ಬೆಂಗಳೂರು: ಆರ್ಥಿಕ ವ್ಯವಸ್ಥೆಗೆ ಅಬಕಾರಿ ಸುಂಕ ಭರ್ಜರಿ ಲಾಭ ತಂದು ಕೊಟ್ಟಿದೆ.
ರಾಜ್ಯದ ಬೊಕ್ಕಸಕ್ಕೆ ಮದ್ಯಪ್ರಿಯರು ಭಾರೀ ಆದಾಯ ನೀಡಿದ್ದಾರೆ. ಪ್ರತಿ ವರ್ಷಕ್ಕಿಂತ ಈ ವರ್ಷ ರಾಜ್ಯದ ಮದ್ಯ (Alcohol) ಮಾರಾಟ ದಾಖಲೆ ಬರೆದಿದೆ. ಸರ್ಕಾರ ಅಂದುಕೊಂಡಿದ್ದಕ್ಕಿಂತಲೂ ಈ ಬಾರಿ ಹೆಚ್ಚು ಮದ್ಯ ಮಾರಾಟವಾಗಿದೆ. ಹೀಗಾಗಿ ಅಬಕಾರಿ ಇಲಾಖೆಗೆ (Karnataka Excise Department) ಕೋಟಿ ಕೋಟಿ ಆದಾಯ ಹರಿದು ಬಂದಿದೆ.
ಕಳೆದ ವರ್ಷಕ್ಕಿಂತ ಈ ವರ್ಷ ಶೇ. 15 ರಷ್ಟು ಮದ್ಯ ವರಮಾನ ಹೆಚ್ಚಾಗಿದೆ. ಚುನಾವಣೆ ಇರುವ ಹಿನ್ನೆಲೆಯಲ್ಲಿ ಮತ್ತಷ್ಟು ಆದಾಯ ಹರಿದು ಬಂದಿದೆ. ರಾಜ್ಯದಲ್ಲಿ ಮೂರು ಬಾರಿ ದರ ಏರಿಕೆ ನಡುವೆಯೂ ಮದ್ಯ ಮಾರಾಟ ಬಾರಿ ಹೆಚ್ಚಳವಾಗಿದೆ. ಅಬಕಾರಿ ಇಲಾಖೆಗೆ ಸರ್ಕಾರ 34.500 ಕೋಟಿ ಟಾರ್ಗೆಟ್ ನೀಡಲಾಗಿತ್ತು. ಆದರೆ, ಆರ್ಥಿಕ ವರ್ಷದಲ್ಲಿ ಬರೋಬ್ಬರಿ 34.628 ಕೋಟಿ ಆದಾಯ ಸಂಗ್ರಹವಾಗಿದೆ. ಅಂದರೆ ಸರ್ಕಾರದ ಟಾರ್ಗೆಟ್ ಗಿಂತಲೂ 128 ಕೋಟಿ ರೂ. ಹೆಚ್ಚಳ ಆದಾಯ ಬಂದಿದೆ.
ಹಿಂದಿನ ವರ್ಷ 32 ಸಾವಿರ ಕೋಟಿ ರೂ. ಟಾರ್ಗೆಟ್ ನೀಡಲಾಗಿತ್ತು. ಈ ಸಂದರ್ಭದಲ್ಲಿ 29,920 ಕೋಟಿ ರೂ. ಆದಾಯ ಹರಿದು ಬಂದಿತ್ತು. ಜೂನ್ ನ ಮೊದಲ ವಾರದಲ್ಲಿ ಮದ್ಯ ಮಾರಾಟ ಬಂದ್ ಆಗಿರಲಿದೆ. ಹೀಗಾಗಿ ಎಲ್ಲೆಡೆ ಈಗಿನಿಂದಲೇ ಸ್ಟಾಕ್ ಮಾಡಿಕೊಳ್ಳಲಾಗುತ್ತಿದೆ.