ಬೆಳಗಾವಿ- ಅಂಬೇಡ್ಕರ್ ಪುಣ್ಯತಿಥಿ ಅಂಗವಾಗಿ ಬೆಳಗಾವಿಯ ಸುವರ್ಣಸೌಧದ ಆವರಣದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಸಿಎಂ ಸಿದ್ದರಾಮಯ್ಯ ನಮನ ಸಲ್ಲಿಸಿದ್ರು. ಸಿದ್ದರಾಮಯ್ಯ ಸ್ಥಳಕ್ಕೆ ಬರುವ ಮುನ್ನ ಮಾಜಿ ಸಿಎಂ ಕುಮಾರಸ್ವಾಮಿ ಕಾರಿನಲ್ಲಿ ಬಂದಿದ್ರು. ಆದ್ರೆ ಇದೇ ವೇಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರು ಅಲ್ಲಿಗೆ ಬರುತ್ತಿದ್ದಂತೆಯೇ, ಶಿಷ್ಟಾಚಾರಕ್ಕನುಗುಣವಾಗಿ ಕುಮಾರಸ್ವಾಮಿ ಕಾರನ್ನು ಪೊಲೀಸರು ತಡೆದು ನಿಲ್ಲಿಸಿದ್ರು.
ಇನ್ನು ಸಿಎಂ ಸಿದ್ದರಾಮಯ್ಯ ಅಂಬೇಡ್ಕರ್ ಪುತ್ಥಳಿಗೆ ಗೌರವನಮನ ಸಲ್ಲಿಸಿ ತೆರಳುವವರೆಗೂ ಕುಮಾರಸ್ವಾಮಿ ಕಾರಿನಲ್ಲಿಯೇ ಕಾದು ಕುಳಿತಿದ್ರು. ಸಿಎಂ ಸ್ಥಳದಿಂದ ತೆರಳಿದ ಬಳಿಕ ಕುಮಾರಸ್ವಾಮಿ ಸಂವಿಧಾನ ಶಿಲ್ಪಿಯ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದ್ರು.











