ಕೆಲವೊಮ್ಮೆ ಜಗತ್ತಿನಲ್ಲಿ ನಂಬಲಾಗದ ಅಚ್ಚರಿಯ ಘಟನೆಗಳು ಆಗಾಗ ನಡೆಯುತ್ತಿರುತ್ತವೆ ಇಂತಹ ಘಟನೆಗಳನ್ನು ಕೇಳಿದಾಗಲೋ ನೋಡಿದಾಗಲೋ ಅಳಬೇಕು ನಗಬೇಕು ಎಂಬುವುದು ಬಹುತೇಕರಿಗೆ ಗೊತ್ತಾಗುವುದೇ ಇಲ್ಲ ಇದೀಗ ಇಂತಹದ್ದೇ ಒಂದು ವಿಚಿತ್ರವಾದ ಘಟನೆ ಅಮೆರಿಕದ ಡೆಲವೇರ್‌ನ ವಿಲಿಂಗ್ಟನ್‌ನಲ್ಲಿ ನಡೆದಿದೆ.
ಪತ್ರಿಕೋದ್ಯಮದಲ್ಲಿ ಅದೊಂದು ಗಾದೆ ಇದೆ ನಾಯಿ ಮನುಷ್ಯನಿಗೆ ಕಚ್ಚಿದರೆ ಅದು ಸುದ್ದಿಯಾಗುವುದಿಲ್ಲ ಆದರೆ ಮನುಷ್ಯ ನಾಯಿಗೆ ಕಚ್ಚಿದರೆ ಅದು ಸುದ್ದಿಯಾಗುತ್ತದೆ. ಇತ್ತೀಚಿಗೆ ಈ ಗಾದೆಗೆ ಪೂರಕವಾಗಿರುವ ಘಟನೆ ಅಮೆರಿಕದಲ್ಲಿ ನಡೆದಿದೆ ಹೌದು, ಅಮೆರಿಕದ ವ್ಯಕ್ತಿ ಒಬ್ಬ ನಾಯಿಗೆ ಕಚ್ಚಿದ್ದು ಆತ ಜೈಲು ಪಾಲಾಗಿದ್ರೆ ಇತ್ತ ಕಡೆ ಮನುಷ್ಯನಿಂದ ಕಚ್ಚಿಸಿಕೊಂಡ ನಾಯಿ ಇದೀಗ ಆಸ್ಪತ್ರೆ ಸೇರಿದೆ

ಈ ಕುರಿತು ವರದಿ ಮಾಡಿರುವ ನ್ಯೂ ಯಾರ್ಕ್ ಪೋಸ್ಟ್ ಘಟನೆ ಕುರಿತು ವಿಸ್ತೃತವಾಗಿ ಮಾಹಿತಿಯನ್ನು ನೀಡಿದೆ. ಈ ಘಟನೆ ಜುಲೈ 8ರಂದು ನಡೆದಿದ್ದು ಈಗ ಈ ವಿಚಾರ ಸಾಮಾಜಿಕ ಜಾಲತಾಣ ಸೇರಿದ ಹಾಗೆ ವಿವಿಧ ವೇದಿಕೆಗಳಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ, ಅಸಲಿಗೆ ಈತ ನಾಯಿಯನ್ನು ಕಚ್ಚುವುದಕ್ಕೂ ಕೂಡ ಕಾರಣವಿದ್ಯಂತೆ, ಈತ ಅತೀ ವೇಗವಾಗಿ ಕಾರು ಚಲಾಯಿಸಿದ್ದಾನೆ, ಈ ವೇಳೆ ಪೊಲೀಸರು ಆತನನ್ನು ತಡೆದಿದ್ದಾರೆ. ಇಂತಹ ಸಂದರ್ಭದಲ್ಲಿ ಆತನ ಹಿಡಿಯಲು ನೆರವಾದ ಇಬ್ಬರು ಸೈನಿಕರ ಮೇಲೆ ಹಲ್ಲೆ ನಡೆಸಿದ್ದು ಬಳಿಕ ಈತನನ್ನು ಹಿಡಿಯಲು ಬಂದ ಪೊಲೀಸ್ ನಾಯಿಯನ್ನು ಹಲವು ಬಾರಿ ಈತನೇ ಕಚ್ಚಿ ನಾಯಿಯನ್ನು ಓಡಿಸಲು ಪ್ರಯತ್ನಿಸಿದ್ದಾನೆ,
ಇನ್ನು ಈತನ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಕೆಲಕಾಲ ಈತನನ್ನ ಜೈಲಿಗೆ ಕೂಡ ಕಳುಹಿಸಿದ್ದಾರೆ ತದನಂತರ 34,200 ಅಂದರೆ ಭಾರತೀಯ ಮೌಲ್ಯದಲ್ಲಿ 28 ಲಕ್ಷ ರೂಪಾಯಿ ಮೌಲ್ಯದ ಬಾಂಡ್ ನೊಂದಿಗೆ ಈತನನ್ನ ಬಿಡುಗಡೆ ಮಾಡಲಾಗಿದೆ ಇನ್ನು ಈತನಿಂದ ಕಚ್ಚಿಸಿಕೊಂಡ ನಾಯಿ ಯಾವುದೇ ಪ್ರಾಣಪಾಯ ಇಲ್ಲದೆ ಚೇತರಿಸಿಕೊಳ್ಳುತ್ತಿದೆ ಎಂದು ವೈದ್ಯರು ಹೇಳಿದ್ದಾರಂತೆ






