ಮೆಟಾ ಮಾಲೀಕತ್ವದ ಫೋಟೋ ಶೇರಿಂಗ್ ಅಪ್ಲಿಕೇಶನ್ ಆಗಿರುವ ಇನ್ಸ್ಟಾಗ್ರಾಂ ಇಂದು ಬೆಳಗ್ಗೆ ಸಮಸ್ಯೆಯನ್ನು ಎದುರಿಸಿದೆ. ಕೋಟ್ಯಂತರ ಬಳಕೆದಾರರನ್ನು ಹೊಂದಿರುವ ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರಂನಲ್ಲಿ ಫೋಟೋಗಳನ್ನು ಶೇರ್ ಮಾಡುವಲ್ಲಿ, ರೀಲ್ಸ್ ನೋಡುವಲ್ಲಿ ಬಳಕೆದಾರರು ಸಮಸ್ಯೆ ಎದುರಿಸಿದ್ದಾರೆ.

ಇನ್ಸ್ಟಾಗ್ರಾಂ ಡೌನ್ ಆಗಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಟ್ವಿಟರ್ನಲ್ಲಿ ಸಾಕಷ್ಟು ತಮಾಷೆಯ ಮೀಮ್ಸ್ಗಳು ತೇಲಾಡಿವೆ.
ಔಟೇಟ್ ಟ್ರ್ಯಾಕಿಂಗ್ ವೆಬ್ಸೈಟ್ ಡೌನ್ ಡೆಕ್ಟರ್ ನೀಡಿರುವ ಮಾಹಿತಿಯ ಪ್ರಕಾರ ಶುಕ್ರವಾರ ಮುಂಜಾನೆ ವಿಶ್ವಾದ್ಯಂತ ಸಾವಿರಾರು ಇನ್ಸ್ಟಾಗ್ರಾಂ ಬಳಕೆದಾರರು ಸಮಸ್ಯೆಯನ್ನು ಎದುರಿಸಿದ್ದಾರೆ ಎನ್ನಲಾಗಿದೆ.






