ರಾಜಸ್ಥಾನ್ ರಾಯಲ್ಸ್ ತಂಡದ ಇಬ್ಬರು ಒಂದೇ ಎಸೆತದಲ್ಲಿ ಔಟಾದ ವಿಚಿತ್ರ ಘಟನೆ ಮಂಗಳವಾರ ನಡೆ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಜರುಗಿತು.
ಕೋಲ್ಕತಾದಲ್ಲಿ ನಡೆದ ಪಂದ್ಯದ ಕೊನೆಯ ಎಸೆತದಲ್ಲಿ ಈ ಘಟನೆ ನಡೆದಿದ್ದು, ರಾಜಸ್ಥಾನ್ ತಂಡದ ಜೋಸ್ ಬಟ್ಲರ್ ಮತ್ತು ರಿಯಾನ್ ಪರಾಗ್ ಔಟಾಗಿದ್ದಾರೆ.
ಗುಜರಾತ್ ಟೈಟಾನ್ಸ್ ತಂಡದ ಯುವ ವೇಗಿ ಯಶ್ ದಯಾಳ್ ಎಸೆದ ಇನಿಂಗ್ಸ್ ನ ಕೊನೆಯ ಓವರ್ ನ ಅಂತಿಮ ಎಸೆದ ಎಸೆತ ನೋಬಾಲ್ ಆಗಿತ್ತು. ಈ ಎಸೆತದಲ್ಲಿ ಇಲ್ಲದ 2ನೇ ರನ್ ಕದಿಯುವ ಆತುರದಲ್ಲಿ ಜೋಸ್ ಬಟ್ಲರ್ ಮುನ್ನುಗ್ಗಿದ್ದು, ರನೌಟ್ ಆದರು.

ನೋಬಾಲ್ ನಿಂದ ಫ್ರೀ ಹಿಟ್ ಸಿಕ್ಕಿದ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ರಿಯಾನ್ ಪರಾಗ್ ಚೆಂಡು ವೈಡ್ ಆಗಿದ್ದರೂ ವಿಕೆಟ್ ಕೀಪರ್ ಕೈಗೆ ಸಿಕ್ಕಿತು. ಇದರಿಂದ ಇಲ್ಲದ ರನ್ ಕದಿಯಲು ಮುನ್ನುಗ್ಗಿದ್ದರಿಂದ ಪರಾಗ್ ಮುನ್ನುಗ್ಗಿದ್ದರಿಂದ ಔಟಾದರು.
ಈ ಮೂಲಕ ಯಶ್ ದಯಾಳ್ ಎಸೆದ ಒಂದೇ ಎಸೆತ ಲೆಕ್ಕಕ್ಕೆ ಬಾರದೇ ಇದ್ದರೂ ಎರಡು ವಿಕೆಟ್ ಪಡೆದು ಮಿಂಚಿದರು.






