ಬೆಳಗಾವಿ : ರಾಜ್ಯಕ್ಕೆ ನೂತನ ಸಿಎಂ ಆಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ ಆಯ್ಕೆಯಾಗಿದ್ದಾರೆ. ಈ ವಿಚಾರವಾಗಿ ಇಂದು ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು ಡಿಕೆ ಶಿವಕುಮಾರ್ರನ್ನು ಸಮಾಧಾನ ಪಡಿಸಲು ಹಾಗೂ ಗೌರವ ನೀಡುವ ಉದ್ದೇಶದಿಂದ ಈ ಸ್ಥಾನವನ್ನು ನೀಡಿರಬಹುದು ಎಂದು ಹೇಳಿದ್ದಾರೆ .

ಉಪ ಮುಖ್ಯಮಂತ್ರಿ ಹುದ್ದೆಗೆ ಸಾಂವಿಧಾನಿಕವಾಗಿ ಯಾವುದೇ ಮಾನ್ಯತೆ ಇರೋದಿಲ್ಲ. ಅದಕ್ಕೆ ಹೆಚ್ಚಿನ ಪವರ್ ಅಂತಲೂ ಏನು ಇರೋದಿಲ್ಲ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಡಿಕೆಶಿ ಶ್ರಮಿಸಿದ್ದಾರೆ. ಹೀಗಾಗಿ ಅವರಿಗೆ ಗೌರವಾರ್ಥವಾಗಿ ಈ ಹುದ್ದೆ ನೀಡಿರಬಹುದು ಎಂದಿದ್ದಾರೆ.
ಈ ಬಾರಿ ಸಚಿವ ಸಂಪುಟದಲ್ಲಿ ಯಾರಿಗೆ ಸ್ಥಾನವಿದೆ ಎಂಬುದರ ಬಗ್ಗೆ ನನಗೆ ಮಾಹಿತಿಯಿಲ್ಲ. ನನಗೆ ಜನಪರ ಖಾತೆಯನ್ನು ಕೊಟ್ಟರೆ ಹೆಚ್ಚು ಖುಷಿ ಎಂದು ಹೇಳಿದ್ದಾರೆ






