• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಪ್ಲೇ ಆಫ್ ಹಾದಿ ಸುಗಮ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್

ಪ್ರತಿಧ್ವನಿ by ಪ್ರತಿಧ್ವನಿ
May 6, 2024
in ಕ್ರೀಡೆ
0
ಪ್ಲೇ ಆಫ್ ಹಾದಿ ಸುಗಮ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್
Share on WhatsAppShare on FacebookShare on Telegram

ಧರ್ಮಶಾಲಾ: ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪಂಜಾಬ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವುದರ ಮೂಲಕ ಪ್ಲೇ ಆಫ್ ಹಾದಿಯನ್ನು ಸುಗಮಗೊಳಿಸಿಕೊಂಡಿದೆ.

ADVERTISEMENT

ಪಂಜಾಬ್ ವಿರುದ್ಧ ವಿರುದ್ಧ 28 ರನ್‍ ಗಳ ಜಯ ಸಾಧಿಸುವುದರ ಮೂಲಕ ಚೆನ್ನೈ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ. ಇಲ್ಲಿಯವರೆಗೆ 11 ಪಂದ್ಯ ಆಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಹೈದರಾಬಾದ್ ನಾಲ್ಕನೇ ಸ್ಥಾನ ಹಾಗೂ ಲಕ್ನೋ 5ನೇ ಸ್ಥಾನದಲ್ಲಿದೆ. ಈ ಮೂರು ತಂಡಗಳು 12 ಅಂಕ ಗಳಿಸಿವೆ. ಈಗಾಗಲೇ ರಾಜಸ್ಥಾನ್ ಹಾಗೂ ಕೆಕೆಆರ್ ಪ್ಲೇ ಆಫ್ ಗೆ ಪ್ರವೇಶ ಪಡೆದಿವೆ. ಮೂರು ಹಾಗೂ ನಾಲ್ಕನೇ ಸ್ಥಾನಕ್ಕಾಗಿ ಪೈಪೋಟಿ ನಡೆದಿದ್ದು, ಚೆನ್ನೈ, ಲಕ್ನೋ ಹಾಗೂ ಹೈದರಾಬಾದ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ಪೈಕಿ ಚೆನ್ನೈ ಉತ್ತಮ ರನ್ ರೇಟ್ ಹೊಂದಿದೆ. ಈ ಮೂರು ಪಂದ್ಯಗಳು ಇನ್ನುಳಿದ ಮೂರು ಪಂದ್ಯಗಳಲ್ಲಿ ಗೆಲ್ಲಬೇಕಿದೆ. ಇಲ್ಲಾವದರೆ, ಅನಿರೀಕ್ಷಿತ ರೀತಿಯಲ್ಲಿ ಬೇರೆ ತಂಡಗಳೂ ಪ್ಲೇ ಆಫ್ ಗೆ ಪ್ರವೇಶ ಪಡೆಯಬಹುದು.

ಪಂಜಾಬ್ ವಿರುದ್ಧ ಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿತ್ತು. ಈ ಸಾಧಾರಣ ಗುರಿ ಬೆನ್ನಟ್ಟಿದ್ದ ಪಂಜಾಬ್ ಸ್ಪರ್ಧೆ ನೀಡದೆ ಸೋಲು ಕಂಡಿತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‍ಗಳನ್ನು ಕಳೆದುಕೊಂಡು 139 ರನ್ ಗಳಿಸಿತು.
ಚೆನ್ನೈ ಕೂಡ ರನ್ ಗಳಿಸಲು ಪರದಾಟ ನಡೆಸಿತು. ಅಜಿಂಕ್ಯ ರಹಾನೆ ಪಂದ್ಯದ ಎರಡನೇ ಓವರ್‌ನಲ್ಲೇ 9 ರನ್‍ಗಳಿಗೆ ಆರ್ಶದೀಪ್ ಸಿಂಗ್‍ಗೆ ವಿಕೆಟ್ ಒಪ್ಪಿಸಿದರು. ನಾಯಕ ಗಾಯಕ್ವಾಡ್ ಹಾಗೂ ಡೇರಿಲ್ ಮಿಚೆಲ್ 32 ಎಸೆತಗಳಲ್ಲಿ 57 ರನ್ ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ಗಾಯಕ್ವಾಡ್ 32 ರನ್ ಗಳಿಸಿ ಔಟ್ ಆದರು. ಶಿವಂ ದುಬೆ ಒಂದೇ ಎಸೆತಕ್ಕೆ ಔಟಾದರು. ಡೇರಿಲ್ ಮಿಚೆಲ್ 30 ರನ್ ಗಳಿಸಿ ಹರ್ಷಲ್ ಪಟೇಲ್‍ಗೆ ವಿಕೆಟ್ ಒಪ್ಪಿಸಿದರು. ಧೋನಿ ಮೊದಲ ಬೌಲ್ ಗೆ ಡಕ್ ಆಗಿ 8 ವರ್ಷಗಳ ಬಳಿಕೆ ಕೆಟ್ಟ ದಾಖಲೆ ಬರೆದರು. ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ರವೀಂದ್ರ ಜಡೇಜಾ 26 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 43 ರನ್ ಗಳಿಸಿ ತಂಡದ ಮೊತ್ತ ಏರಲು ಕಾರಣರಾದರು. ಪಂಜಾಬ್ ಪರ ರಾಹುಲ್ ಚಹಾರ್ 23 ರನ್ ನೀಡಿ 3 ಹಾಗೂ ಹರ್ಷಲ್ ಪಟೇಲ್ 24 ರನ್ ನೀಡಿ 3 ವಿಕೆಟ್ ಕಿತ್ತು ಮಿಂಚಿದರು.

ಚೆನ್ನೈ ನೀಡಿದ್ದ 168 ರನ್ ಗುರಿ ಬೆನ್ನತ್ತಿದ ಪಂಜಾಬ್ ಕೂಡ ಆರಂಭದಿಂದಲೂ ಕಳಪೆ ಪ್ರದರ್ಶನ ಮುಂದುವರೆಸಿತು. ಪ್ರಭಾಸಿಮ್ರಾನ್ ಸಿಂಗ್ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರು. 30 ರನ್ ಗಳಿಸಿದ್ದಾಗ ಔಟ್ ಆದರು. ನಂತರ ಯಾವೊಬ್ಬ ಆಟಗಾರರೂ ಪ್ರತಿರೋಧ ಒಡ್ಡುವ ಪ್ರಯತ್ನ ಮಾಡಲಿಲ್ಲ. ರವೀಂದ್ರ ಜಡೇಜಾ 3 ವಿಕೆಟ್ ಕಿತ್ತು ಮಿಂಚಿದರು.

Tags: CSKlucknowPlayOffPunjab
Previous Post

ಅತ್ಯಾಚಾರ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಅಪ್ರಾಪ್ತರು

Next Post

ಮಗನಿಗೆ ಈಜಲು ಕಲಿಸಲು ಹೋಗಿ ಪ್ರಾಣತೆತ್ತ ತಂದೆ

Related Posts

Ranji Trophy 2026: ರಣಜಿ ಟ್ರೋಫಿ ಗೆದ್ದ ಜಮ್ಮುಕಾಶ್ಮಿರ ತಂಡಕ್ಕೆ ಬಹುಮಾನಗಳ ಸುರಿಮಳೆ
Top Story

Ranji Trophy 2026: ರಣಜಿ ಟ್ರೋಫಿ ಗೆದ್ದ ಜಮ್ಮುಕಾಶ್ಮಿರ ತಂಡಕ್ಕೆ ಬಹುಮಾನಗಳ ಸುರಿಮಳೆ

by ಪ್ರತಿಧ್ವನಿ
March 1, 2026
0

ಹುಬ್ಬಳ್ಳಿಯ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿದ್ದ ಜಮ್ಮು ಮತ್ತು ಕಾಶ್ಮೀರ ತಂಡ ಬಲಿಷ್ಠ ಕರ್ನಾಟಕವನ್ನು ಮಣಿಸಿ...

Read moreDetails
ಚೊಚ್ಚಲ ರಣಜಿ ಟ್ರೋಫಿಗೆ ಮುತ್ತಿಕ್ಕಿದ ಜಮ್ಮುಕಾಶ್ಮೀರ: 67 ವರ್ಷಗಳಲ್ಲಿ ಮೊದಲ ಗೆಲುವು

ಚೊಚ್ಚಲ ರಣಜಿ ಟ್ರೋಫಿಗೆ ಮುತ್ತಿಕ್ಕಿದ ಜಮ್ಮುಕಾಶ್ಮೀರ: 67 ವರ್ಷಗಳಲ್ಲಿ ಮೊದಲ ಗೆಲುವು

February 28, 2026
IPL2026: ಐಪಿಎಲ್‌ 2026 ಹೊಸ ವೇಳಾಪಟ್ಟಿ ಪ್ರಕಟ

IPL2026: ಐಪಿಎಲ್‌ 2026 ಹೊಸ ವೇಳಾಪಟ್ಟಿ ಪ್ರಕಟ

February 28, 2026
ಸೆಮಿಫೈನಲ್ ಗೆ ಎಂಟ್ರಿ ಕೊಡುವ ಮೊದಲೇ ಮತ್ತೊಂದು ದಾಖಲೆ ಮಾಡಿದ ಟೀಮ್ ಇಂಡಿಯಾ

ಸೆಮಿಫೈನಲ್ ಗೆ ಎಂಟ್ರಿ ಕೊಡುವ ಮೊದಲೇ ಮತ್ತೊಂದು ದಾಖಲೆ ಮಾಡಿದ ಟೀಮ್ ಇಂಡಿಯಾ

February 27, 2026
ವಿಶ್ವಕಪ್‌ನಲ್ಲಿ ಭಾರತ – ಪಾಕ್‌ ಸೆಣಸಾಟ ಡೌಟ್.. : ಕಾರಣವೇನು ಗೊತ್ತಾ..?

ವಿಶ್ವಕಪ್‌ನಲ್ಲಿ ಭಾರತ – ಪಾಕ್‌ ಸೆಣಸಾಟ ಡೌಟ್.. : ಕಾರಣವೇನು ಗೊತ್ತಾ..?

February 25, 2026
Next Post
ಮಗನಿಗೆ ಈಜಲು ಕಲಿಸಲು ಹೋಗಿ ಪ್ರಾಣತೆತ್ತ ತಂದೆ

ಮಗನಿಗೆ ಈಜಲು ಕಲಿಸಲು ಹೋಗಿ ಪ್ರಾಣತೆತ್ತ ತಂದೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada