• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, July 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಜನರ ಮುಂದೆ ಕಣ್ಣೀರು ಸುರಿಸುವುದನ್ನೇ ವೋಟ್ ಬ್ಯಾಂಕ್ ಮಾಡಿಕೊಂಡಿದ್ದಾರೆ: ರಮೇಶ್ ಕುಮಾರ್ ವಿರುದ್ಧ ಜಿ.ಕೆ. ವೆಂಕಟಶಿವಾರೆಡ್ಡಿ ಕಿಡಿ

ಪ್ರತಿಧ್ವನಿ by ಪ್ರತಿಧ್ವನಿ
March 4, 2023
in ರಾಜಕೀಯ
0
ಜನರ ಮುಂದೆ ಕಣ್ಣೀರು ಸುರಿಸುವುದನ್ನೇ ವೋಟ್ ಬ್ಯಾಂಕ್ ಮಾಡಿಕೊಂಡಿದ್ದಾರೆ: ರಮೇಶ್ ಕುಮಾರ್ ವಿರುದ್ಧ ಜಿ.ಕೆ. ವೆಂಕಟಶಿವಾರೆಡ್ಡಿ ಕಿಡಿ
Share on WhatsAppShare on FacebookShare on Telegram

ಕೋಲಾರ: ನಾನು ಬಡವ ಎಂದು ಜನರ ಮುಂದೆ ಕಣ್ಣೀರು ಸುರಿಸುವುದನ್ನೇ ವೋಟ್ ಬ್ಯಾಂಕ್ ಮಾಡಿಕೊಂಡಿದ್ದಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಜೆಡಿಎಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಗುಡುಗಿದರು.

ADVERTISEMENT

ಶ್ರೀನಿವಾಸಪುರ ತಾಲೂಕಿನ ಮೀಸಗಾನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿದ ವೆಂಕಟ ಶಿವಾರೆಡ್ಡಿ ಅವರು, ಎರಡು ಬಾರಿ ಸ್ಪೀಕರ್ ಆಗಿ, ಮಂತ್ರಿಯಾಗಿದ್ದ ಶಾಸಕ ಕೆ.ಆರ್. ರಮೇಶ್ ಕುಮಾರ್ ಅವರೇ ಶ್ರೀನಿವಾಸಪುರ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು? ನನ್ನ ಅವಧಿಯಲ್ಲಿಯೇ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ. ನಿಮಗೆ ಬಡವರಿಗೆ ಸಹಾಯ ಮಾಡಬೇಕೆಂಬ ಮನಸ್ಸಿಲ್ಲ. ಈಗ 10 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಸಹ ಕ್ಷೇತ್ರದಲ್ಲಿ  ಇದುವರೆಗೂ ಒಂದು ಬೋರ್ ವೆಲ್ ಕೊರೆಸಿಲ್ಲ, ಬಡವರಿಗೆ ಒಂದು ಲೋನ್ ಸಹ ಕೊಟ್ಟಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಮಹಿಳೆಯರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ:

ರಮೇಶ್ ಕುಮಾರ್ ಅವರು ಜೀವನದಲ್ಲಿ ಒಂದೇ ಒಂದು ಸತ್ಯ ಹೇಳಿದ್ದಾರೆ. ಅದೇನೆಂದರೆ ನಾಲ್ಕೈದು ತಲೆಮಾರುಗಳಿಗಾಗುವಷ್ಟು ನಾವು ಮಾಡಿಕೊಂಡಿದ್ದೇವೆ. ಹಾಗಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಋಣ ತೀರಿಸಬೇಕು ಅಂತ ಅವರು ಹೇಳಿದ್ದಾರೆ. ಆಗ ಇವರನ್ನು ಪಕ್ಷದಿಂದ ತೆಗೆದುಹಾಕಿ ಅಂತ ಪ್ರಿಯಾಂಕಾ ಗಾಂಧಿ ಹೇಳಿದ್ದರು ಎಂದರು.

ಅಲ್ಲದೆ ಮಹಿಳೆಯರ ಬಗ್ಗೆಯೇ ಕೆಟ್ಟದಾಗಿ ಮಾತಾಡಿದ್ದಾರೆ. ಮಹಿಳೆಯರ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಇವರಿಗೆ? ರಮೇಶ್ ಕುಮಾರ್ ಎರಡು ಬಾರಿ ಸ್ಪೀಕರ್ ಆಗಿದ್ದವರು, ಸಚಿವರೂ ಆಗಿದ್ದವರು. ಆದರೂ ಸಹ ಬರೀ ಸುಳ್ಳು ಹೇಳುತ್ತಾರೆ. ಮಾತೆತ್ತಿದರೆ ಮಹಿಳೆಯರ ಸ್ತ್ರೀ ಶಕ್ತಿ ಸಂಘಗಳಿಗೆ ಲೋನ್ ನೀಡುವ ಮೂಲಕ ಸಹಾಯ ಮಾಡುತ್ತಿದ್ದೇನೆ ಎನ್ನುತ್ತಾರೆ. ರಮೇಶ್ ಕುಮಾರ್ ಗೂ ಸ್ತ್ರೀ ಶಕ್ತಿ ಸಂಘಗಳಿಗೂ ಯಾವುದೇ ಸಂಬಂಧ ಇಲ್ಲ. ಅದು ಕೇಂದ್ರದ ನಬಾರ್ಡ್ ಮೂಲಕ ಡಿಸಿಸಿ ಬ್ಯಾಂಕ್ ಗೆ ಬಂದು ಅದನ್ನು ಸೊಸೈಟಿಯ ಮೂಲಕ ಸ್ತ್ರೀ ಶಕ್ತಿ ಸಂಘಗಳ ಅಕೌಂಟ್ ಗೆ ನೀಡಲಾಗುತ್ತಿದೆ. ಇದರಲ್ಲೂ ಸಹ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸತ್ಯ ಹರಿಶ್ಚಂದ್ರರಂತೆ ಸದನದಲ್ಲಿ ಮಾತನಾಡುತ್ತಾರೆ:

ರಮೇಶ್ ಕುಮಾರ್ ಕೋಟ್ಯಾಂತರ ರೂ. ಹಣವನ್ನು ಅವರ ಸ್ವಂತಕ್ಕೆ ಉಪಯೋಗಿಸಿಕೊಂಡಿದ್ದಾರೆ. ಸರ್ಕಾರದಿಂದ ಬರುವ ಮನೆಗಳನ್ನು ಅವರ ಪಕ್ಷದವರಿಗೆ ಮಾತ್ರವೇ ಕೊಟ್ಟಿದ್ದಾರೆ. ಮನೆಗಳು ಇಲ್ಲದವರು ಟಾರ್ಪಲ್ ಹಾಕಿಕೊಂಡು ಜೀವನ ಮಾಡುತ್ತಿದ್ದಾರೆ. ಆದ್ರೂ ವಿಧಾನಸಭೆಯಲ್ಲಿ ಸತ್ಯ ಹರಿಶ್ಚಂದ್ರ ರೀತಿ ಗುಡಿಸಲು ಮುಕ್ತ ತಾಲೂಕು ಮಾಡುತ್ತೇನೆಂದು ಭಾಷಣ ಮಾಡುತ್ತಾರೆ ಎಂದು ಹರಿಹಾಯ್ದರು.

ವೆಂಕಟಶಿವಾರೆಡ್ಡಿ ತಲೆ ಬಾಚ್ಕೋತಾರೆ ಅಂತಾರೆ. ನನಗೆ ಕೂದಲಿದೆ ತಲೆ ಬಾಚುತ್ತೇನೆ, ಅವರಿಗೆ ಕೂದಲಿಲ್ಲ ಏನು ಮಾಡೋಕೆ ಆಗುತ್ತೆ?. ನಾನು ರಮೇಶ್ ಕುಮಾರ್ ತರ ಕಳ್ಳ ಅಲ್ಲ‌. ಕಷ್ಟ ಪಟ್ಟು ದುಡಿದ ಹಣದಲ್ಲಿ ಒಳ್ಳೆಯ ಬಟ್ಟೆ ಕೊಳ್ಳುತ್ತೇನೆ. ಅವರು ಬಡವರ ರಕ್ತ ಹೀರಿ ಬದುಕುತ್ತಿದ್ದಾರೆ. ಯಾಕೆ ಇಂತಹ ಜೀವನ ಮಾಡುತ್ತೀರ ಎಂದು ವ್ಯಂಗ್ಯವಾಡಿದರು.

ಈ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಕಾಡದೇವಂಡಹಳ್ಳಿ ರಾಮಚಂದ್ರೇಗೌಡ, ಕೆಎಂಎಫ್ ಮಾಜಿ ನಿರ್ದೇಶಕ ಪಾಳ್ಯ ಬೈರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಮೀಸಗಾನಹಳ್ಳಿ ವೆಂಕಟರೆಡ್ಡಿ, ಬಿ.ಎ.ಶಿವಾರೆಡ್ಡಿ, ಗೋಪಾಲಗೌಡ, ದಳಸನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಬು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags: Congress PartyJDS Karnatakaಜಿ.ಕೆ. ವೆಂಕಟಶಿವಾರೆಡ್ಡಿರಮೇಶ್ ಕುಮಾರ್
Previous Post

ಮಂಗಳೂರು : ದುಷ್ಕರ್ಮಿಗಳಿಂದ ಯುವಕನಿಗೆ ಚೂರಿ ಇರಿತ

Next Post

ಮೈಸೂರು : ಸರ್ಕಾರಿ ಶಾಲೆಯ ಮಕ್ಕಳಿಂದ ಪೌರಾಣಿಕ ನಾಟಕ ಪ್ರದರ್ಶನ!

Related Posts

ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿಗೆ ಸಿಎಂ ಡಿ.ಕೆ ಶಿವಕುಮಾರ್ ಪತ್ರ
Top Story

ಅಪಾರ್ಟ್ಮೆಂಟ್‌ ನಿವಾಸಿಗಳ ಹಕ್ಕು ರಕ್ಷಣೆಗೆ ಸರ್ಕಾರ ಬದ್ಧ: ಸಿಎಂ ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
July 15, 2026
0

ಬೆಂಗಳೂರು: ಅಪಾರ್ಟ್ ಮೆಂಟ್ ನಿವಾಸಿಗಳ ಹಕ್ಕು ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಸಮಸ್ಯೆಗಳ ಮುಕ್ತಿಗೆ ನಮ್ಮ ಸರ್ಕಾರ ಹೆಜ್ಜೆ ಇಟ್ಟಿದೆ. ಏಕಪಕ್ಷೀಯ ನಿರ್ಧಾರ ನಮ್ಮ ಧೋರಣೆಯಲ್ಲ. ಆಸ್ತಿಯನ್ನು ನೀವು...

Read moreDetails
Bidadi Township: ವಿರೋಧದ ಮಧ್ಯೆ ಟೌನ್​ಶಿಪ್ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಬಿಡುಗಡೆ

Bidadi Township: ವಿರೋಧದ ಮಧ್ಯೆ ಟೌನ್​ಶಿಪ್ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಬಿಡುಗಡೆ

July 15, 2026
ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿಗೆ ಸಿಎಂ ಡಿ.ಕೆ ಶಿವಕುಮಾರ್ ಪತ್ರ

Bidadi Township: ‘ಬಲವಂತ ಇಲ್ಲ’..ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಸಿಎಂ ಮಹತ್ವದ ನಿರ್ಧಾರ

July 15, 2026
ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿಗೆ ಸಿಎಂ ಡಿ.ಕೆ ಶಿವಕುಮಾರ್ ಪತ್ರ

ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿಗೆ ಸಿಎಂ ಡಿ.ಕೆ ಶಿವಕುಮಾರ್ ಪತ್ರ

July 15, 2026
Chikkamagaluru: ಚಿಕ್ಕಮಗಳೂರಿನಲ್ಲಿ ಬೃಹತ್‌ ಬ್ಯಾಂಕ್‌ ಹಗರಣ: ಬಡವರ ಖಾತೆ ಬಳಸಿ ಕೋಟಿ..ಕೋಟಿ ಅಕ್ರಮ..!

Chikkamagaluru: ಚಿಕ್ಕಮಗಳೂರಿನಲ್ಲಿ ಬೃಹತ್‌ ಬ್ಯಾಂಕ್‌ ಹಗರಣ: ಬಡವರ ಖಾತೆ ಬಳಸಿ ಕೋಟಿ..ಕೋಟಿ ಅಕ್ರಮ..!

July 15, 2026
Next Post
ಮೈಸೂರು : ಸರ್ಕಾರಿ ಶಾಲೆಯ ಮಕ್ಕಳಿಂದ ಪೌರಾಣಿಕ ನಾಟಕ ಪ್ರದರ್ಶನ!

ಮೈಸೂರು : ಸರ್ಕಾರಿ ಶಾಲೆಯ ಮಕ್ಕಳಿಂದ ಪೌರಾಣಿಕ ನಾಟಕ ಪ್ರದರ್ಶನ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada