ರಾಜ್ಯಾದ್ಯಾಂತ ಕಾವೇರಿ ವಿಚಾರ ಸಾಕಷ್ಟು ಬಿಸಿಯನ್ನು ಹುಟ್ಟು ಹಾಕಿದೆ. ಈ ಬೆನ್ನಲ್ಲೇ ಚಿತ್ರ ನಟರು ಸಹ ಕಾವೇರಿ ಹೋರಾಟಕ್ಕೆ ಧುಮುಕಿದ್ದಾರೆ. ಹಿಂದಿನಿಂದಲೂ ಕಾವೇರಿ ವಿಚಾರವಾಗಿ ಧ್ವನಿ ಎತ್ತುತ್ತಾ ಬಂದಿರುವ ನಟ ಜಗ್ಗೇಶ್, ಇವತ್ತು ಕರ್ನಾಟಕ ಬಂದ್ ಸಮಯದಲ್ಲಿ ಎಲ್ಲೂ ಸಹ ಕಾಣಿಸಿಕೊಂಡಿಲ್ಲ. ಆದ್ರೆ ಇದಕ್ಕೆ ಇಂಬು ಕೊಡುವಂತೆ ಇದೀಗ ಕೆಲವೊಂದಿಷ್ಟು ಆಸ್ಪತ್ರೆಯಲ್ಲಿರುವ ಅವರ ಪೋಟೋಗಳು ಎಲ್ಲರ ಆತಂಕ್ಕೂ ಕಾರಣವಾಗಿವೆ. ಆವರು ಎಲ್ಲಿದ್ದಾರೆ, ಯಾವ ಆಸ್ಪತ್ರೆಯಲ್ಲಿದ್ದಾರೆ..? ಯಾಕೆ ಆಸ್ಪತ್ರೆಯಲ್ಲಿದ್ದಾರೆ..? ಏನಾಯ್ತು ಎನ್ನುವ ಆತಂಕ ಇದೀಗ ಅಭಿಮಾನಿಗಳನ್ನ ಕಾಡಲಾರಂಭಿಸಿದೆ. ಈ ಪೋಟೊಗಳ ಕುರಿತು ಸಾಕಷ್ಟು ಮಾಹಿತಿ ಇನ್ನು ಲಭ್ಯವಾಗಿಲ್ಲ..
2
3
4