ಮೈಸೂರು (Mysuru): ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಸೆಸ್ಕ್ ( CESC)ಅಧಿಕಾರಿಗಳು ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದಾರೆ.
ವಿದ್ಯುತ್ ಸಂಪರ್ಕ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸೆಸ್ಕ್ನ ಎಇ ಜಿ.ಹರೀಶ್, ಜೂನಿಯರ್ ಲೈನ್ಮನ್ ಗುಂಡಪ್ಪ ಲೋಕಾಯುಕ್ತ ಬಲೆಗೆ ಬಿದ್ದವರು.
ಬೆಂಗಳೂರು ಮೂಲದ ಅಭಿಷೇಕ್ ಅವರು ಮೈಸೂರು ನಗರದಲ್ಲಿ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿದ್ದರು. ಈ ವೇಳೆ ಎಇ ಹರೀಶ್ ಅವರು 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಅಭಿಷೇಕ್ ಅವರು ಲೋಕಾಯುಕ್ತ ಪೊಲೀಸರಿಗೆ (Lokayukta Police) ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಕುವೆಂಪುನಗರದಲ್ಲಿರುವ ಸೆಸ್ಕ್ನ ಉಪ ವಿಭಾಗದ ಕಚೇರಿಯಲ್ಲಿ ಗುರುವಾರ ಸಂಜೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಎಇ ಜಿ.ಹರೀಶ್ ಹಾಗೂ ಅವರ ಪರವಾಗಿ ಮಾತನಾಡಿದ ಲೈನ್ಮನ್ ಗುಂಡಪ್ಪ ಅವರನ್ನು ಬಂಧಿಸಿ, ಹಣವನ್ನು ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಎಸ್ಪಿ ವಿ.ಜೆ.ಸಜೀತ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ವಿ.ಕೃಷ್ಣಯ್ಯ, ಇನ್ಸ್ಪೆಕ್ಟರ್ಗಳಾದ ಉಮೇಶ್, ಜಯರತ್ನ, ಸಿಬ್ಬಂದಿ ಗುರುಪ್ರಸಾದ್, ವೀರಭದ್ರ ಸ್ವಾಮಿ, ಕಾಂತರಾಜು,ಆಶಾ, ತ್ರಿವೇಣಿ, ಮೋಹನ, ಪ್ರದೀಪ ಇದ್ದರು.
#karnataka #mysuru #bribe #CESC #lokayukta #lokayuktapolice






