ಕೆಲವರಿಗೆ ತಮ್ಮ ಉಗುರಿನ ಬಣ್ಣ ಬಿಳಿಯ ಬದಲು ಹಳದಿಯಾಗಿರುತ್ತದೆ.ಇದಕ್ಕೆ ಕಾರಣ ಅಡುಗೆ ಮಾಡುವುದರಿಂದ,ಇಲ್ಲವಾದಲ್ಲಿ ಪದೇ ಪದೇ ನಾವು ಉಗುರಿನ ಬಣ್ಣವನ್ನು ಬದಲಾಯಿಸುವುದರಿಂದ. ಹಾಗೂ ಕೆಲವರು ತಮ್ಮ ಉಗುರಿನ ಬಗ್ಗೆ ಕಾಳಜಿ ವಹಿಸದಿದ್ದರು ಹಳದಿ ಆಗಿರುತ್ತದೆ.ಹಳದಿ ಉಗುರುಗಳನ್ನು ಬಿಳುಪಾಗಿಸಲು ಈ ಟ್ರಿಕ್ ನ ಮಾಡಿ.
![](https://pratidhvani.com/wp-content/uploads/2024/05/IMG_7285.jpeg)
ನಿಂಬೆ ರಸ
ಒಂದು ಬೌಲ್ ಗೆ ಸ್ವಲ್ಪ ನೀರನ್ನ ಹಾಕಿ.ಅದಕ್ಕೆ ನಿಂಬೆ ರಸವನ್ನು ಬೆರೆಸಿ ನಿಮ್ಮ ಉಗುರುಗಳನ್ನ ಅದರೊಳಗೆ ಮೂರು ನಿಮಿಷಗಳ ಕಾಲ ನೆನೆಸಿಟ್ಟು ಬಳಿಕ ತೆಗೆದು ಕೈಗಳನ್ನ ವಾಶ್ ಮಾಡುವುದರಿಂದ ಹಳದಿ ಉಗುರು ಬಿಳುಪಾಗುವುದಕ್ಕೆ ಸಹಾಯಮಾಡುತ್ತದೆ. ನಿಂಬೆ ರಸದಲ್ಲಿ ಫಿಟ್ ಆಸಿಡ್ ಅಂಶ ಹೆಚ್ಚಿರುವುದರಿಂದ ಕೆಟ್ಟ ಅಂಶವನ್ನು ತೆಗೆದುಹಾಕುತ್ತದೆ.
![](https://pratidhvani.com/wp-content/uploads/2024/05/IMG_7286.jpeg)
ಅಡುಗೆ ಸೋಡಾ
ಒಂದು ಟಬ್ಬಲ್ಲಿ ಎರಡು ಟೇಬಲ್ ಸ್ಪೂನ್ ಅಷ್ಟು ಅಡುಗೆ ಸೋಡವನ್ನು ಹಾಕಿ ಅದಕ್ಕೆ ನೀರನ್ನು ಬೆರೆಸಿ ನಿಮ್ಮ ಕೈ ಹಾಗೂ ಕಾಲುಗಳನ್ನು ನೀರಿನೊಳಗೆ ಕೆಲ ನಿಮಿಷಗಳ ಕಾಲ ನೆನೆಸಿಟ್ಟು ಬಳಿಕ ಬೆಚ್ಚಗಿನ ನೀರಿನಿಂದ ಕೈಕಾಲುಗಳನ್ನು ತೊಳೆಯುವುದರಿಂದ ಹಳದಿ ಉಗುರು ಬಿಳುಪಾಗುತ್ತದೆ ಹಾಗೂ ಬ್ಯಾಕ್ಟೀರಿಯ ಮತ್ತು ಫಂಗಸ್ ಕೂಡ ನಿವಾರಣೆ ಆಗುತ್ತದೆ.
![](https://pratidhvani.com/wp-content/uploads/2024/05/IMG_7287.jpeg)
ಬೆಳ್ಳುಳ್ಳಿ
ಎರಡರಿಂದ ಮೂರು ಬೆಳ್ಳುಳ್ಳಿಯನ್ನ ಜಜ್ಜಿ .ಅದನ್ನ ನಿಮ್ಮ ಕೈಗಳು ಹಾಗೂ ಕಾಲುಗಳ ಉಗುರುಗಳ ಮೇಲೆ ಚೆನ್ನಾಗಿ ಉಜ್ಜಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆಯುವುದರಿಂದ ಹಳದಿ ಉಗುರು ಬೀಳುಪಾಗುತ್ತದೆ.ಬೆಳ್ಳುಳ್ಳಿಯಲ್ಲಿ ಆಂಟಿ ಫಂಗಲ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಅಂಶ ಹೆಚ್ಚಿರುವುದರಿಂದ ನಮ್ಮ ಉಗುರಿನ ಆರೋಗ್ಯವನ್ನು ಕಾಪಾಡುತ್ತದೆ.
![](https://pratidhvani.com/wp-content/uploads/2024/05/IMG_7289.jpeg)
ಹೇಗೆ ನಾವು ದೇಹದ ಪ್ರತಿ ಭಾಗದ ಮೇಲೂ ಕಾಳಜಿಯನ್ನ ವಹಿಸುತ್ತೇವೋ ಅದೇ ರೀತಿ ಉಗುರಿನ ಮೇಲು ಕೂಡ ಕಾಳಜಿಯನ್ನ ವಹಿಸುವುದು ಉತ್ತಮ ಕೆಲ ಆರೋಗ್ಯ ಸಮಸ್ಯೆಗಳಿಂದಲೂ ಕೂಡ ನಮ್ಮ ಉಗುರಿನ ಬಣ್ಣ ಬದಲಾಗುವ ಚಾನ್ಸಸ್ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ವೈದ್ಯರ ಸಲಹೆಯನ್ನ ಪಡೆದುಕೊಳ್ಳುವುದು ಒಳಿತು.