನೀಡಿರೋ ವಿಚಾರದ ಬಗ್ಗೆ ಧಾರವಾಡದಲ್ಲಿ ಕೇಂದ್ರ ಸಚಿವ ಎಚ್‌.ಡಿ.‌ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. 2016 ರಿಂದಲೇ ಈ ಯೋಜನೆಗೆ ಪ್ರಸ್ತಾಪ ಇತ್ತು. ಇದು ನನ್ನಿಂದ ಈಗ ಆಗಿರೋದು ಅಲ್ಲ. ಈ ವಿಷಯ ಪ್ರಾರಂಭ ಆಗಿರೋದು 2016 ರಿಂದ. ದೇವದಾರ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಒಪ್ಪಿಗೆಯ ಪ್ರಸ್ತಾವನೆ ರಾಜ್ಯದಿಂದ ಹೋಗಿತ್ತು. 2017 ರಲ್ಲಿ ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟಿದೆ. ಕೇಂದ್ರದ ಅರಣ್ಯ ಪರಿಸರ ಇಲಾಖೆಯೂ ಒಪ್ಪಿಗೆ ಕೊಟ್ಟಿದೆ. 2016 ರಿಂದ ಪ್ರಾರಂಭ ಆಗಿ ಸಹಿ ಹಂತಕ್ಕೆ ನನ್ನ ಮುಂದೆ ಬಂದಿತ್ತು. ಫೈಲ್ ಕ್ಲಿಯರೆನ್ಸ್‌ಗೆ ಮಾತ್ರ ನನ್ನ ಬಳಿ ಬಂದಿತ್ತು ಎಂದಿದ್ದಾರೆ.

ADVERTISEMENT

ಎರಡು ಫೈನಾನ್ಸಿಯಲ್ ಸಂಸ್ಥೆಗಳಲ್ಲಿ ಸಾಲ‌ ಪಡೆಯಲು ಕೇಂದ್ರ ಸರ್ಕಾರವನ್ನು ಕೇಳಿದ್ದರು. ಗಣಿ ಕಂಪನಿಗಳು ಕೇಳಿದ್ದವು, ಇದೆಲ್ಲವೂ ಹಿಂದಿನ ಪ್ರಕ್ರಿಯೆ ಆಗಿದ್ದು, ನಾನಾಗಿಯೇ ಹೊಸದಾಗಿ ಮಾಡಿದ್ದಲ್ಲ. ಎಸ್.ಆರ್. ಹಿರೇಮಠ ಆರೋಪ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಅವರು ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟಿದ್ದಾರೆ. ಆದರೆ ಅವರು ನೇರವಾಗಿ ಬಂದು ನನ್ನ ಭೇಟಿಯಾಗಲಿ. ನನ್ನ ಕಚೇರಿ ಯಾವಾಗಲೂ ತೆರೆದಿರುತ್ತದೆ. ಅವರು ಬಂದು ಏನಿದೆ ಚರ್ಚೆ ಮಾಡಲಿ, ಚರ್ಚೆಗೆ ನಾನು ಮುಕ್ತವಾಗಿದ್ದೇನೆ. ಲೋಕಾಯುಕ್ತ, ಕೋರ್ಟ್‌ಗೆ ಹೋಗಿ ಮುಗಿದು ಹೋಗಿದೆ. ಅಂತಹುದಕ್ಕೆ ನಾನು ಸಹಿ ಮಾಡಿದ್ದು, ಅದಿರು ಉತ್ಪಾದನೆಗೆ ಮಾತ್ರ ಕೊಟ್ಟಿರೋ ಒಪ್ಪಿಗೆ ಇದು. ಇದು ಹೊಸದಾದ ಗಣಿಗಾರಿಕೆ ಅನುಮತಿ ಅಲ್ಲ. ಹಿರೇಮಠರಿಗೆ ಗೊಂದಲಗಳಿದ್ದಲ್ಲಿ ಅವರ ಬಳಿಯ ರೇಕಾರ್ಡ್ಸ್ ತಗೊಂಡ ಬರ್ಲಿ ಎಂದಿದ್ದಾರೆ.

ರಾಜ್ಯದಲ್ಲಿ ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್ ವಿಚಾರದ ಬಗ್ಗೆ ಮಾತನಾಡಿದ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ, ನಾನು ಈಗ ಹೊಸದಾಗಿ ಮಂತ್ರಿಯಾಗಿದ್ದೇನೆ. ಚೆನ್ನೈ-ಬೆಂಗಳೂರು, ಬೆಂಗಳೂರು-ಪುಣೆ-ಮುಂಬೈ ಕಾರಿಡಾರ್ ಬಗ್ಗೆ ಚರ್ಚೆಯಾಗಿದೆ. ಆದರೆ ನಮ್ಮ ನಿರೀಕ್ಷೆಗೆ ಸ್ಪೀಡ್ ಇಲ್ಲ. ಹೀಗಾಗಿ ಅದರ ಬಗ್ಗೆ ಈಗ ಚರ್ಚೆ ಮಾಡುತ್ತೇವೆ. ಪುಣೆ – ಬೆಂಗಳೂರು ಎನ್ಎಚ್ 4 ಅಕ್ಕಪಕ್ಕ ಕೈಗಾರಿಕೆಗಳು ಸ್ಥಾಪನೆಯಾಗದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ನನ್ನ ಬೃಹತ್ ಕೈಗಾರಿಕೆ ಇಲಾಖೆ ಹಣ ಹೂಡಿಕೆ‌ ಮಾಡುವಂತಹುವುದಲ್ಲ. ಕೈಗಾರಿಕೆಗಳ ಆರಂಭಕ್ಕೆ ಸಂಬಂಧಿಸಿದ ಪಾಲಿಸಿ ಮಾಡೋದು ನಮ್ಮ ಇಲಾಖೆ ಕೆಲಸ. ಆದರೆ ಕೇಂದ್ರ ಸರ್ಕಾರದ ಆತ್ಮ ನಿರ್ಭರ ಕಾರ್ಯಕ್ರಮವಿದೆ. ಈ ಯೋಜನೆ ಅಡಿ ಸಬ್ಸಿಡಿ, ಇತರೆ ಪಾಲಿಸಿ ಮಾಡುತ್ತಿದ್ದಾರೆ. ಆ ಪಾಲಿಸಿ ಅಡಿ ರಾಜ್ಯಕ್ಕೆ ಅನುಕೂಲ ಆಗುವುದನ್ನು ಮಾಡುತ್ತೇವೆ. ಹಲವಾರು ಕಡೆ ಕೈಗಾರಿಕೆ ತರಲು ಮುಂದಾಗುತ್ತವೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗದ ಕೈಗಾರಿಕಾ ಪ್ರಸ್ತಾಪಗಳು ನನ್ನ ಬಳಿ ಬರಬಹುದು. ಹಾಗೇ ಬಂದಾಗ ಪ್ರಾಮಾಣಿಕವಾಗಿ ಸ್ಪಂದಿಸುವೆ ಎಂದಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳ ಸ್ಥಾಪನೆ ಹಿನ್ನಡೆ ವಿಚಾರಕ್ಕೆ ಸಂಬಂಧಿಸದಂತೆ ಮಾತನಾಡಿ, ನಾನು ನಿನ್ನೆ, ಮೊನ್ನೆ, ಉತ್ತರ ಕರ್ನಾಟಕಕ್ಕೆ ಬಂದವನಲ್ಲ. ನಾನು ಹಿಂದೆ 14 ತಿಂಗಳ ಕಾಲ ಸಿಎಂ ಆಗಿದ್ದೆ. ಕೊಪ್ಪಳದಲ್ಲಿ ಎಲೆಕ್ಟ್ರಾನಿಕ್ ಟಾಯ್ಸ್ ಉದ್ಯಮ ಮಾಡಿದ್ದೇವೆ. ಅಲ್ಲಿ ಅನೇಕರಿಗೆ ಕೆಲಸ ಸಿಕ್ಕಿದೆ. ಬೇರೆ ಬೇರೆ ಸರ್ಕಾರಗಳು ತೆಗದುಕೊಂಡ ನಿರ್ಧಾರಗಳ ಬಗ್ಗೆ ನಾನು ಮಾತನಾಡಲಾರೆ. ಮಹದಾಯಿ ಯೋಜನೆ ವಿಳಂಬ ವಿಚಾರಕ್ಕೆ ಪ್ರತಿಕ್ರಿಯೆ ಕೊಟ್ಟ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ನಾನು ಮಂತ್ರಿಯಾಗಿ ಈಗ 15 ದಿನ ಆಗಿದೆ. ಇದು ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆ. 2006ರಲ್ಲಿ ನಾನು ಸಿಎಂ ಆಗಿದ್ದಾಗ ಕಳಸಾ-ಬಂಡೂರಿಗೆ ಅನುಮತಿ ಕೊಟ್ಟಿದ್ದೆ. ಆಗ ನಾನೇ ನೂರು ಕೋಟಿ ಹಣ ಇಟ್ಟಿದ್ದೆ. 2006ರಿಂದ 2014ರವರೆಗೆ ಹಲವಾರು ಸರ್ಕಾರಗಳು ಬಂದಿವೆ. ಈಗಾಗಲೇ ನ್ಯಾಯಾಧೀಕರಣದಿಂದ ನೀರು ಹಂಚಿಕೆ ಆಗಿದೆ. ಗೆಜೆಟ್ ನೊಟಿಫಿಕೇಷನ್ ಆಗಿತ್ತು. ಗೋವಾ ಸರ್ಕಾರದ ತಕರಾರು‌ ಇದೆ. ಕಾನೂನು ರೀತಿ ನಮ್ಮ ಪಾಲಿನ ನೀರು ಪಡೆಯಬೇಕಿದೆ. ಇನ್ನೊಂದು ತಿಂಗಳಲ್ಲಿ ಈ ಬಗ್ಗೆ ಮಾತನಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

Tags: Congress Partyನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ದರ್ಶನ್ ಸೇಫ್ ಮಾಡಲು ಪ್ರಭಾವಿಗಳ ಷಡ್ಯಂತ್ರ ?! SPP ಪ್ರಸನ್ನ ಕುಮಾರ್ ಬದಲಾಯಿಸಲು ಒತ್ತಡ !

Next Post

ಜನಪ್ರಿಯತೆಯಲ್ಲಿ ಕಿಂಗ್ ಕೊಹ್ಲಿ ನಂ.1! ಬಾಲಿವುಡ್ ಸೆಲೆಬ್ರೆಟಿಗಳಿಗೆ ಸೆಡ್ಡು ಹೊಡೆದ ವಿರಾಟ್ !

Related Posts

ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”
ವಿದೇಶ

ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”

by ಪ್ರತಿಧ್ವನಿ
April 27, 2026
0

ಪಶ್ಚಿಮ ಆಫ್ರಿಕಾದ ಮಾಲಿ ದೇಶದಲ್ಲಿ ಶನಿವಾರ (ಏಪ್ರಿಲ್ 25) ಭಾರೀ ಉಗ್ರ ದಾಳಿ ನಡೆದಿದ್ದು, ಇತ್ತೀಚಿನ ವರ್ಷಗಳಲ್ಲಿಯೇ ಅತಿದೊಡ್ಡ ದಾಳಿಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ರಾಜಧಾನಿ ಬಮಾಕೊ ಸೇರಿದಂತೆ...

Read moreDetails
ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

ರಾಜಕೀಯದ ಬಗ್ಗೆ ಮುಂದಿನ ದಿನಗಳಲ್ಲಿ ಮೌನ: ಸಮಯ ಬಂದಾಗ ತಾನಾಗಿಯೇ ಸ್ಪಷ್ಟವಾಗುತ್ತದೆ – ಡಿಸಿಎಂ ಡಿ.ಕೆ. ಶಿವಕುಮಾರ್

April 26, 2026
ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

April 26, 2026
150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

April 26, 2026
ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

April 26, 2026
Next Post
ಜನಪ್ರಿಯತೆಯಲ್ಲಿ ಕಿಂಗ್ ಕೊಹ್ಲಿ ನಂ.1! ಬಾಲಿವುಡ್ ಸೆಲೆಬ್ರೆಟಿಗಳಿಗೆ ಸೆಡ್ಡು ಹೊಡೆದ ವಿರಾಟ್ !

ಜನಪ್ರಿಯತೆಯಲ್ಲಿ ಕಿಂಗ್ ಕೊಹ್ಲಿ ನಂ.1! ಬಾಲಿವುಡ್ ಸೆಲೆಬ್ರೆಟಿಗಳಿಗೆ ಸೆಡ್ಡು ಹೊಡೆದ ವಿರಾಟ್ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada