• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಅಡಕತ್ತರಿಯಲ್ಲಿ ಸಿಲುಕಿದ್ರಾ ಬಸವರಾಜ ಬೊಮ್ಮಾಯಿ?

Any Mind by Any Mind
March 10, 2024
in ಕರ್ನಾಟಕ, ರಾಜಕೀಯ
0
ಅಡಕತ್ತರಿಯಲ್ಲಿ ಸಿಲುಕಿದ್ರಾ ಬಸವರಾಜ ಬೊಮ್ಮಾಯಿ?
Share on WhatsAppShare on FacebookShare on Telegram

2024ರ ಲೋಕಸಭಾ(LokaSaba) ಚುನಾವಣೆ(Election) ಹಿನ್ನೆಲೆಯಲ್ಲಿ, ಮಾಜಿ ಮುಖ್ಯಮಂತ್ರಿ(Former Chief Minister) ಬಸವರಾಜ ಬೊಮ್ಮಾಯಿ(Basavaraj Bommai) ಅಡಕತ್ತರಿಯಲ್ಲಿ ಸಿಲುಕಿದ್ರಾ ಎಂಬ ಪ್ರಶ್ನೆ ಎದ್ದಿದೆ. 

ADVERTISEMENT

ಹಾವೇರಿ-ಗದಗ(Haveri-Gadag) ಲೋಕಸಭಾ ಕ್ಷೇತ್ರಕ್ಕೆ ಬಸವರಾಜ ಬೊಮ್ಮಾಯಿ ಅವರ ಹೆಸರು ಮುನ್ನೆಲೆಗೆ ಬಂದ ಕಾರಣ, ರಾಜಕಾರಣದಲ್ಲಿ ಅಡಕತ್ತರಿಗೆ  ಬಸವರಾಜ ಬೊಮ್ಮಾಯಿ ಸಿಲುಕಿದ್ದಾರೆ ಎಂಬ ಮಾತುಗಳು ರಾಜಕೀಯ(Political) ಪಡಸಾಲೆಯಲ್ಲಿ ಆರಂಭವಾಗಿದೆ‌. ಅಷ್ಟಕ್ಕೂ ಈ ರೀತಿಯ ಪ್ರಶ್ನೆ ಏಳಲು ಪ್ರಮುಖ ಕಾರಣವೇ, ಸದ್ಯ ಬಸವರಾಜ ಬೊಮ್ಮಾಯಿ ಅವರನ್ನು ಹಾವೇರಿ-ಗದಗ ಕ್ಷೇತ್ರದಿಂದ ಅಭ್ಯರ್ಥಿ ಮಾಡಬೇಕೆಂಬ ಹೈಕಮಾಂಡ್(High Command) ನಾಯಕರ ಸಲಹೆ ಮೇರೆಗೆ ಎಂಬುದು. ಅಷ್ಟಕ್ಕೂ ಬಸವರಾಜ ಬೊಮ್ಮಾಯಿ ಚುನಾವಣೆಗೆ ಸ್ಫರ್ಧೆ ಮಾಡಿದ್ದೇ ಆದ್ರೆ, ಅಡಕತ್ತರಿಯಲ್ಲಿ ಹೇಗೆ ಸಿಲುಕಿದಂತಾಗುತ್ತದೆ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. 

ಬಸವರಾಜ ಬೊಮ್ಮಾಯಿ(Basavaraj Bommai) ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಶಿಗ್ಗಾಂವಿ(Shiggavi) ವಿಧಾನಸಭಾ ಕ್ಷೇತ್ರದ ಬಿಜೆಪಿ(BJP) ಶಾಸಕರು ಕೂಡ. ಈಗ ಲೋಕಸಭಾ(LokaSaba) ಚುನಾವಣೆಯಲ್ಲಿ ಹಾವೇರಿ-ಗದಗ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಬೊಮ್ಮಾಯಿಗೆ ಹೈಕಮಾಂಡ್ ನಾಯಕರ ಸೂಚನೆಯನ್ನು ನೀಡಿದ್ದಾರೆ. 

ಈ ಸೂಚನೆ ಬಂದಾಗಿನಿಂದಲೂ ಇಕ್ಕಟ್ಟಿಗೆ ಸಿಲುಕಿ, ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂದು ಬಸವರಾಜ ಬೊಮ್ಮಾಯಿ ಚಿಂತಿಸುತ್ತಿದ್ದಾರೆ ಎನ್ನಲಾಗಿದೆ. 

ಅಷ್ಟಕ್ಕೂ ಬಸವರಾಜ ಬೊಮ್ಮಾಯಿಗೆ ಚಿಂತೆ ಎದುರಾಗಿದ್ದಾದ್ರೂ ಏಕೆ?

ಇತ್ತ ಹೈಕಮಾಂಡ್ ನಾಯಕರು ರಾಜ್ಯ ರಾಜಕಾರಣ ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಸೂಚನೆ ಕೊಟ್ಟ ಬೆನ್ನಲ್ಲೇ, ಬಸವರಾಜ ಬೊಮ್ಮಾಯಿ ಆತಂಕಕ್ಕೊಳಗಾಗಿದ್ದಾರೆ‌. ಬೊಮ್ಮಾಯಿಗೆ ಸ್ಫರ್ಧೆ ಮಾಡಲು ಹೈಕಮಾಂಡ್ ನಾಯಕರು ಸೂಚಿಸಿರುವುದು ಹಾವೇರಿ-ಗದಗ ಕ್ಷೇತ್ರದಿಂದ.  ಹಾವೇರಿ-ಗದಗ ಕಿತ್ತೂರು ಕರ್ನಾಟಕ ಭಾಗಕ್ಕೆ ಸೇರಲಿದೆ. ಹಾವೇರಿ-ಗದಗ, ಧಾರವಾಡ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ ಹಾಗೂ ವಿಜಯಪುರ ಈ 6 ಕ್ಷೇತ್ರಗಳು ಕಿತ್ತೂರು ಕರ್ನಾಟಕ ಭಾಗಕ್ಕೆ ಸೇರಲಿದೆ. ಹಾವೇರಿ-ಗದಗ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ ಕಣಕ್ಕೇನೋ ಇಳಿಯಬಹುದು ಸಮಸ್ಯೆಯಿಲ್ಲ.

ಆದ್ರೆ, ಇದೇ ಪ್ರಾಂತ್ಯಕ್ಕೆ ಸೇರಿರುವ ಧಾರವಾಡದ ಹಾಲಿ ಸಂಸದ ಪ್ರಹ್ಲಾದ್ ಜೋಶಿ(Prahalad Joshi) ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಮುಂದೆ ಬೆಳಗಾವಿ ಕ್ಷೇತ್ರಕ್ಕೆ ಒಂದು ವೇಳೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆಗಮಿಸಿ ಗೆದ್ದು ಸಂಸತ್‌ಗೆ ಬಂದರೆ? ಇತ್ತ ಬಾಗಲಕೋಟೆಯ ಹಾಲಿ ಸಂಸದ ಪಿ.ಸಿ.ಗದ್ದೀಗೌಡರ್‌ಗೆ ಈವರೆಗೆ ಕೇಂದ್ರದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ. ಈಗ ಅವರು ಕೂಡ ಹಿರಿಯರಿದ್ದಾರೆ. ಅವರನ್ನು ಹೈಕಮಾಂಡ್ ನಾಯಕರು ಪರಿಗಣಿಸಬಹುದು. ಒಂದು ಕಡೆ ಪ್ರಹ್ಲಾದ್ ಜೋಶಿ ಮುಂದುವರೆಯುತ್ತಾರೆ. ಇನ್ನೊಂದು ಕಡೆ ತಮ್ಮದೇ ಸಮುದಾಯದವಾದ ವೀರಶೈವ- ಲಿಂಗಾಯತ ಸಮುದಾಯಕ್ಕೆ ಜಗದೀಶ್ ಶೆಟ್ಟರ್ ಹಾಗೂ ಪಿ.ಸಿ.ಗದ್ದೀಗೌಡರ್ ಸೇರಿದ್ದಾರೆ. ಕೇಂದ್ರದಲ್ಲಿ ಸಚಿವ ಸ್ಥಾನ ಎಂದರೆ, ಈ ಇಬ್ಬರು ನಾಯಕರನ್ನು ಪರಿಗಣಿಸುತ್ತಾರೆ. ತಾವು ಕೂಡ ರಾಷ್ಟ್ರ ರಾಜಕಾರಣಕ್ಕೆ ಹೋದ್ರೆ ಅತಂತ್ರ ಆಗುತ್ತೇನೋ ಎಂಬ ಆತಂಕ ಸ್ವಲ್ಪಮಟ್ಟಿಗೆ ಕಾಡುತ್ತಿದೆ‌.  

ಇನ್ನು ತಮಗೆ ಈಗಾಗಲೇ ಮುಖ್ಯಮಂತ್ರಿ ಎಂಬ ದೊಡ್ಡ ಹುದ್ದೆಯೇ ಸಿಕ್ಕಿತ್ತು. ರಾಜ್ಯದಲ್ಲಿ ಸದ್ಯ ಶಾಸಕನಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದೇನೆ. ಇದೇ ಅವಧಿಯಲ್ಲಿ ಏನಾದ್ರೂ ರಾಜ್ಯ ರಾಜಕಾರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆಗಳಾದ್ರೆ, ತಮಗೂ ಅವಕಾಶ ಹುಡುಕಿಕೊಂಡು ಬರಬಹುದು. ಅದನ್ನು ಬಿಟ್ಟು ಈಗ ರಾಷ್ಟ್ರ ರಾಜಕಾರಣಕ್ಕೆ ಹೋಗಿದ್ದೇ ಆದ್ರೆ, ಪ್ರಾಂತ್ಯ ಆಧಾರದಲ್ಲಿ ಯಾವುದೇ ಸಚಿವ ಸ್ಥಾನ ಸಿಗದೇ ಕೇವಲ ಸಂಸದನಾಗಿ ಕಾರ್ಯನಿರ್ವಹಣೆ ಮಾಡಬೇಕಾಗಬಹುದು. ಇಂತಹ ಪರಿಸ್ಥಿತಿಗಿಂತ, ಹಾಲಿ ಶಾಸಕನಾಗಿಯೇ ಮುಂದುವರೆಯುವುದು ಸೂಕ್ತ ಎಂಬ ಲೆಕ್ಕಾಚಾರವನ್ನು ಬಸವರಾಜ ಬೊಮ್ಮಾಯಿ ಹಾಕುತ್ತಿದ್ದಾರೆ ಎನ್ನಲಾಗಿದೆ.

ಆದ್ರೆ, ಹೈಕಮಾಂಡ್ ನಾಯಕರು ಮಾತ್ರ ಬಸವರಾಜ ಬೊಮ್ಮಾಯಿಗೆ ಹಾವೇರಿ-ಗದಗ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಸೂಚನೆ ಕೊಡುತ್ತಿರುವ ಕಾರಣ. ಅಡಕತ್ತರಿಯಲ್ಲಿ ಬಸವರಾಜ ಬೊಮ್ಮಾಯಿ ಸಿಲುಕಿದ್ರಾ? ಎಂಬ ಪ್ರಶ್ನೆ ಎದುರಾಗಿದೆ.

#BasavarajBommai #FormerCM #Lokasaba #BJPKarnataka #MPelection

Previous Post

ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಸಿಗಲ್ಲ: ಚರ್ಚೆ ಏಕೆ?

Next Post

ಬಿಜೆಪಿ ಎರಡನೇ ಪಟ್ಟಿಗೆ ಕೌಂಟ್ಡೌನ್  ! ಆಕಾಂಕ್ಷಿಗಳ ಎದೆಯಲ್ಲಿ ಢವಢವ ! 

Related Posts

ಲೆಕ್ಕ ಕೊಡಿ ಅಭಿಯಾನದ ಎಫೆಕ್ಟ್‌ : ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ..!
Top Story

ಲೆಕ್ಕ ಕೊಡಿ ಅಭಿಯಾನದ ಎಫೆಕ್ಟ್‌ : ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ..!

by ಪ್ರತಿಧ್ವನಿ
April 13, 2026
0

ಬೆಂಗಳೂರು : ಮಹತ್ವದ ಬೆಳವಣಿಗೆಯೊಂದರಲ್ಲಿ ದಾವಣಗೆರೆಯ ಹರಿಹರ ಪಂಚಮಸಾಲಿ ಗುರು ಪೀಠದಿಂದ ಶ್ವಾಸಗುರು ವಚನಾನಂದ ಸ್ವಾಮೀಜಿಯವರನ್ನು ಉಚ್ಚಾಟಿಸಲಾಗಿದೆ. ಇಂದು ಸಭೆ ಸೇರಿದ್ಧ ಧರ್ಮ ದರ್ಶಿ ಮಂಡಳಿಯ 15 ಸದಸ್ಯರ...

Read moreDetails
ಅನಗತ್ಯ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ : ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್‌ ವಾರ್ನ್..!

ಅನಗತ್ಯ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ : ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್‌ ವಾರ್ನ್..!

April 13, 2026
ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

April 13, 2026
ಕೈ ಶಾಸಕರ ದೆಹಲಿ ಯಾತ್ರೆ : ಹೈಕಮಾಂಡ್‌ ಭೇಟಿಯ ಹಿಂದೆ ಯಾರ ಕೈವಾಡ.? ಸಂಪುಟ ವಿಸ್ತರಣೆಯಾದ್ರೆ ಯಾರಿಗೆಲ್ಲ ಮಂತ್ರಿಗಿರಿ..?

ಕೈ ಶಾಸಕರ ದೆಹಲಿ ಯಾತ್ರೆ : ಹೈಕಮಾಂಡ್‌ ಭೇಟಿಯ ಹಿಂದೆ ಯಾರ ಕೈವಾಡ.? ಸಂಪುಟ ವಿಸ್ತರಣೆಯಾದ್ರೆ ಯಾರಿಗೆಲ್ಲ ಮಂತ್ರಿಗಿರಿ..?

April 13, 2026
ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

April 13, 2026
Next Post
ಬಿಜೆಪಿ ಎರಡನೇ ಪಟ್ಟಿಗೆ ಕೌಂಟ್ಡೌನ್  ! ಆಕಾಂಕ್ಷಿಗಳ ಎದೆಯಲ್ಲಿ ಢವಢವ ! 

ಬಿಜೆಪಿ ಎರಡನೇ ಪಟ್ಟಿಗೆ ಕೌಂಟ್ಡೌನ್  ! ಆಕಾಂಕ್ಷಿಗಳ ಎದೆಯಲ್ಲಿ ಢವಢವ ! 

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada