ಬೆಂಗಳೂರು : ಮಾ.27: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೇ ದ್ವೇಷದ ದಂಗಲ್ ಆರಂಭವಾಗಿದೆ. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿ ಮುಖಂಡರು ವೈಯಕ್ತಿಕವಾಗಿ ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆರ್ ಆರ್ ನಗರದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡಿದ್ದಕ್ಕೆ ರೇಷ್ಮಾ ಎಂಬ ಕಾಂಗ್ರೆಸ್ ಕಾರ್ಯಕರ್ತೆಯ ಮನೆ ಖಾಲಿ ಮಾಡಿಸುವಂತೆ ಮನೆ ಮಾಲೀಕರ ಮೇಲೆ ಒತ್ತಡ ಹೇರಿದ್ದಾರೆ. ರೇಷ್ಮಾ ಅವರನ್ನು ಸಾರ್ವಜನಿಕರ ಎದುರೇ ಒದ್ದ ಬಿಜೆಪಿ ಮುಖಂಡರಾದ ಸುನಂದಮ್ಮ. ಜೆ.ಪಿ.ಪಾರ್ಕ್ ವಾರ್ಡಿನ ಬಿಜೆಪಿ ಲೀಡರ್ ಸುನಂದಮ್ಮ, ಸಚಿವ ಮುನಿರತ್ನ ಕುಮ್ಮಕ್ಕಿನಿಂದ ಕಾಂಗ್ರೆಸ್ ಕಾರ್ಯಕರ್ತರ ಮನೆಗಳ ಮೇಲೆ ದಾಳಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ. ವೈಯಕ್ತಿಕ ತೇಜೋವಧೆ, ಧರ್ಮನಿಂದನೆ ಆರೋಪದ ಮೇಲೆ ಸುನಂದಮ್ಮ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.