ಬೆಳಗಾವಿ: ಮುಗಳಖೋಡದ ಜಿಡ್ಗಾ ಮಠಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಪ್ಪಲಿ ಧರಿಸಿ ಬಂದ ಬೆನ್ನಲ್ಲೇ, 2023 ಚುನಾವಣೆಯಲ್ಲಿ ಬಿಜೆಪಿಗೆ ತಟ್ಟಲಿದೆಯಾ ಕರ್ಮ ಫಲ? ಎಂಬ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ.
ನಿನ್ನೆ ನಡೆದ ಮಾಳಿ ಮಾಲಗಾರ ಸಮಾವೇಶ ಸಮಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಗಳಖೋಡದ ಜಿಡ್ಗಾ ಮಠದಲ್ಲಿ ಚಪ್ಪಲಿ ಧರಿಸಿ ಬಂದಿದ್ದರು. ಇದರಿಂದಾಗಿ ಕೆಲಹೊತ್ತು ಗೊಂದಲದ ವಾತಾವರಣ ಸಹ ನಿರ್ಮಾಣವಾಗಿತ್ತು. ಈ ನಡುವೆ ಸಿಎಂ ಬೆಂಗಾವಲಿಗೆ ಬಂದಿದ್ದ ಪೋಲಿಸರು ಕೂಡ ಶೂ ಧರಿಸಿ ಬಂದಿರುವ ಫೋಟೊ ವೈರಲ್ ಆಗುತ್ತಿದೆ.

ಇವೆಲ್ಲದರ ನಡುವೆ ಜಿಡ್ಗಾ ಮಠಕ್ಕೆ ಮುಖ್ಯಮಂತ್ರಿಗಳು ಚಪ್ಪಲಿ ಧರಿಸಿ ಬಂದಿರುವುದರ ಕರ್ಮಫಲ ಬಿಜೆಪಿಗೆ ತಟ್ಟಲಿದೆ ಎಂಬ ಚರ್ಚೆ ಶುರುವಾಗಿದ್ದು, ಹಲವು ಊಹಾಪೋಹಗಳಿಗೂ ಸಹ ಈ ಘಟನೆ ಎಡೆ ಮಾಡಿಕೊಟ್ಟಿದೆ. ಅಲ್ಲದೇ ಮಠದೊಳಗೆ ಈವರೆಗೂ ಯಾವ ರಾಜಕಾರಣಿ ಸಹ ಚಪ್ಪಲಿ ಧರಿಸಿ ಬಂದಿರಲಿಲ್ಲ ಎಂದು ಹೇಳಲಾಗುತ್ತಿದೆ.






