ಮುಖದ ಸೌಂದರ್ಯ ಹೆಚ್ಚಿಸುವಲ್ಲಿ ಕಣ್ಣುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ..ಯಾವುದೆ ವ್ಯಕ್ತಿಯನ್ನು ನೋಡುವಾಗ ಹಾಗೂ ಮಾತನಾಡುವಾಗ ಜನ ಗಮನಿಸೋದು ಕಣ್ಣುಗಳನ್ನ..ಇನ್ನು ಕಣ್ಣುಗಳ ಅಂದವನ್ನು ಹೆಚ್ಚು ಮಾಡುವುದು ರೆಪ್ಪೆಗಳು..ಕೆಲವರಿಗೆ ದಟ್ಟವಾದ ರೆಪ್ಪೆಗಳಿರುತ್ತವೆ..ಅವು ಕಣ್ಣುಗಳನ್ನು ಇನ್ನಷ್ಟು ಚಂದವಾಗಿಸುತ್ತದೆ..ಇನ್ನು ಕೆಲವರಿಗೆ ತುಂಬಾ ತೆಳುವಾದ ರೆಪ್ಪೆಗಳಿರುತ್ತವೆ..ಅಂಥವರು ಕಣ್ಣಿನ ಅಂದವನ್ನು ಹೆಚ್ಚಾಗಿಸಲು ಆರ್ಟಿಫಿಶಿಯಲ್ ಐ ಲ್ಯಾಶಸ್ ನ ಬಳಸುತ್ತಾರೆ..ಹಾಗೂ ಹಣ ಇದ್ದವರು ಲ್ಯಾಶ್ ಇಂಪ್ಲಾಂಟ್ಸ್ ಮಾಡಿಸುತ್ತಾರೆ.. ಇದೆಲ್ಲದಕ್ಕೂ ನೀವು ದುಬಾರಿ ಖರ್ಚು ಮಾಡುವ ಬದಲಿಗೆ ನೈಸರ್ಗಿಕವಾಗಿ ದಪ್ಪವಾದ ರೆಪ್ಪೆಗಳನ್ನ ನಿಮ್ಮದಾಗಿಸಿಕೊಳ್ಳಲು ಈ ಹ್ಯಾಕ್ ನ ಮಾಡಿ..

ಹರಳೆಣ್ಣೆ
ಪ್ರತಿದಿನ ರಾತ್ರಿ ಮಲಗುವುದಕ್ಕಿಂತ ಮುಂಚೆ ನಿಮ್ಮ ರೆಪ್ಪೆಗಳಿಗೆ ಹರಳೆಣ್ಣೆಯನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ..ಬೆಳಗ್ಗೆ ಎದ್ದು ಉಗುರು ಬೆಚ್ಚಗಿನ ನೀರಿನಿಂದ ವಾಶ್ ಮಾಡುವುದರಿಂದ ಉದ್ದ ಹಾಗೂ ದಟ್ಟವಾದ ರೆಪ್ಪೆಗಳು ನಿಮ್ಮದಾಗುತ್ತದೆ..
ವಿಟಮಿನ್ ಇ
ರೆಪ್ಪೆಗಳು ಹಾಗೂ ಹುಬ್ಬು ದಟ್ಟವಾಗಿ ಬೆಳಿಬೇಕು ಅಂದ್ರೆ ಪ್ರತಿದಿನ ವಿಟಮಿನ್ ಇ ಕ್ಯಾಪ್ಸುಲ್ ನ ಹಚ್ಚುವುದು ಉತ್ತಮ..ಇದು ಕೂದಲು ಬೆಳವಣಿಗೆಗೆ ಮಾತ್ರವಲ್ಲದೆ ತ್ವಜೆಯ ಹೊಳಪನ್ನು ಕೂಡ ಹೆಚ್ಚಿಸುತ್ತದೆ.

ಆಲಿವ್ ಎಣ್ಣೆ
ಕೂದಲ ಬೆಳವಣಿಗೆಗೆ ಆಲಿವ್ ಎಣ್ಣೆ ಉತ್ತಮ.ಪ್ರತಿದಿನ ಆಲಿವ್ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಉದ್ದ ಹಾಗೂ ದಟ್ಟವಾದ ರೆಪ್ಪೆ ನಿಮ್ಮದಾಗುತ್ತದೆ..

ಕೊಬ್ಬರಿ ಎಣ್ಣೆ
2 ಟೇಬಲ್ ಸ್ಪೂನ್ ನಷ್ಟು ಕೊಬ್ಬರಿ ಎಣ್ಣೆಯನ್ನು ಉಗುರು ಬಿಸಿ ಮಾಡಿ ನಿಮ್ಮ ರೆಪ್ಪೆಗಳಿಗೆ ಹಚ್ಚಿ ಮಸಾಜ್ ಮಾಡುವುದರಿಂದ ರೆಪ್ಪೆಗಳು ಕಪ್ಪು ಮತ್ತು ದಟ್ಟವಾಗಿ ಬೆಳೆಯುತ್ತದೆ. ಡಾರ್ಕ್ ಸರ್ಕಲ್ಸ್ ಹೆಚ್ಚಿದ್ರೆ ಕೂಡ ಕೊಬ್ಬರಿ ಎಣ್ಣೆ ಬೇಗನೆ ನಿವಾರಣೆ ಮಾಡುತ್ತದೆ ನಿಮ್ಮ ತ್ವಚೆಯನ್ನ ಹೊಳಪು ಮಾಡುತ್ತದೆ.






