ಈಗಿನ ದುನಿಯಾದಲ್ಲಿ ಪ್ರತಿಯೊಬ್ಬರ ಬಳಿಯೂ ‘ಕ್ರೆಡಿಟ್ ಕಾರ್ಡ್’ ಇದ್ದೇ ಇರುತ್ತದೆ. ಹೀಗೆ ಸಿಗುವ ಕ್ರೆಡಿಟ್ ಕಾರ್ಡ್ ಅನ್ನ ಕೆಲವರು ಸೂಕ್ತವಾಗಿ ಬಳಸಿ ಲಾಭ ಪಡೆಯುತ್ತಾರೆ. ಇನ್ನೂ ಕೆಲವರು ಕ್ರೆಡಿಟ್ ಕಾರ್ಡ್ ಬಳಸುವ ವಿಧಾನದಲ್ಲೇ ತಪ್ಪು ಮಾಡಿ ದಂಡ ಕಟ್ಟುತ್ತಾರೆ. ಈಗ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಆರ್‌ಬಿಐ ಈ ಸಿಹಿಸುದ್ದಿ ನೀಡಿ, ಕ್ರೆಡಿಟ್ ಕಾರ್ಡ್ ಬಳಕೆಗೆ ಹೊಸ ನಿಯಮ ಪ್ರಕಟ ಮಾಡಿದೆ.

ರಿಸರ್ವ್ ಬ್ಯಾಂಕ್ ಹೊಸ ಮಾರ್ಗಸೂಚಿ ಪ್ರಕಾರ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ನೀಡುವ ಸಮಯದಲ್ಲಿ ಅರ್ಹ ಗ್ರಾಹಕರಿಗೆ ಒಂದಕ್ಕಿಂತ ಹೆಚ್ಚು ಕಾರ್ಡ್ ನೆಟ್‌ವರ್ಕ್‌ಗಳ ಆಯ್ಕೆ ನೀಡುವುದು ಕಡ್ಡಾಯ ಎಂದು ಸೂಚನೆ ನೀಡಿದೆ. ಇದು ಭಾರತದಲ್ಲಿ ‘ಕ್ರೆಡಿಟ್ ಕಾರ್ಡ್’ ವಿಚಾರದಲ್ಲಿ ಹೊಸ ಅಲೆಯನ್ನೇ ಎಬ್ಬಿಸುವ ನಿರೀಕ್ಷೆ ಇದೆ.

ರಿಸರ್ವ್ ಬ್ಯಾಂಕ್ ಹೊಸ ಮಾರ್ಗಸೂಚಿ ಪ್ರಕಾರ ಇನ್ಮುಂದೆ ಗ್ರಾಹಕರು ತಮಗೆ ಬೇಕಾದ ನೆಟ್‌ವರ್ಕ್‌ನಿಂದ ಕಾರ್ಡ್ ಪಡೆಯಲು ಸಾಧ್ಯವಾಗುತ್ತೆ. ಈ ಮೂಲಕ ಕಾರ್ಡ್ ವಿತರಕರು ಮತ್ತು ನೆಟ್‌ವರ್ಕ್‌ಗಳ ಜೊತೆ ಒಪ್ಪಂದ ಮಾಡಿಕೊಳ್ಳಬಾರದು ಎಂದು ಸೂಚನೆ ಕೂಡ ನೀಡಿ ಭಾರತದ ರಿಸರ್ವ್ ಬ್ಯಾಂಕ್ ಆದೇಶ ಹೊರಡಿಸಿದೆ. ಈಗಾಗಲೇ ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇದ್ರೆ ನವೀಕರಣ ಮಾಡುವಾಗ ತಮ್ಮ ನೆಟ್‌ವರ್ಕ್ ಬದಲಾಯಿಸಲು ಅವಕಾಶ ಕಲ್ಪಿಸಲಾಗಿದೆ.

ಈಗಿನ ಅಂಕಿ ಅಂಶದ ಮಾಹಿತಿ ಪ್ರಕಾರ ಭಾರತದಲ್ಲಿ 2023ರ ಡಿಸೆಂಬರ್‌ವರೆಗೆ 9.79 ಕೋಟಿ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಆರ್‌ಬಿಐ ಅಂಕಿ ಅಂಶಗಳನ್ನು ಗಮನಿಸಿದರೆ ಈ ಮಾಹಿತಿ ತಿಳಿಯುತ್ತದೆ. ಈ ಪೈಕಿ ಶೇಕಡಾ 70 ರಷ್ಟು ಕಾರ್ಡ್‌ಗಳ ಹೆಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ವಿತರಿಸಿವೆ. ಮುಂದಿನ ದಿನಗಳಲ್ಲಿ ಆರ್‌ಬಿಐ ಹೊಸ ನಿಯಮದಿಂದ ಸಾಕಷ್ಟು ಬದಲಾವಣೆ ಆಗಬಹುದು.






