ಮೈಸೂರು (Mysuru): ಶಿವರಾತ್ರಿ (shivaratri) ದಿನದಂದೇ ಮೈಸೂರಲ್ಲಿ ಮಾಜಿ ಕಾರ್ಪೊರೇಟರ್ ಸಹೋದರನ ಭೀಕರ ಹತ್ಯೆಯಾಗಿದೆ (Murder).
ಅಕ್ಮಲ್ (Akmal) ಕೊಲೆಯಾದ ದುರ್ದೈವಿ. ಕಾಂಗ್ರೆಸ್ ಪಕ್ಷದ ಮಹಾನಗರ ಪಾಲಿಕೆ ಮಾಜಿ ಸದಸ್ಯ ಅಯಾಜ್ ಪಾಷಾ (Ajaz pasha) ಅಲಿಯಾಸ್ ಪಂಡು ಸಹೋದರನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಎಸ್‌ಡಿಪಿಐನಲ್ಲಿ ಗುರುತಿಸಿಕೊಂಡಿದ್ದ ಮೃತ ಅಕ್ಮಲ್, ಸೋಷಿಯಲ್ ಮಿಡಿಯಾದಲ್ಲಿ ಮಾಡಿದ್ದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಪೊಲೀಸರು (police) ವ್ಯಾಪಕ ಭದ್ರತೆ ಕೈಗೊಂಡಿರುವ ನಡುವೆಯೂ ನಡೆದಿರುವ ಕೊಲೆಯಿಂದ ಮೈಸೂರು ಬೆಚ್ಚಿಬಿದ್ದಿದೆ.
ಅಕ್ಮಲ್ ಕೊಲೆಯಾದ ಸುದ್ದಿ ತಿಳಿದು ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ.
ಮೈಸೂರಿನ ಉದಯಗಿರಿಯ (udayagiri) ಮಾದೇಗೌಡ ವೃತ್ತದ ಸಮೀಪ ಘಟನೆ ನಡೆದಿದೆ. 5ಕ್ಕೂ ಹೆಚ್ಚು ಮಂದಿ ಗುಂಪಾಗಿ ಬಂದು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರು ಮೂಲದ ವ್ಯಕ್ತಿಗಳಿಂದ ಕೊಲೆ ನಡೆದಿರುವ ಅನುಮಾನ ಮೂಡಿದೆ.
ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೊಲೆಗಡುಕರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
#karnataka #mysuru #muder #formercorporator #police






